ಕನ್ನಡಪ್ರಭ ವಾರ್ತೆ ಮೈಸೂರು
ಈ ವೇಳೆ ವಿದ್ಯಾಲಯದ ಸಂಸ್ಥಾಪಕಿ ಡಾ.ಎಸ್. ಕಾವ್ಯಾ ಮಾತನಾಡಿ, ಶ್ರೀಗರ್ಭ ಗರ್ಭಸಂಸ್ಕಾರವು ಸನಾತನ ಪರಂಪರೆಯಿಂದ ಬಂದ ಅಮೂಲ್ಯ ಸಂಸ್ಕಾರವಾಗಿದ್ದು, ಮುಂದಿನ ಪೀಳಿಗೆಯ ಆರೋಗ್ಯಕರ ಹಾಗೂ ಸಂಸ್ಕಾರಯುತ ಬೆಳವಣಿಗೆಗೆ ಇದು ಅತ್ಯಂತ ಅನಿವಾರ್ಯ ಎಂದು ತಿಳಿಸಿದರು.
ಗರ್ಭ ಸಂಸ್ಕಾರದ ಮಹತ್ವವನ್ನು ವೈಜ್ಞಾನಿಕ ಹಾಗೂ ಸಂಸ್ಕಾರಯುತ ದೃಷ್ಟಿಕೋನ ವಿವರಿಸಿ, ಗರ್ಭಾವಸ್ಥೆಯಲ್ಲಿಯೇ ಮಗುವಿನ ಸಮಗ್ರ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ಅಗತ್ಯ. ಜೂ. 8 ರಂದು ನೂತನ ಶ್ರೀ ಗರ್ಭ ಗರ್ಭಸಂಸ್ಕಾರ ಕಾರ್ಯಾಗಾರ ಆರಂಭವಾಗಲಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ. 83106 34618 ಸಂಪರ್ಕಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮನವಿ ಮಾಡಿದರು.ಈ ವೇಳೆ ಕೆ.ಆರ್. ವೆಂಕಟಾಚಲಶೆಟ್ಟಿ, ಸಹನಶ್ರೀ ವಿ. ಶಿವರತ್ನ, ಶ್ರೀಲಕ್ಷ್ಮಿ, ಎಂ.ಡಿ. ಸ್ವಪ್ನ, ರೂಪಾ ಕುಮಟಗಿ, ಡಿ.ಸ್ಪಂದನಾ, ಎಸ್. ಚಂದನ ಅವರಿಗೆ ಗ್ರಾಜ್ಯುಯೇಷನ್ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.