ಆಜಾದ್‌ರ ದೂರದೃಷ್ಟಿ ವಿಶ್ವವಿದ್ಯಾಲಯ, ಐಐಟಿಗಳ ಸ್ಥಾಪನೆಗೆ ಭದ್ರ ಬುನಾದಿ

KannadaprabhaNewsNetwork |  
Published : Nov 13, 2025, 04:15 AM IST

ಸಾರಾಂಶ

ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ ಮೌಲನಾ ಅಬುಲ್ ಕಲಮ್ ಆಜಾದ್‌ರ ವೈಜ್ಞಾನಿಕ ದೂರದೃಷ್ಟಿ ವಿಶ್ವವಿದ್ಯಾಲಯಗಳು, ಐಐಟಿಗಳ ಸ್ಥಾಪನೆಗೆ ಭದ್ರ ಬುನಾದಿಯಾಯಿತು ಎಂದು ಸಿಕ್ಯಾಬ್ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರಮನ್ ರಿಯಾಜ್ ಫಾರೂಖಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ ಮೌಲನಾ ಅಬುಲ್ ಕಲಮ್ ಆಜಾದ್‌ರ ವೈಜ್ಞಾನಿಕ ದೂರದೃಷ್ಟಿ ವಿಶ್ವವಿದ್ಯಾಲಯಗಳು, ಐಐಟಿಗಳ ಸ್ಥಾಪನೆಗೆ ಭದ್ರ ಬುನಾದಿಯಾಯಿತು ಎಂದು ಸಿಕ್ಯಾಬ್ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರಮನ್ ರಿಯಾಜ್ ಫಾರೂಖಿ ಅಭಿಪ್ರಾಯಪಟ್ಟರು.

ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಎ.ಆರ್.ಎಸ್.ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಪಡೆಯುವಲ್ಲಿ ಮಹಿಳೆಯರ ಪಾಲು ಅರ್ಧದಷ್ಟು ಇರಬೇಕೆಂದು 50ರ ದಶಕದಲ್ಲಿಯೇ ಅವರು ಪ್ರತಿಪಾದಿಸಿದರು. ಅದು ಇಂದು ಸಾಕಾರಗೊಳ್ಳುತ್ತಿದ್ದು, ನಿಜಕ್ಕೂ ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ ಎಂದರು.

ಬರೀ ಶಿಕ್ಷಣಕ್ಕಷ್ಟೆ ಮಹತ್ವ ಕೊಡದೇ ಶಿಕ್ಷಣದಲ್ಲಿ ಮಾನವೀಯತೆ ನೈತಿಕತೆ ಕೂಡ ಮುಖ್ಯವೆಂದು ಹೇಳುತ್ತಿದ್ದರು. ಆದರೆ, ಅವು ಇಂದಿನ ಶಿಕ್ಷಣದಲ್ಲಿ ಕಡಿಮೆಯಾಗುತ್ತಿರುವುದು ವಿಷಾದಕರ. ಇಂದಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಹೃದಯತೆ ಹಾಗೂ ವಿಮರ್ಶಾತ್ಮಕ ಆಲೋಚನೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಕೆ.ಯಡಹಳ್ಳಿ ಮಾತನಾಡಿ, ಯುಜಿಸಿ, ಐಐಟಿಗಳು ಹಾಗೂ ಕೇಂದ್ರಿಯ ಸಂಶೋಧನಾ ಸಂಸ್ಥೆಗಳು ಮೌಲಾನಾ ಆಜಾದ್ ಅವರು ಸ್ಥಾಪಿಸಿದ ಪ್ರಮುಖ ಸಂಸ್ಥೆಗಳಾಗಿವೆ. ಉನ್ನತ ಶಿಕ್ಷಣ ಪಡೆಯಲು ಇಂದು ಎಲ್ಲ ವರ್ಗದ ಜನರಿಗೆ ಸಾಧ್ಯವಾಗಿದೆ ಎಂದರು.ಪ್ರಾಧ್ಯಾಪಕ ಡಾ.ಮಹಮ್ಮದ್‌ ಸಮೀಯುದ್ದೀನ್, ಪ್ರೊ.ವಿದ್ಯಾವತಿ ಬೆನ್ನೂರ ಮೌಲಾನಾ ಆಜಾದರ ಸ್ವಾತಂತ್ರ್ಯ ಹೋರಾಟ, ಜೈಲುವಾಸ, ಪತ್ರಿಕೋದ್ಯಮ ಮುಂತಾದ ವಿಷಯಗಳ ಕುರಿತು ಉಪನ್ಯಾಸ ನೀಡಿದರು.‌‌ ವಿದ್ಯಾರ್ಥಿಗಳಾದ ಸಾನಿಯಾ ಮುಲ್ಲಾ, ಸುಹಾನಾ ಜಿಡಗೆ, ಶಿಲ್ಪಾ ಬಿರಾದಾರ, ಮುಜೀಬಾ, ಆಸ್ಮಾ ನಾಗರದಿನ್ನಿ ಮಾತನಾಡಿದರು. ಡಾಕ್ಟರೇಟ್ ಪದವಿ ಪಡೆದ ಸಿಕ್ಯಾಬ್ ಇಂಜನಿಯರಿಂಗ್ ಕಾಲೇಜಿನ ಡಾ.ಸ್ಯೆಯದ ಸಮೀರ್‌, ಡಾ.ವಸೀಮ್ ನಿಡಗುಂದಿ ಹಾಗೂ ಮಹಿಳಾ ಪದವಿ ಕಾಲೇಜಿನ ಗೃಹವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಅಜ್ಮಾ ಇನಾಮದಾರ, ಗಾಂಧಿ ವಿಚಾರಧಾರೆ ಸಂಸ್ಥೆಯ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದ ಕಾಲೇಜಿನ ವಿದ್ಯಾರ್ಥಿನಿಯರಾದ ಆಸ್ಮಾ ನಾಗರದಿನ್ನಿ, ಸೋನಾಲಿ ಹಾದಿಮನಿ ಮತ್ತು ಮಾರ್ಗದರ್ಶಕ ಡಾ.ಮುಸ್ತಾಕ ಅಹ್ಮದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾಲೇಜಿನ ಉಪಪ್ರಾಚಾರ್ಯೆ ಡಾ.ಹಾಜೀರಾ ಪರವೀನ್, ಸಾಂಸ್ಕೃತಿಕ ಚಟುವಟಿಕೆಗಳ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಮೇತ್ರಿ, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆಫ್ಸಾ ಸಾಂಗ್ಲೀಕರ ಉಪಸ್ಥಿತರಿದ್ದರು. ಪ್ರೊ.ಶಬಿನಾ ಪಟೇಲ್ ನಿರೂಪಿಸಿದರು. ಪ್ರೊ.ಸಾದಿಯಾ ಬಾನು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಲ್ಡನ್‌ ಅವರ್‌ನಲ್ಲಿ 2.16 ಕೋಟಿ ರು, ರಕ್ಷಣೆ
ಇಂದಿನಿಂದ ಲಂಡನ್‌ ಮಾದರಿ ಡಬಲ್‌ ಡೆಕ್ಕರ್‌ ಬಸ್‌ ಸಂಚಾರ