ತಾಲೂಕಲ್ಲಿ ಶೇ.38 ರಷ್ಟು ಮಳೆ ಕೊರತೆ । ಕೇವಲ 830 ಮಿ.ಮೀ ನಷ್ಟು ಮಾತ್ರ ಮಳೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ 9 ತಾಲೂಕುಗಳ ಪೈಕಿ ಅಜ್ಜಂಪುರ, ತರೀಕೆರೆ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಆದರೆ, ಮುಂಗಾರು ಅವಧಿಯಲ್ಲಿ ಶೇ.38 ರಷ್ಟು ಮಳೆ ಕೊರತೆ ಇರುವ ಕಡೂರು ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವುದು ಅಚ್ಚರಿ ಉಂಟು ಮಾಡಿದೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ 1,253 ಮಿ.ಮೀ ನಷ್ಟು ಮಳೆಯಾಗಬೇಕು. ಆದರೆ, ಕೇವಲ 830 ಮಿ.ಮೀ ನಷ್ಟು ಮಾತ್ರ ಮಳೆಯಾಗಿದೆ. ಶೇ.34 ರಷ್ಟು ಒಟ್ಟಾರೆ ಮಳೆ ಕೊರತೆ ಉಂಟಾಗಿದೆ. ಇನ್ನೂ ಅಜ್ಜಂಪುರ ತಾಲೂಕಿನಲ್ಲಿ ಅತಿ ಹೆಚ್ಚು ಶೇ.43 ರಷ್ಟು ಮಳೆ ಕೊರತೆ ಉಂಟಾಗಿರುವುದರಿಂದ ತೀವ್ರ ಬರ ಪೀಡಿತ ತಾಲೂಕು ಎಂದು ಘೋಷಿಸಲಾಗಿದೆ.
ಬರ ಮಾಪನ ಮಾನದಂಡದ ಕಡೂರು ಫೇಲ್?
-- ಬಾಕ್ಸ್ --
ಕಡೂರು ತಾಲೂಕಲ್ಲಿ ಮಳೆ ಕೊರತೆ ಇದ್ದರೂ, ಕಡೂರು ತಾಲೂಕಿನ ಗ್ರೌಂಡ್ ಟ್ರೂಥ್ ಸರ್ವೇ ನಡೆಸಲು ಆದೇಶ ಆಗಿರಲಿಲ್ಲ. ಜಿಲ್ಲೆಯ ಅಜ್ಜಂಪುರ, ತರೀಕೆರೆ, ಎನ್,ಆರ್,ಪುರ ಹಾಗೂ ಕೊಪ್ಪ ಮಾತ್ರ ಗ್ರೌಂಡ್ ಟ್ರೂಥ್ ಸರ್ವೇಗೆ ಸ್ಥಳ ಗುರುತಿ ಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು. ಹೀಗಾಗಿ, ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕಡೂರು ತಾಲೂಕು ಬರ ಪಟ್ಟಿಗೆ ಸೇರುವುದಿಲ್ಲ ಎಂಬ ಮಾಹಿತಿ ಮೊದಲೇ ಇತ್ತಾ ಎಂಬ ಅನುಮಾನ ಶುರುವಾಗಿದೆ.
* ಶೇ.60 ರಷ್ಟು ಮಳೆ ಕೊರತೆ ಇರಬೇಕು.
* ಶೇ.75ಕ್ಕಿಂತ ಕಡಿಮೆ ಬಿತ್ತನೆ.
* ಬೆಳೆ ಆರೋಗ್ಯ ಪರೀಕ್ಷೆಯಲ್ಲಿ ವಿಫಲವಾಗಬೇಕು.
* ಅಂತರ್ ಜಲ ಮಟ್ಟ ಅಥವಾ ಜಲಾಶಯ ನೀರಿನ ಪ್ರಮಾಣ ಕೊರತೆ* ಗ್ರೌಂಡ್ ಟ್ರೂಥ್ ಸರ್ವೇ. ಈ ಗ್ರೌಂಡ್ ಟ್ರೂಟ್ ಸರ್ವೇನಲ್ಲಿ ಸಂಗ್ರಹಿಸಿದ ಬೆಳೆ ಮಾದರಿಯಲ್ಲಿ ಶೇ.80 ರಲ್ಲಿ ಶೇ.50 ರಷ್ಟು ಬೆಳೆ ನಷ್ಟ ಆಗಿರಬೇಕು. --ಬಾಕ್ಸ್--ತಾಲೂರು ವಾರು ಮಳೆ ವಿವರ (ಮುಂಗಾರು ಅವಧಿ)
ತಾಲೂಕಿವಾಡಿಕೆಸುರಿದ ಮಳೆಶೇಕಡಾಚಿಕ್ಕಮಗಳೂರು331.9535.2+61
ಕಡೂರು178.2111.0-38ಕೊಪ್ಪ2247.91710.4-24
ಮೂಡಿಗೆರೆ1570.61220.2-22ಎನ್.ಆರ್.ಪುರ1132.8804.9-29
ಶೃಂಗೇರಿ3065.12925.7-5ತರೀಕೆರೆ474.4301.1-37
ಅಜ್ಜಂಪುರ282.9160.3-43ಕಳಸ2685.11938.0-28
ಒಟ್ಟು1252.3829.9-34-- ಕೋಟ್--ಮಳೆ ಕೊರತೆ ಒಂದನ್ನೆ ಆಧರಿಸಿ ಬರ ತಾಲೂಕು ಘೋಷಣೆ ಮಾಡಲು ಸಾಧ್ಯವಿಲ್ಲ, ಹಲವು ಮಾನದಂಡ ಪರಿಶೀಲಿಸ ಲಾಗುತ್ತದೆ. ಈ ಮಾನದಂಡದಲ್ಲಿ ಪಾಸಾದರೆ ಮಾತ್ರ ಬರ ಎಂದು ಘೋಷಿಸಲಾಗುತ್ತದೆ,
- ಶ್ರೀನಿವಾಸ್ ರೆಡ್ಡಿ, ಮಾಜಿ ನಿರ್ದೇಶಕ, ಕೆಎಸ್ಎನ್‌ಡಿಎಂಸಿ-- ಕೋಟ್--ಕಡೂರು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣ ಮಳೆ ಕೊರತೆ ಇದ್ದರೂ ಬರ ಪಟ್ಟಿಗೆ ಸೇರಿಸಿಲ್ಲ. ಮುಂದಿನ ಹಂತದ ಘೋಷಣೆ ಯಲ್ಲಿ ಕಡೂರು ತಾಲೂಕು ಸೇರಿಸಲಾಗುತ್ತದೆ ಎಂಬ ನಿರೀಕ್ಷೆ ಇದೆ.- ಪೂರ್ಣಿಮಾ, ತಹಸೀಲ್ದಾರ್, ಕಡೂರು