ಕಲಿತ ಶಾಲೆ ಅಭಿವೃದ್ಧಿಗೆ ಒಂದು ಲಕ್ಷ ನಗದು

KannadaprabhaNewsNetwork |  
Published : Apr 05, 2026, 01:15 AM IST
41 | Kannada Prabha

ಸಾರಾಂಶ

, ಗ್ರಾಮದಲ್ಲಿ ಇದ್ದ ದೇವಾಲಯ ನಿರ್ಮಾಣ ಮಾಡಿರುವುದಲ್ಲದೇ ಅವರು ಕಲಿತ ಶಾಲೆಗೆ ಶಿಕ್ಷಣಕ್ಕೆ ಪೂರಕವಾದ ಸಾಮಗ್ರಿಗಳನ್ನು ನೀಡುತ್ತಿರುವುದು ಸಂತೋಷ ತಂದಿದೆ

-, ಕಂಪ್ಯೂಟರ್ ಕೊಡುಗೆ ನೀಡಿದ ವಕೀಲ ಎಚ್.ಎನ್. ವೆಂಕಟೇಶ್

------------ಕನ್ನಡಪ್ರಭ ವಾರ್ತೆ ಮೈಸೂರುಹಿರಿಯ ವಕೀಲ ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ಎಚ್.ಎನ್. ವೆಂಕಟೇಶ್ ಅವರು ತಾವು ಕಲಿತ ಶಾಲೆಗೆ ಒಂದು ಲಕ್ಷ ನಗದು, ಕಂಪ್ಯೂಟರ್ ಹಾಗೂ ಕ್ರೀಡಾ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು.ಹುಣಸೂರು ತಾಲೂಕಿನ ಹಿಂಡ್ಲಗುಡ್ಲು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜೊತೆಗೆ ಲಾ ಗೈಡ್ ನಿಂದ ಕಿರಂಗೂರು ಕ್ಲಸ್ಟರ್ ವ್ಯಾಪ್ತಿಯ ನಾಲ್ಕು ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಅಗತ್ಯವಾದ ಕಂಪ್ಯೂಟರ್‌ ಗಳನ್ನು ನೀಡಲಾಯಿತು. ಈ ಎಲ್ಲ ಸಲಕರಣೆಗಳನ್ನು ಹಿಂಡ್ಲಗುಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್ ಮೂಲಕ ಹಸ್ತಾಂತರಿಸಲಾಯಿತು.ಹಿಂಡ್ಲಗುಡ್ಲು ಸರ್ಕಾರಿ ಶಾಲೆ, ದಾಸನಪುರ ಸರ್ಕಾರಿ ಶಾಲೆ, ದೊಡ್ಡಹೆಜ್ಜೂರು ಸರ್ಕಾರಿ ಶಾಲೆ, ಸರ್ಕಾರಿ ಪದವಿಪೂರ್ವೂ ಕಾಲೇಜುಗಳಿಗೆ ಕಂಪ್ಯೂಟರ್‌ ಗಳನ್ನು ನೀಡಲಾಯಿತು.ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜ್ ಮಾತನಾಡಿ, ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಶಾಲೆ, ಹುಟ್ಟೂರು ಎಂದಿಗೂ ಮರೆಯಬಾರದು, ಗ್ರಾಮದಲ್ಲಿ ಇದ್ದ ದೇವಾಲಯ ನಿರ್ಮಾಣ ಮಾಡಿರುವುದಲ್ಲದೇ ಅವರು ಕಲಿತ ಶಾಲೆಗೆ ಶಿಕ್ಷಣಕ್ಕೆ ಪೂರಕವಾದ ಸಾಮಗ್ರಿಗಳನ್ನು ನೀಡುತ್ತಿರುವುದು ಸಂತೋಷ ತಂದಿದೆ, ಲಾ ಗೈಡ್ ಸಂಪಾದಕರು, ಹಿರಿಯ ವಕೀಲ ವೆಂಕಟೇಶ್ ಸ್ಮರಿಸುವ ಕೆಲಸ ಮಾಡುತ್ತಿದ್ದಾರೆ, ಅದಲ್ಲದೆ ಸರ್ಕಾರದಿಂದ 3.25 ಕೋಟಿ ವಿಶೇಷ ಅನುದಾನ ತಂದು ರಸ್ತೆ ಅಭಿವೃದ್ಧಿ ಮಾಡಿರುವುದು ಸಹ ಹುಡುಗಾಟಿಕೆಯ ವಿಚಾರವಲ್ಲ. ಹುಟ್ಟು ಊರು ಅಭಿವೃದ್ಧಿ ಆಗಬೇಕು ಎಂಬ ಅವರ ಕನಸು ಈಡೇರಲಿ ಅದಕ್ಕೆ ಗ್ರಾಮಸ್ಥರು ಸಹಕರಿಸಿದ್ದಾರೆ ಎಂದರು. ಕ್ರೀಡಾ ಸಾಮಾಗ್ರಿಗೆ 51 ಸಾವಿರ ಕೊಡುಗೆಹಿರಿಯ ವಕೀಲ ಹರೀಶ್ ಕುಮಾರ್ ಹೆಗ್ಡೆ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ ಎಂದರೆ ಕೇವಲ ಪುಸ್ತಕಾಧಾರಿತ ಅಧ್ಯಯನವಲ್ಲ. ತಂತ್ರಜ್ಞಾನ ಜ್ಞಾನವೂ ಮಕ್ಕಳಿಗೆ ಸಮಾನವಾಗಿ ಅಗತ್ಯವಾಗಿದೆ. ಮಕ್ಕಳು ಭವಿಷ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯಬೇಕಾದರೆ, ಕಂಪ್ಯೂಟರ್ ಹಾಗೂ ತಂತ್ರಜ್ಞಾನ ಆಧಾರಿತ ಅಧ್ಯಯನವೇ ಅವಶ್ಯಕ ಎಂದರು. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಡಿಜಿಟಲ್ ಜ್ಞಾನವನ್ನು ತಲುಪಿಸುವುದೇ ಉದ್ದೇಶ ಎಂದು ತಿಳಿದು, ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ಈ ಸೇವೆಯನ್ನು ಕೈಗೊಂಡಿರುವುದು ಮಾದರಿ ನಡೆಯಾಗಿದೆ ಎಂದು ಹೇಳಿದರು. ಆದ್ದರಿಂದ ಈ ಶಾಲೆಯ ಕ್ರೀಡಾ ಸಾಮಾಗ್ರಿಗಳನ್ನು ಕೊಳ್ಳಲು ವೈಯಕ್ತಿಕವಾಗಿ 51 ಸಾವಿರ ಶಾಲೆಗೆ ನೀಡುತ್ತೇನೆ ಎಂದು ಹೇಳಿದರು. ವ್ಯಾಜ್ಯ ಮುಕ್ತ ಗ್ರಾಮ ಮಾಡುವುದೇ ನನ್ನ ಗುರಿಲಾ ಗೈಡ್ ಸಂಪಾದಕರು ಹಿರಿಯ ವಕೀಲರಾದ ಎಚ್.ಎನ್. ವೆಂಕಟೇಶ್ ಮಾತನಾಡಿ, ನನ್ನ ತಂದೆ ಈ ಊರಿನಲ್ಲಿ ಹುಟ್ಟಿ, ಶಿಕ್ಷಕರಾಗಿ ಹಲವು ಜನಗಳ ವಿದ್ಯಾರ್ಜನೆಗೆ ಕಾರಣರಾಗಿದ್ದಾರೆ. ಅಂತಹ ಕುಟುಂಬದಿಂದ ಬಂದ ನಾನು ಹುಟ್ಟಿದ ಊರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಸದುದ್ದೇಶದಿಂದ ಈ ಊರಿಗಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇನೆ. ಗ್ರಾಮಸ್ಥರು ಸಹ ಸಹಕಾರ ನೀಡುತ್ತಿರುವುದು ತುಂಬಾ ಸಂತೋಷ ಎಂದು ಹೇಳಿದರು. ಮುಂದೆ ಈ ಗ್ರಾಮವನ್ನು ವ್ಯಾಜ್ಯ ಮುಕ್ತ ಗ್ರಾಮ ಮಾಡುವುದೇ ನನ್ನ ಗುರಿ ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಉದಯಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ಶಿಕ್ಷಣ ಅಲ್ಲದೆ ಶಿಕ್ಷಣೇತರ ಕಾರ್ಯಕ್ರಮದಲ್ಲಿ ಬಹಳಷ್ಟು ಬಲಿಷ್ಠರಾಗಿದ್ದಾರೆ. ಶಿಕ್ಷಕರು ಅವರನ್ನು ಸರಿಯಾದ ದಾರಿಗೆ ತಂದು ತರಬೇತಿ ನೀಡಿದ್ದಲ್ಲಿ ಉತ್ತಮ ನಾಗರೀಕರಾಗಿ ಮಾಡಬಹುದು ಎಂದರು.ಹಿರಿಯ ಪತ್ರಕರ್ತ ಎಂ.ಬಿ. ಮರಮಕಲ್, ಬಿಇಒ ಮಹದೇವ್, ಟಿವಿ9 ವರದಿಗಾರ ರಾಮ್, ಪಬ್ಲಿಕ್ ಟಿ.ವಿ ವರದಿಗಾರ ಕೆ.ಪಿ. ನಾಗರಾಜ್, ಟೈಮ್ಸ್ ಆಫ್ ಇಂಡಿಯಾದ ಲಾರೆನ್ಸ್ ಮಿಲ್ಟನ್, ದಾ.ರಾ. ಮಹೇಶ್, ಇಸಿಒ ಕೇಶವಮೂರ್ತಿ, ಶ್ರೀನಿವಾಸ್ ಮೂರ್ತಿ, ಯಜಮಾನರಾದ ಶಿವಕುಮಾರ್, ಕುಮಾರ್ ರಾಜೇಗೌಡ, ಶೇಖರ್, ಮಂಜು, ಚೇತನ್, ರಾಮೇಗೌಡ,. ಶೇಖರೇಗೌಡ, ಕುಮಾರ್, ವೆಂಕಟೇಶ್‌, ಶಿಕ್ಷಕರಾದ ಚಂದ್ರಶೇಖರ, ರಮೇಶ್, ಸಮಿತಿ ಸದಸ್ಯರು, ಶಾಲೆಗಳ ಮುಖ್ಯ ಶಿಕ್ಷಕರು, ಸ್ಥಳೀಯ ಮುಖಂಡರು ಹಾಗೂ ಗಣ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಾದಾಪುರ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಮಹಾರಥೋತ್ಸವ
ಅರಸೀಕೆರೆಯಲ್ಲಿ ಯುವಕನ ಮೇಲೆ ಹಲ್ಲೆ ಆರೋಪ