ರಾಜ್ಯದಲ್ಲಿನ 4 ಪಾರ್ಲೆ ಜಿ ಫ್ಯಾಕ್ಟರಿ ಬಂದ್‌!

KannadaprabhaNewsNetwork |  
Published : Mar 19, 2026, 02:00 AM IST
ಪಾರ್ಲೇ  | Kannada Prabha

ಸಾರಾಂಶ

ಕೊಲ್ಲಿ ಯುದ್ದದ ಪರಿಣಾಮ ಉಂಟಾಗಿರುವ "ಗ್ಯಾಸ್‌ ಟ್ರಬಲ್‌ "ನಿಂದ ಇದೀಗ ರಾಜ್ಯದಲ್ಲಿರುವ 4 ಪಾರ್ಲೆ ಜಿ ಬಿಸ್ಕೆಟ್ ಫ್ಯಾಕ್ಟರಿಗಳು 6 ದಿನದಿಂದ ಬಾಗಿಲು ಮುಚ್ಚಿವೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಕೊಲ್ಲಿ ಯುದ್ದದ ಪರಿಣಾಮ ಉಂಟಾಗಿರುವ "ಗ್ಯಾಸ್‌ ಟ್ರಬಲ್‌ "ನಿಂದ ಇದೀಗ ರಾಜ್ಯದಲ್ಲಿರುವ 4 ಪಾರ್ಲೆ ಜಿ ಬಿಸ್ಕೆಟ್ ಫ್ಯಾಕ್ಟರಿಗಳು 6 ದಿನದಿಂದ ಬಾಗಿಲು ಮುಚ್ಚಿವೆ. ಸದ್ಯ ದಾಸ್ತಾನಿನಲ್ಲಿರುವುದನ್ನು ರವಾನಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪಾರ್ಲೆ ಜಿ ಬಿಸ್ಟ್‌ಕೆ ಅಭಾವ ಎದುರಾಗುವ ಆತಂಕ ಸೃಷ್ಟಿಯಾಗುತ್ತಿದೆ.

ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಹೊಸಪೇಟೆಯಲ್ಲಿ ನಾಲ್ಕು ಪಾರ್ಲೆ ಜಿ ಬಿಸ್ಟ್‌ಕೆ ಫ್ಯಾಕ್ಟರಿಗಳಿವೆ. ಇಲ್ಲಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ರವಾನೆಯಾಗುತ್ತವೆ. ಬಿಸ್ಕೆಟ್ ತಯಾರಿಕೆ ನಿರಂತರವಾಗಿ ಎಲ್‌ಪಿಜಿ ಗ್ಯಾಸ್‌ ಬೇಕೇ ಬೇಕು. ಎಲ್‌ಪಿಜಿ ಇಲ್ಲದಿದ್ದರೆ ತಯಾರಿ ಅಸಾಧ್ಯ. ಆದರೆ, ಕಳೆದ 10 ದಿನಗಳಿಂದ ಎಲ್‌ಪಿಜಿ ಗ್ಯಾಸ್‌ ಫ್ಯಾಕ್ಟರಿಗಳಿಗೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ 6 ದಿನಗಳಿಂದ ಬಿಸ್ಕಟ್‌ ಉತ್ಪಾದನೆ ಆಗುತ್ತಿಲ್ಲ.

ಹುಬ್ಬಳ್ಳಿ ಫ್ಯಾಕ್ಟರಿಯಲ್ಲಿ ಪ್ರತಿನಿತ್ಯ 1.5 ಟನ್‌ ಎಲ್‌ಪಿಜಿ ಗ್ಯಾಸ್‌ ಬೇಕು. ನಿತ್ಯ 40 ಟನ್‌ ಬಿಸ್ಕೆಟ್ಗಳನ್ನು ಉತ್ಪಾದಿಸಲಾಗುತ್ತಿದೆ. ತಿಂಗಳಿಗೆ ಹುಬ್ಬಳ್ಳಿ ಫ್ಯಾಕ್ಟರಿಯಲ್ಲಿ ಬರೋಬ್ಬರಿ 1200 ಟನ್‌ ಬಿಸ್ಕೆಟ್ ಉತ್ಪಾದನೆಯಾಗುತ್ತದೆ. ಇಲ್ಲಿ ಉತ್ಪಾದನೆಯಾದ ಪಾರ್ಲೆ ಜಿ ಬಿಸ್ಕೆಟ್ ಅನ್ನು 100 ಕಿಮೀ ಸುತ್ತಮುತ್ತ ಇರುವ ಜಿಲ್ಲೆ, ಊರುಗಳಿಗೆ ರವಾನಿಸಲಾಗುತ್ತದೆ. ಹುಬ್ಬಳ್ಳಿಯಲ್ಲಿನ ಫ್ಯಾಕ್ಟರಿಯಲ್ಲಿ 100ಕ್ಕೂ ಅಧಿಕ ಕಾರ್ಮಿಕರು ಕೆಲಸಕ್ಕಿದ್ದಾರೆ. ಇದೀಗ ಗ್ಯಾಸ್‌ ಸಿಗದ ಕಾರಣ ಉತ್ಪಾದನೆ ಮಾಡುತ್ತಿಲ್ಲ. ಅವರಿಗೂ ಕೆಲಸವಿಲ್ಲದಂತಾಗಿದೆ. ಸದ್ಯಕ್ಕೇನು ಅವರ ಸಂಬಳಕ್ಕೆ ಸಮಸ್ಯೆಯಿಲ್ಲ. ಆದರೆ, ಕೆಲಸ ಇಲ್ಲದೇ ಎಷ್ಟು ದಿನ ಇರಬೇಕು ಎಂಬ ಗೋಳು ಕಾರ್ಮಿಕರದ್ದು.

ಬೆಳಗಾವಿ, ಕಲಬುರಗಿ, ಹೊಸಪೇಟೆಗಳಲ್ಲಿನ ಫ್ಯಾಕ್ಟರಿಗಳಲ್ಲೂ ಉತ್ಪಾದನೆ ಸ್ಥಗಿತಗೊಂಡಿದೆ. ನಾಲ್ಕು ಫ್ಯಾಕ್ಟರಿ ಸೇರಿ ತಿಂಗಳಿಗೆ ಕನಿಷ್ಠವೆಂದರೆ 6000-7000 ಟನ್‌ ಬಿಸ್ಕಟ್‌ ಉತ್ಪಾದನೆ ಮಾಡಲಾಗುತ್ತದೆಯಂತೆ. ಇದೀಗ ಎಲ್ಲ ಫ್ಯಾಕ್ಟರಿಗಳು ಬಂದ್‌ ಆಗಿರುವುದರಿಂದ ಸ್ಟಾಕ್‌ ಇರುವ ಬಿಸ್ಕಟ್‌ಗಳನ್ನು ಮಾತ್ರ ಕಳುಹಿಸಲಾಗುತ್ತಿದೆ.

ಆದರೆ, ಹೈದರಾಬಾದ್‌, ಮಹಾರಾಷ್ಟ್ರ, ಗುಜರಾತ್‌ಗಳಲ್ಲಿನ ಫ್ಯಾಕ್ಟರಿಗಳಲ್ಲಿನ ಬಿಸ್ಕೆಟ್ ಉತ್ಪಾದನೆ ಸ್ಥಗಿತಗೊಂಡಿಲ್ಲ. ಅಲ್ಲಿ ಯಥಾಪ್ರಕಾರ ಉತ್ಪಾದನೆ ನಡೆಯುತ್ತಿದೆಯಂತೆ. ಆದರೆ, ಕರ್ನಾಟಕದಲ್ಲಿನ ಫ್ಯಾಕ್ಟರಿಗಳು ಮಾತ್ರ ಬಂದ್‌ ಆಗಿವೆ ಎಂದು ಮೂಲಗಳು ತಿಳಿಸುತ್ತವೆ.

ಒಂದು ವೇಳೆ ಇಲ್ಲಿನ ಸ್ಟಾಕ್‌ ಖಾಲಿಯಾದರೆ ಮಹಾರಾಷ್ಟ್ರ, ಗುಜರಾತ್‌, ಹೈದರಾಬಾದ್‌ ಸೇರಿದಂತೆ ವಿವಿಧೆಡೆಗಳಿಂದ ಪಾರ್ಲೆ ಜಿ ಬಿಸ್ಕೆಟ್ ತರಿಸಬೇಕಾಗುತ್ತದೆ. ಮೊದಲೇ ಹೋಟೆಲ್‌ಗಳು ಬಂದಾಗುತ್ತಿವೆ. ಇದರಿಂದಾಗಿ ಬಿಸ್ಕಟ್‌ಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಬೇರೆ ರಾಜ್ಯಗಳಿಂದ ತರಿಸಿದರೂ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡುವುದು ಕಷ್ಟವಾಗುತ್ತದೆ. ಸಹಜವಾಗಿ ಅಭಾವ ಆಗುವ ಸಾಧ್ಯತೆಯುಂಟು ಎಂಬ ಆತಂಕ ವ್ಯಕ್ತವಾಗುತ್ತಿದೆ.

ಒಟ್ಟಿನಲ್ಲಿ ಕೊಲ್ಲಿ ಯುದ್ಧದ ಪರಿಣಾಮ ಬರೀ ಹೋಟೆಲೋದ್ಯಮದ ಮೇಲಷ್ಟೇ ಅಲ್ಲ. ಬಿಸ್ಕೆಟ್ ತಯಾರಿಕೆ ಮೇಲೂ ಬೀರುತ್ತಿದ್ದು, ಮುಂದೆ ಬಿಸ್ಕೆಟ್ ಕೊರತೆಯಾಗುವ ಲಕ್ಷಣ ದಟ್ಟವಾಗಿವೆ.

ಗ್ಯಾಸ್‌ ಸಮಸ್ಯೆಯಿಂದಾಗಿ ಕರ್ನಾಟಕದಲ್ಲಿನ ನಾಲ್ಕು ಬಿಸ್ಕೆಟ್ ಫ್ಯಾಕ್ಟರಿಗಳಲ್ಲಿನ ಉತ್ಪಾದನೆ ಸ್ಥಗಿತಗೊಂಡಿದೆ. ಹುಬ್ಬಳ್ಳಿಯಲ್ಲಿನ ಫ್ಯಾಕ್ಟರಿಗೆ 1.5 ಟನ್‌ ಎಲ್‌ಪಿಜಿ ಗ್ಯಾಸ್‌ ಬೇಕಾಗುತ್ತದೆ. 40 ಟನ್‌ ಬಿಸ್ಕೆಟ್ ಉತ್ಪಾದನೆ ಮಾಡಲಾಗುತ್ತಿದೆ. 10 ದಿನದಿಂದ ಗ್ಯಾಸ್‌ ಪೂರೈಕೆಯಾಗಿಲ್ಲ. ಬಿಸ್ಕೆಟ್ ತುರ್ತು ಅಗತ್ಯಗಳಲ್ಲಿ ಒಂದು. ಈ ಕಾರಣಕ್ಕಾದರೂ ಗ್ಯಾಸ್‌ ಸರಬರಾಜು ಮಾಡಬೇ ಎಂದು ಎಲ್‌ವಿಟಿ ಫ್ಯಾಕ್ಟರಿ ಮಾಲೀಕ ಜತೀನ್‌ ಠಕ್ಕರ್‌ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ
ಎಸ್ಸೆಸ್ಲೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಸುಸೂತ್ರ