ಶಿರಹಟ್ಟಿ: ಅಕ್ರಮ ಮರಳು ದಂಧೆಕೋರರು ಹಳ್ಳದಲ್ಲಿನ ಮರಳನ್ನು ತುಂಬಲು ಮುಂದಾಗಿದ್ದ ವೇಳೆ ವಿರೋಧಿಸಿದ ನಾಲ್ವರ ಮೇಲೆ ಹಲ್ಲೆ ನಡೆಸಿದ್ದು, ಆರು ಮಂದಿ ಆರೋಪಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಭಾನುವಾರ ತಾಲೂಕಿನ ಕನಕವಾಡ ಗ್ರಾಮದ ನಿವಾಸಿ ನಾಗರಾಜ ವಾಲಿ ಹಾಗೂ ಮಹೇಶ ವಾಲಿ ಎಂಬವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಆಗ ಆರೋಪಿಗಳಾದ ಮಹ್ಮದ್ ಅಲಿ ರಾಜೇಸಾಬ ಲಂಗೋಟಿ, ಶಾಹೀಲ್ ಹಾಸೀಮ್‌ಪೀರ್ ಲಂಗೋಟಿ ಎಂಬವರು ಟ್ರ್ಯಾಕ್ಟರ್ ಮೂಲಕ ಆಗಮಿಸಿ ಹಳ್ಳದಲ್ಲಿ ಮರಳು ತುಂಬಲು ಯತ್ನಿಸಿದ್ದಾರೆ. ಅದನ್ನು ತಡೆದ ನಾಗರಾಜ ಹಾಗೂ ಮಹೇಶನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಡಿಗೆಯಿಂದ ಮನಬಂದಂತೆ ಥಳಿಸಿದ್ದಾರೆ.ಬಳಿಕ ಸಮೀರ್ ಹಾಸಿಮ್‌ಪೀರ್ ಲಂಗೋಟಿ, ಅಸ್ಫಾಕ್ ಅಲಿ ಅಕ್ಬರ್‌ಸಾಬ ಲಂಗೋಟಿ, ಸದ್ದಾಂ ಅಕ್ಬರ್‌ಸಾಬ ಲಂಗೋಟಿ, ಹಾಸಿಂಪೀರ ರಾಜೇಸಾಬ ಲಂಗೋಟಿ ಸೇರಿಕೊಂಡು ದೂರುದಾರರ ಮನೆಗೆ ನುಗ್ಗಿ ನಾಗರಾಜ, ಮಹೇಶ, ಜಯರಾಜ, ಬಸವರಾಜ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.ಗಾಯಾಳುಗಳು ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.25ರಂದು ಡಂಬಳದಲ್ಲಿ ಕ್ರಿಕೆಟ್ ಪಂದ್ಯಾವಳಿ