ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ 9 ತಾಲೂಕುಗಳ ಪೈಕಿ ಅಜ್ಜಂಪುರ, ತರೀಕೆರೆ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಆದರೆ, ಮುಂಗಾರು ಅವಧಿಯಲ್ಲಿ ಶೇ.38 ರಷ್ಟು ಮಳೆ ಕೊರತೆ ಇರುವ ಕಡೂರು ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವುದು ಅಚ್ಚರಿ ಉಂಟು ಮಾಡಿದೆ.

ತಾಲೂಕಲ್ಲಿ ಶೇ.38 ರಷ್ಟು ಮಳೆ ಕೊರತೆ । ಕೇವಲ 830 ಮಿ.ಮೀ ನಷ್ಟು ಮಾತ್ರ ಮಳೆ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ 9 ತಾಲೂಕುಗಳ ಪೈಕಿ ಅಜ್ಜಂಪುರ, ತರೀಕೆರೆ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಆದರೆ, ಮುಂಗಾರು ಅವಧಿಯಲ್ಲಿ ಶೇ.38 ರಷ್ಟು ಮಳೆ ಕೊರತೆ ಇರುವ ಕಡೂರು ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವುದು ಅಚ್ಚರಿ ಉಂಟು ಮಾಡಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ 1,253 ಮಿ.ಮೀ ನಷ್ಟು ಮಳೆಯಾಗಬೇಕು. ಆದರೆ, ಕೇವಲ 830 ಮಿ.ಮೀ ನಷ್ಟು ಮಾತ್ರ ಮಳೆಯಾಗಿದೆ. ಶೇ.34 ರಷ್ಟು ಒಟ್ಟಾರೆ ಮಳೆ ಕೊರತೆ ಉಂಟಾಗಿದೆ. ಇನ್ನೂ ಅಜ್ಜಂಪುರ ತಾಲೂಕಿನಲ್ಲಿ ಅತಿ ಹೆಚ್ಚು ಶೇ.43 ರಷ್ಟು ಮಳೆ ಕೊರತೆ ಉಂಟಾಗಿರುವುದರಿಂದ ತೀವ್ರ ಬರ ಪೀಡಿತ ತಾಲೂಕು ಎಂದು ಘೋಷಿಸಲಾಗಿದೆ.

ಉಳಿದಂತೆ ಶೇ.37 ರಷ್ಟು ಮಳೆ ಕೊರತೆ ಎದುರಿಸುತ್ತಿರುವ ತರೀಕೆರೆ, ಶೇ.24 ರಷ್ಟು ಕೊರತೆ ಇರುವ ಕೊಪ್ಪ ಹಾಗೂ ಶೇ.29 ರಷ್ಟು ಮಳೆ ಕೊರತೆ ಇರುವ ಎನ್‌.ಆರ್‌.ಪುರ ತಾಲೂಕನ್ನು ಭಾಗಶಃ ಬರ ತಾಲೂಕಿ ಪಟ್ಟಿಗೆ ಸೇರಿಸಲಾಗಿದೆ. ಆದರೆ, ಶೇ.38 ರಷ್ಟು ಮಳೆ ಕೊರತೆ ಎದುರಿಸುತ್ತಿರುವ ಕಡೂರು ತಾಲೂಕನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಅಚ್ಚರಿ ಉಂಟು ಮಾಡಿದೆ.

ಬರ ಮಾಪನ ಮಾನದಂಡದ ಕಡೂರು ಫೇಲ್‌?

ಹಲವು ಮಾನದಂಡ ಆಧಾರಿಸಿ ಬರ ತಾಲೂಕು ಎಂದು ಪರಿಗಣಿಸಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಶೇ.60 ರಷ್ಟು ಮಳೆ ಕೊರತೆ ಎದುರಿಸುತ್ತಿರಬೇಕು. ಸತತವಾಗಿ ಮೂರು ವಾರ ಆಯಾ ವಾರದ ವಾಡಿಕೆ ಪ್ರಮಾಣಕ್ಕಿಂತ ಶೇ.50 ರಷ್ಟು ಕಡಿಮೆ ಮಳೆ ದಾಖಲಾಗಿರಬೇಕು. ಈ 2 ಮಾನದಂಡದಲ್ಲಿ ಪಾಸಾದರೆ ಮಾತ್ರ ಮುಂದಿನ ಮಾನದಂಡಗಳ ಪರಿಶೀಲನೆ ಮಾಡಲಾ ಗುತ್ತದೆ. ಕಡೂರು ತಾಲೂಕಿನಲ್ಲಿ ಶೇ.60 ಕಿಂತ ಕಡಿಮೆ ಮಳೆ ಕೊರತೆ ಇದೆ. ಇನ್ನೂ ಸತತ ಮೂರು ವಾರ ವಾಡಿಕೆ ಮಳೆ ಪ್ರಮಾಣಕ್ಕಿಂತ ಶೇ.50 ರಷ್ಟು ಮಳೆ ಕೊರತೆ ದಾಖಲಾಗದ ಹಿನ್ನೆಲೆಯಲ್ಲಿ ಬರ ಪಟ್ಟಿ ಸೇರಿಸಿಲ್ಲ ಎನ್ನಲಾಗುತ್ತಿದೆ.

-- ಬಾಕ್ಸ್‌ --

ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇತ್ತಾ?

ಕಡೂರು ತಾಲೂಕಲ್ಲಿ ಮಳೆ ಕೊರತೆ ಇದ್ದರೂ, ಕಡೂರು ತಾಲೂಕಿನ ಗ್ರೌಂಡ್‌ ಟ್ರೂಥ್‌ ಸರ್ವೇ ನಡೆಸಲು ಆದೇಶ ಆಗಿರಲಿಲ್ಲ. ಜಿಲ್ಲೆಯ ಅಜ್ಜಂಪುರ, ತರೀಕೆರೆ, ಎನ್‌,ಆರ್‌,ಪುರ ಹಾಗೂ ಕೊಪ್ಪ ಮಾತ್ರ ಗ್ರೌಂಡ್‌ ಟ್ರೂಥ್‌ ಸರ್ವೇಗೆ ಸ್ಥಳ ಗುರುತಿ ಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು. ಹೀಗಾಗಿ, ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕಡೂರು ತಾಲೂಕು ಬರ ಪಟ್ಟಿಗೆ ಸೇರುವುದಿಲ್ಲ ಎಂಬ ಮಾಹಿತಿ ಮೊದಲೇ ಇತ್ತಾ ಎಂಬ ಅನುಮಾನ ಶುರುವಾಗಿದೆ.

-- ಬಾಕ್ಸ್‌-- ಬರ ತಾಲೂಕಿ ಘೋಷಣೆ ಮಾನದಂಡಗಳು

* ಶೇ.60 ರಷ್ಟು ಮಳೆ ಕೊರತೆ ಇರಬೇಕು.

* ಸತತ ಮೂರು ವಾರ ಆಯಾ ವಾರದ ವಾಡಿಕೆ ಪ್ರಮಾಣಕ್ಕಿಂತ ಶೇ.50 ರಷ್ಟು ಮಳೆ ಕೊರತೆ ದಾಖಲಾಗಿರಬೇಕು.

* ಶೇ.75ಕ್ಕಿಂತ ಕಡಿಮೆ ಬಿತ್ತನೆ.

* ಮಣ್ಣಿನ ತೇವಾಂಶ ಪರೀಕ್ಷೆಯಲ್ಲಿ ಕೊರತೆ ಇರಬೇಕು.

* ಬೆಳೆ ಆರೋಗ್ಯ ಪರೀಕ್ಷೆಯಲ್ಲಿ ವಿಫಲವಾಗಬೇಕು.

* ಅಂತರ್‌ ಜಲ ಮಟ್ಟ ಅಥವಾ ಜಲಾಶಯ ನೀರಿನ ಪ್ರಮಾಣ ಕೊರತೆ

* ಗ್ರೌಂಡ್‌ ಟ್ರೂಥ್‌ ಸರ್ವೇ. ಈ ಗ್ರೌಂಡ್‌ ಟ್ರೂಟ್‌ ಸರ್ವೇನಲ್ಲಿ ಸಂಗ್ರಹಿಸಿದ ಬೆಳೆ ಮಾದರಿಯಲ್ಲಿ ಶೇ.80 ರಲ್ಲಿ ಶೇ.50 ರಷ್ಟು ಬೆಳೆ ನಷ್ಟ ಆಗಿರಬೇಕು. --ಬಾಕ್ಸ್‌--ತಾಲೂರು ವಾರು ಮಳೆ ವಿವರ (ಮುಂಗಾರು ಅವಧಿ)

ತಾಲೂಕಿವಾಡಿಕೆಸುರಿದ ಮಳೆಶೇಕಡಾ

ಚಿಕ್ಕಮಗಳೂರು331.9535.2+61

ಕಡೂರು178.2111.0-38

ಕೊಪ್ಪ2247.91710.4-24

ಮೂಡಿಗೆರೆ1570.61220.2-22

ಎನ್‌.ಆರ್.ಪುರ1132.8804.9-29

ಶೃಂಗೇರಿ3065.12925.7-5

ತರೀಕೆರೆ474.4301.1-37

ಅಜ್ಜಂಪುರ282.9160.3-43

ಕಳಸ2685.11938.0-28

ಒಟ್ಟು1252.3829.9-34-- ಕೋಟ್‌--

ಮಳೆ ಕೊರತೆ ಒಂದನ್ನೆ ಆಧರಿಸಿ ಬರ ತಾಲೂಕು ಘೋಷಣೆ ಮಾಡಲು ಸಾಧ್ಯವಿಲ್ಲ, ಹಲವು ಮಾನದಂಡ ಪರಿಶೀಲಿಸ ಲಾಗುತ್ತದೆ. ಈ ಮಾನದಂಡದಲ್ಲಿ ಪಾಸಾದರೆ ಮಾತ್ರ ಬರ ಎಂದು ಘೋಷಿಸಲಾಗುತ್ತದೆ,

- ಶ್ರೀನಿವಾಸ್‌ ರೆಡ್ಡಿ, ಮಾಜಿ ನಿರ್ದೇಶಕ, ಕೆಎಸ್ಎನ್‌ಡಿಎಂಸಿ

-- ಕೋಟ್‌--ಕಡೂರು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣ ಮಳೆ ಕೊರತೆ ಇದ್ದರೂ ಬರ ಪಟ್ಟಿಗೆ ಸೇರಿಸಿಲ್ಲ. ಮುಂದಿನ ಹಂತದ ಘೋಷಣೆ ಯಲ್ಲಿ ಕಡೂರು ತಾಲೂಕು ಸೇರಿಸಲಾಗುತ್ತದೆ ಎಂಬ ನಿರೀಕ್ಷೆ ಇದೆ.- ಪೂರ್ಣಿಮಾ, ತಹಸೀಲ್ದಾರ್‌, ಕಡೂರು