ಕೇರಳದ ಕಾಸರಗೋಡಿನ ಜಿಲ್ಲೆ ಕುಂಬಳೆಯಲ್ಲಿ ಜೆಕೆ ಅಕಾಡೆಮಿ ಆಶ್ರಯದಲ್ಲಿ ಜರುಗಿದ ಅಖಿಲ ಭಾರತ ಆಹ್ವಾನಿತ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಹಾವೇರಿ ಜಿಲ್ಲಾ ಪಂಚಾಯತ್ ಮಹಿಳಾ ತಂಡವು ದ್ವಿತೀಯ ಸ್ಥಾನ ಪಡೆಯಿತು.

ಬ್ಯಾಡಗಿ: ಕೇರಳದ ಕಾಸರಗೋಡಿನ ಜಿಲ್ಲೆ ಕುಂಬಳೆಯಲ್ಲಿ ಜೆಕೆ ಅಕಾಡೆಮಿ ಆಶ್ರಯದಲ್ಲಿ ಜರುಗಿದ ಅಖಿಲ ಭಾರತ ಆಹ್ವಾನಿತ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಹಾವೇರಿ ಜಿಲ್ಲಾ ಪಂಚಾಯತ್ ಮಹಿಳಾ ತಂಡವು ದ್ವಿತೀಯ ಸ್ಥಾನ ಪಡೆಯಿತು. ಕುತೂಹಲಕಾರಿ ಅಂತಿಮ ಪಂದ್ಯದಲ್ಲಿ ಅತಿಥೇಯ ಜೆಕೆ ಅಕಾಡೆಮಿ ತಂಡದ ವಿರುದ್ಧ ಕೇವಲ 1 ಅಂಕದಿಂದ ತಂಡವು ಪರಾಭವಗೊಂಡಿತು. ಸೂಪರ್ ಟೆನ್ (ಒಟ್ಟು14 ಅಂಕ) ಬಾಚುವ ಮೂಲಕ ಸರ್ವಶ್ರೇಷ್ಠ ಪ್ರದರ್ಶನ ನೀಡಿದ ಅರ್ಪಿತಾ ಪಂದ್ಯಾವಳಿಯ ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿ ಗಿಟ್ಟಿಸಿದರು. ಕೋಚ ಎಲ್.ಮಹ್ಮದ್ ಇಸ್ಮಾಯಿಲ್ ಹಾಗೂ ಮಂಜುಳ ಭಜಂತ್ರಿ ಅವರ ಮಾರ್ಗದರ್ಶದಲ್ಲಿ ಸಾಂಘಿಕ ಹೋರಾಟ ನಡೆಸಿದ ತಂಡವು ಪ್ರಶಸ್ತಿ ಹಂತವನ್ನು ತಲುಪಿತು, ತಂಡದ ವ್ಯವಸ್ಥಾಪಕರಾಗಿ ರಾಷ್ಟ್ರೀಯ ತೀರ್ಪುಗಾರ ಮಲ್ಲಿಕಾರ್ಜುನ ಕೋಡಿಹಳ್ಳಿ ಹಾಗೂ ಪ್ರಕಾಶ ತಾವರಗಿ ಕೆಲಸ ನಿರ್ವಹಿಸಿದರು.

ಅಭಿನಂದನೆ: ದ್ವಿತೀಯ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದ ಜಿಲ್ಲಾ ಪಂಚಾಯತ್ ಮಹಿಳಾ ತಂಡಕ್ಕೆ ಬ್ಯಾಡಗಿಯ ತಾಪಂ.ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಸೇರಿದಂತೆ ಭಾರತ ತಂಡದ ಆಟಗಾರ ಜಗದೀಶ ಕುಂಬಳೆ, ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಬ್ಯಾಡಗಿ ಇದರ ಪದಾಧಿಕಾರಿಗಳು ಹಾಗೂ ತೀರ್ಪುಗಾರರ ಮಂಡಳಿಯ ಸದಸ್ಯರು ಅಭಿನಂದಿದ್ದಾರೆ.