ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ರಾವಣಿ ಗ್ರಾಮದಲ್ಲಿ ₹4.5 ಕೋಟಿ ಅನುದಾನದಲ್ಲಿ ಏತ ನೀರಾವರಿ ಯೋಜನೆ ಪುನರುಜ್ಜೀವನ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಏತ ನೀರಾವರಿ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ ವತಿಯಿಂದ ಪೂರ್ಣ ಪ್ರಮಾಣದ ಪುನಶ್ಚೇತನಕ್ಕೆ ಒತ್ತು ನೀಡಲಾಗಿದೆ ಎಂದರು.
ಹೊಸದಾಗಿ ಪಂಪು ಮೋಟರ್ ಹಾಗೂ ಎಂಎಸ್ ಪೈಪ್ ಅಳವಡಿಸುವ ಮೂಲಕ ಶಾಶ್ವತ ಪರಿಹಾರ ನೀಡಿ ಯೋಜನೆಯ ಲಾಭವನ್ನು ರೈತರು ಪಡೆಯುವ ಅವಕಾಶ ಕಲ್ಪಿಸಲಾಗುವುದು. ಮಳವಳ್ಳಿಯಿಂದ ಪೂರಿಗಾಲಿಗೆ ಸೇರುವ ರಸ್ತೆಗೆ ₹28 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿ ವಿಸ್ತರಿಸಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ರಾವಣಿ ಗ್ರಾಮದ ಪ್ರಮುಖ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.ಮಳವಳ್ಳಿ ನೀರಾವರಿ ಯೋಜನೆಗೆ ಹಿಂದೆ ₹400 ಕೋಟಿ ಅನುದಾನ ತರಲಾಗಿತ್ತು. ಪ್ರಸಕ್ತ ಬಜೆಟ್‌ನಲ್ಲಿ ಟಿ. ನರಸಿಪುರ ಮಳವಳ್ಳಿ ಭಾಗದ ಕಿರುಗಾವಲು ಕಲ್ಕುಣಿ, ಸುಜ್ಜಲೂರು ಸೇರಿದಂತೆ ಅಂಗ್ರಪುರತನಕ ನಾಲಾ ಆಧುನೀಕರಣ ಕಾಮಗಾರಿಗೆ ₹200 ಕೋಟಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ತಾಲೂಕಿನ ಅವ್ವೇರಹಳ್ಳಿ, ಹಂಗ್ರಾಪುರ, ಚನ್ನಪಿಳ್ಳೇಕೊಪ್ಪಲು, ಕಿರುಗಾವಲು, ಗುಗ್ನುನಹುಂಡಿ, ಹುಲ್ಲೇಗಾಲ, ಮಂಚನಹಳ್ಳಿ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ದೇವಿಪುರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ₹23 ಲಕ್ಷ ಕಾಂಪೌಂಡ್ ನಿರ್ಮಾಣ, ತಾಲೂಕಿನ ಎಂ.ಬಸವನಪುರ ಗ್ರಾಮದಲ್ಲಿ ₹1 ಕೋಟಿ ವೆಚ್ಚದಲ್ಲಿ ಸಿಸಿ ಚರಂಡಿ ನಿರ್ಮಾಣ ಹಾಗೂ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಎನ್.ಆರ್.ಎಲ್.ಎಂ. ವತಿಯಿಂದ ಅಕ್ಕ ಕೆಫೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ವೇಳೆ ಮನ್ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಕೃಷ್ಣೇಗೌಡ, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಜಿಪಂ ಎಇಇ ಅಪ್ಪಯ್ಯ ಭೋವಿ, ಲೋಕೋಪಯೋಗಿ ಇಲಾಖೆ ಎಇಇ ಎ.ಎಂ.ಸೋಮಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ನಿರ್ದೇಶಕರಾದ ಕೆ.ಜೆ.ದೇವರಾಜು, ದಿಲೀಪ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಿ.ಮಾದೇಶ್, ಕೆಪಿಸಿಸಿ ಸದಸ್ಯ ಸಿದ್ದೇಗೌಡ, ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು, ಗ್ರಾಪಂ ಮಾಜಿ ಅಧ್ಯಕ್ಷರಾದ ಮಹದೇವಸ್ವಾಮಿ, ಕೆ.ಸಿ.ಚೌಡೇಗೌಡ, ಗೋವಿಂದರಾಜು, ಮಾಜಿ ಉಪಾಧ್ಯಕ್ಷರಾದ ಡಿ.ಬಿ.ಬಸವರಾಜು, ಮಾದೇಗೌಡ, ಮುಖಂಡರಾದ ಸಿ.ಎಂ.ವೇದಮೂರ್ತಿ, ಬಂಕ್ ಮಹದೇವು, ಸಂತೋಷ್, ರಾಜೇಶ್, ದೀಪು, ಚೇತನ್ ನಾಯಕ್, ರವೀಂದ್ರ ಪಾಲ್ಗೊಂಡಿದ್ದರು.