ಪೌರಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ ಕೊಡಲು ಒತ್ತಾಯ

KannadaprabhaNewsNetwork |  
Published : Aug 28, 2026, 03:15 AM IST
ತರೀಕರೆಯಲ್ಲಿ ಉಪವಿಭಾಗೀಯ ಮಟ್ಟದ ಸಫಾಯಿ ಕರ್ಮಚಾರಿ ಮತ್ತು ಅದರ ಪುನರ್ ವಸತಿ ಕಾಯ್ದೆಯ ವಿಜಿಲೆನ್ಸಿ ಸಮಿತಿ ಸಭೆ | Kannada Prabha

ಸಾರಾಂಶ

ತರೀಕೆರೆಗೃಹಭಾಗ್ಯ ಅಥವಾ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಕೊಳಚೆ ಪ್ರದೇಶದಲ್ಲಿರುವ ಪೌರಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ಸಫಾಯಿ ಕರ್ಮಚಾರಿ ಮತ್ತು ಪುನರ್ವಸತಿ ಕಾಯ್ದೆ ವಿಜಿಲೆನ್ಸಿ ಸಮಿತಿ ಸದಸ್ಯ ತರೀಕೆರೆ ಎನ್.ವೆಂಕಟೇಶ್ ಒತ್ತಾಯಿಸಿದರು.

ವೆಂಕಟೇಶ್ ಆಗ್ರಹ । ತರೀಕರೆಯಲ್ಲಿ ಉಪವಿಭಾಗೀಯ ಮಟ್ಟದ ಸಫಾಯಿ ಕರ್ಮಚಾರಿ ಮತ್ತು ಪುನರ್ವಸತಿ ಕಾಯ್ದೆ ವಿಜಿಲೆನ್ಸಿ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ತರೀಕೆರೆ

ಗೃಹಭಾಗ್ಯ ಅಥವಾ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಕೊಳಚೆ ಪ್ರದೇಶದಲ್ಲಿರುವ ಪೌರಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ಸಫಾಯಿ ಕರ್ಮಚಾರಿ ಮತ್ತು ಪುನರ್ವಸತಿ ಕಾಯ್ದೆ ವಿಜಿಲೆನ್ಸಿ ಸಮಿತಿ ಸದಸ್ಯ ತರೀಕೆರೆ ಎನ್.ವೆಂಕಟೇಶ್ ಒತ್ತಾಯಿಸಿದರು.

ತರೀಕೆರೆ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಉಪವಿಭಾಗಾಧಿಕಾರಿ ಎನ್.ವಿ.ನಟೇಶ್ ಅಧ್ಯಕ್ಷತೆಯಲ್ಲಿ ಉಪವಿಭಾಗೀಯ ಮಟ್ಟದ ಸಫಾಯಿ ಕರ್ಮಚಾರಿ ಮತ್ತು ಪುನರ್ವಸತಿ ಕಾಯ್ದೆ ವಿಜಿಲೆನ್ಸಿ ಸಮಿತಿ ಸಭೆಯಲ್ಲಿ ಮಾತನಾಡಿ ಪೌರಕಾರ್ಮಿಕರಿಗೆ ಈವರೆಗೂ ಯಾವುದೇ ಸೌಕರ್ಯ ಒದಗಿಸಿಲ್ಲ, ಅಜ್ಜಂಪುರದಲ್ಲಿ ಸ.ನಂ.192ರಲ್ಲಿ 1 ಎಕರೆ 28 ಗುಂಟೆ ಸರ್ಕಾರಿ ಜಾಗವಿದ್ದು ಅಲ್ಲಿ ಪೌರಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು. ಪುರಸಭೆ, ಪಟ್ಟಣ ಪಂಚಾಯಿತಿ ಯಿಂದ ಅಜ್ಜಂಪುರ, ಎನ್.ಆರ್.ಪುರ ಮತ್ತು ಕಡೂರಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸಿಕೊಡಬೇಕು, ಪೌರಕಾರ್ಮಿಕರ ಕಾಲೋನಿಗಳಲ್ಲಿ ಶುದ್ದ ಗಂಗಾ ಕುಡಿಯುವ ನೀರಿನ ಘಟಕ ಸ್ಥಾಪಿಸಿಬೇಕು ಎಂದು ಆಗ್ರಹಿಸಿದರು.

ಉಪ ವಿಭಾಗಾಧಿಕಾರಿ ಎನ್.ವಿ.ನಟೇಶ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗ ದಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಬೇಕೆಂದು ಸಭೆಯಲ್ಲಿ ಸೂಚಿಸಿದರು. ತರೀಕೆರೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಸ್ಥಳಾವಕಾಶ ಇಲ್ಲ ಹಾಗಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಗನವಾಡಿ ಕೇಂದ್ರ, ಪಟ್ಟಣದ ಹಳೇ ಸಂತೆ ಮೈದಾನದಲ್ಲಿ ಪುರಸಭೆ ಕಟ್ಟಡದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ಸಮಿತಿ ಸದಸ್ಯ ಜಿ.ಟಿ.ರಮೇಶ್ ಮಾತನಾಡಿ ನಗರಗಳಲ್ಲಿರುವಂತೆ ಗ್ರಾಮೀಣ ಭಾಗದಲ್ಲಿ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಬೇಕೆಂದು ಸಭೆಯಲ್ಲಿ ಕೋರಿದರು. ಸಮಿತಿ ಸದಸ್ಯ ಸಚಿನ್ ಮಾತನಾಡಿ ಕಡೂರು ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ವಾಸವಿರುವ ಪೌರಕಾರ್ಮಿಕರಿಗೆ ನಿವೇಶನ ಮತ್ತು ಮನೆಗಳು ಇಲ್ಲ, ಪೌರಕಾರ್ಮಿಕರಿಗೆ ಮನೆ ನಿವೇಶನ ಕೊಡಿಸಿಕೊಡಬೇಕು ಎಂದರು.

ತಹಸೀಲ್ದಾರ್ .ರಶ್ಮಿ ಎಚ್.ಜಿ. ಎನ್.ಆರ್.ಪುರ ತಹಸೀಲ್ದಾರ್ ನೂರುಲ್ ಉದಾ, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್, ವಿವಿಧ ಇಲಾಖೆ ಅಧಿಕಾರಿಗಳು, ಸಭೆಯಲ್ಲಿ ಭಾಗವಹಿಸಿದ್ದರು.

-

27ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಉಪವಿಭಾಗಾಧಿಕಾರಿ ಎನ್.ವಿ.ನಟೇಶ್ ಅಧ್ಯಕ್ಷತೆಯಲ್ಲಿ ಉಪವಿಭಾಗೀಯ ಮಟ್ಟದ ಸಫಾಯಿ ಕರ್ಮಚಾರಿ ಮತ್ತು ಅದರ ಪುನರ್ವಸತಿ ಕಾಯ್ದೆ ವಿಜಿಲೆನ್ಸಿ ಸಮಿತಿ ಸಭೆಯಲ್ಲಿ ತಹಸೀಲ್ದಾರ್, .ರಶ್ಮಿ ಎಚ್.ಜಿ. ಎನ್.ಆರ್.ಪುರ ತಹಸೀಲ್ದಾರ್ ನೂರುಲ್ ಉದಾ, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜ್ಜಂಪುರ ಸೇರಿ ಜಿಲ್ಲೆಯ ನಾಲ್ಕು ತಾಲೂಕು ಬರ, ಪಟ್ಟಿಯಲ್ಲಿ ಕಡೂರಿಗಿಲ್ಲ ಜಾಗ
ದೇಣಿಗೆ ಸಂಗ್ರಹಿಸಿ ಕೆರೆ ತುಂಬಿಸಿದ 2 ಗ್ರಾಮಸ್ಥರು