ಕಸಾಪ ಅಧ್ಯಕ್ಷ ರವಿ ದಳವಾಯಿ ಅಧ್ಯಕ್ಷತೆ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಯುವ ಕಾರ್ಯಕ್ರಮದಲ್ಲಿ ಮಾಚ್ 4 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದಲ್ಲಿ ಕನ್ನಡ ಭವನ ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ದಾನ ಮಾಡಿದ ಹಿರಿಯ ಸಮಾಜ ಸೇವಕರಾದ ಶಾಮಲ ಮಂಜುನಾಥ್, ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ನವೀನ್ ಪೆನ್ನಯ್ಯ, ಪ್ರಧಾನ ಕಾರ್ಯದರ್ಶಿ ಮಿಲಿಟರಿ ಶ್ರೀನಿವಾಸ್, ಲೇಖಕ ತ.ಮ.ದೇವಾನಂದ್, ತಾಲೂಕು ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಸುನಿತಾ ಕಿರಣ್, ಕೆ.ಎಸ್.ಶಿವಣ್ಣ ಉಪಸ್ಥಿತರಿರುತ್ತಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಅವರು ಕನ್ನಡ ಭವನ ನಾಮಫಲಕ ಅನಾವರಣಗೊಳಿಸಲಿದ್ದಾರೆ ಎಂದರು.ಕನ್ನಡ ಭವನ ನಿರ್ವಹಣೆಗೆ ರಚಿಸಿರುವ ಸಮಿತಿಗೆ ಕನ್ನಡಶ್ರೀ ಬಿ.ಎಸ್.ಭಗವಾನ್ ಅಧ್ಯಕ್ಷ, ಡಾ.ಎಂ.ಮರುಳಸಿದ್ದಯ್ಯ ಪಟೇಲ್ ಗೌರವಾಧ್ಯಕ್ಷ, ಕೆ.ಎಸ್.ಶಿವಣ್ಣ ಕೋಶಾಧ್ಯಕ್ಷ, ರವಿ ದಳವಾಯಿ ಪ್ರಧಾನ ಕಾರ್ಯದರ್ಶಿ, ನವೀನ್ ಪೆನ್ನಯ್ಯ, ಉಮಾಪ್ರಕಾಶ್, ಸುನೀತ ಕಿರಣ್ ಕಾರ್ಯದರ್ಶಿಯಾಗಿಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.ಹಿರಿಯ ಗಮಕ ಕಲಾವಿದ ಶ್ರೀರಾಮಸುಬ್ರಾಯ ಶೇಟ್ ಮತ್ತಿತರರು ಭಾಗವಹಿಸಿದ್ದರು. 5ಕೆಟಿಆರ್.ಕೆ.4 ಃ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಕನ್ನಡ ಭವನ ಕಟ್ಟಡದ ಶಂಕುಸ್ಥಾಪನೆ ಕುರಿತು ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾಹಿತಿ ನೀಡಿದರು. ರವಿ ದಳವಾಯಿ, ಮಿಲಿಟರಿ ಶ್ರೀನಿವಾಸ್, ನವೀನ್ ಪೆನ್ನಯ್ಯ, ಬಿ.ಎಸ್.ಭಗವಾನ್ ಮತ್ತಿತರರು ಇದ್ದರು.