ಗೊರಿನಬೆಲೆಯಲ್ಲಿ ಸಸಿ ಸಂರಕ್ಷಣೆಗೆ ಉಚಿತ ಕೊಳವೆಬಾವಿ ಸೇವೆ

KannadaprabhaNewsNetwork |  
Published : Jul 30, 2026, 02:00 AM IST
ಪೋಟೋ 1 : ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗೊರಿನಬೆಲೆ ಗ್ರಾಮದ ಸರ್ಕಾರಿ ಜಾಗದಲ್ಲಿ ಸಸಿಗಳ ಸಂರಕ್ಷಣೆಗೆ ಬಿ.ಸಿ.ಬಿ ಬೋರ್ ವೆಲ್ ಮಾಲೀಕರಾದ ಹಂಚಿಪುರ ಚಿಕ್ಕೇಗೌಡ ಬೋರ್ ವೆಲ್ ಗೆ ಚಾಲನೆ ನೀಡಿದರು | Kannada Prabha

ಸಾರಾಂಶ

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಗೊರಿನಬೆಲೆ ಗ್ರಾಮದ ಸರ್ಕಾರಿ ಜಾಗದಲ್ಲಿ ಗ್ರಾಮದ ಯುವಕರು ನೆಟ್ಟಿರುವ ಸಸಿಗಳು ಒಣಗುತ್ತಿರುವುದನ್ನು ಗಮನಿಸಿದ ಬಿಸಿಬಿ ಕೊಳವೆಬಾವಿ ಮಾಲೀಕ ಹಂಚಿಪುರ ಚಿಕ್ಕೇಗೌಡ ಮಾನವೀಯತೆಯಿಂದ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಟ್ಟು ಪರಿಸರ ಕಾಳಜಿಗೆ ಮಾದರಿಯಾಗಿದ್ದಾರೆ

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಗೊರಿನಬೆಲೆ ಗ್ರಾಮದ ಸರ್ಕಾರಿ ಜಾಗದಲ್ಲಿ ಗ್ರಾಮದ ಯುವಕರು ನೆಟ್ಟಿರುವ ಸಸಿಗಳು ಒಣಗುತ್ತಿರುವುದನ್ನು ಗಮನಿಸಿದ ಬಿಸಿಬಿ ಕೊಳವೆಬಾವಿ ಮಾಲೀಕ ಹಂಚಿಪುರ ಚಿಕ್ಕೇಗೌಡ ಮಾನವೀಯತೆಯಿಂದ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಟ್ಟು ಪರಿಸರ ಕಾಳಜಿಗೆ ಮಾದರಿಯಾಗಿದ್ದಾರೆ.

ಗೊರಿನಬೆಲೆ ಗ್ರಾಮದ ಸರ್ಕಾರಿ ಜಾಗದಲ್ಲಿ ಗ್ರಾಮದ ಯುವಕರು ಹಾಗೂ ಪರಿಸರಾಸಕ್ತರು ಇತ್ತೀಚೆಗೆ ವಿವಿಧ ಜಾತಿಯ ಸಸಿಗಳನ್ನು ನೆಟ್ಟಿದ್ದರು. ಸಸಿಗಳನ್ನು ನೆಟ್ಟ ಬಳಿಕ ಅವುಗಳನ್ನು ಸಂರಕ್ಷಿಸಲು ನಿಯಮಿತವಾಗಿ ನೀರುಣಿಸುವ ಅಗತ್ಯವಿದೆ. ಆದರೆ ಗ್ರಾಮದಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ಸಸಿಗಳಿಗೆ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗದೆ ಹಲವು ಸಸಿಗಳು ನೀರಿನ ಕೊರತೆಯಿಂದ ಒಣಗುವ ಸ್ಥಿತಿಗೆ ತಲುಪಿದ್ದವು.

ಸಸಿಗಳು ಒಣಗುತ್ತಿರುವುದನ್ನು ಕಂಡ ಯುವಕರು, ಸಸಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದ ವಿಚಾರವನ್ನು ಅರಿತ ಬಿಸಿಬಿ ಬೋರ್ ವೆಲ್ ಮಾಲೀಕದ ಹಂಚಿಪುರ ಚಿಕ್ಕೇಗೌಡ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂಬ ಮನೋಭಾವದಿಂದ ಸ್ವಯಂಪ್ರೇರಿತರಾಗಿ ಯಾವುದೇ ಹಣ ಪಡೆಯದೆ ಉಚಿತವಾಗಿ ಬೋರ್ವೆಲ್ ಕೊರೆಸಿಕೊಟ್ಟಿದ್ದಾರೆ.ಪೋಟೋ 1 :

ನೆಲಮಂಗಲ ತಾಲೂಕಿನ ಗೊರಿನಬೆಲೆ ಗ್ರಾಮದ ಸರ್ಕಾರಿ ಜಾಗದಲ್ಲಿ ಸಸಿಗಳ ಸಂರಕ್ಷಣೆಗಾಗಿ ಕೊರೆಯುವ ಕೊಳವೆಬಾವಿಗೆ ಬಿಸಿಬಿ ಕೊಳವೆಬಾವಿ ಮಾಲೀಕ ಹಂಚಿಪುರ ಚಿಕ್ಕೇಗೌಡ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವಸ್ಥಾನಗಳ ಹುಂಡಿಗೆ 360 ಡಿಗ್ರಿ ಸಿಸಿಟಿವಿ ಭದ್ರತೆ: ಎಡಿಸಿ ಝುಬೇರ್ ಸೂಚನೆ
ಶ್ರದ್ಧಾ, ಭಕ್ತಿಯಿಂದ ನಡೆದ ಗುರುಪೂರ್ಣಿಮೆ