ಕೆಬಿಎನ್ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ಸೇವೆ ಆರಂಭ

KannadaprabhaNewsNetwork |  
Published : May 23, 2024, 01:02 AM IST
ಫೋಟೋ- ಕೆಬಿಎನಕೆಬಿಎನ ಮೆಡಿಕಲ್ ಡೀನ್ ಡಾ ಸಿದ್ದೇಶ್ ಸಿರ್ವಾರ್‌, ಆಸ್ಪತ್ರೆಯ ಒಬಿಜಿ ಮುಖ್ಯಸ್ಥೆ ಡಾ. ಸುಜಾತಾ ಧಾಡೆಡ ಸುದ್ದಿಗೋಷ್ಠಿಯಲ್ಲಿದ್ದರು. | Kannada Prabha

ಸಾರಾಂಶ

ಕಲಬುರಗಿ ನಗರದ ಕೆಬಿಎನ್‌ ಆಸ್ಪತ್ರೆಯಲ್ಲಿ ಸಾಮಾನ್ಯ ಹಾಗೂ ಬಡ ಜನರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮೇ 1ರಿಂದ ಉಚಿತ ಹೆರಿಗೆ ಸೇವೆ ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸಾಮಾನ್ಯ ಹಾಗೂ ಬಡ ಜನರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮೇ 1ರಿಂದ ಕೆಬಿಎನ್ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ಸೇವೆ ಆರಂಭಿಸಲಾಗಿದೆ. ಗರ್ಭೀಣಿಯರಿಗೆ ಉಚಿತ ಅವಶ್ಯವಿರುವ ಪ್ರತಿಯೊಂದು ರಕ್ತ ತಪಾಸಣೆ ಮತ್ತು ಸ್ಕ್ಯಾನಿಂಗಗಳನ್ನು ಉಚಿತವಾಗಿ ಮಾಡಲಾಗುವುದು ಅಲ್ಲದೇ ಸಾಮಾನ್ಯ ಹೆರಿಗೆ ಮತ್ತು ಸಿಜೇರಿಯನ್ ಹೆರಿಗೆ ಒಂದನ್ನು ಉಚಿತವಾಗಿ ಮಾಡಲಾಗುವುದು. ಅವಶ್ಯಕತೆ ಇದ್ದಲ್ಲಿ ICU CARE ಕೂಡಾ ಉಚಿತವಾಗಿ ನೀಡಲಾಗುವುದು. ಎಂದು ಕೆಬಿಎನ ಮೆಡಿಕಲ್ ಡೀನ್ ಡಾ ಸಿದ್ದೇಶ್ ಸಿರ್ವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಲ್ಯಾಣ ಕರ್ನಾಟಕದ ಭಾಗದಲ್ಲಿನ ಗರ್ಭಿಣಿಯರಿಗೆ ಪ್ರತಿ ದಿನ ನುರಿತ ಹೆರಿಗೆ ಶಸ್ತ್ರ ಚಿಕಿತ್ಸಕರಿಂದ ಉಚಿತ ‌ ತಪಾಸಣೆ ಸಮಾಲೋಚನೆ ಮತ್ತು ಅಗತ್ಯ ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತ. ಕೆಬಿಎನ ಆಸ್ಪತ್ರೆಯಲ್ಲಿ ನೊಂದಣಿಯಾಗಿನಿಂದ ಹೆರಿಗೆ ಆಗಿ ತಾಯಿ ಮತ್ತು ಮಗು ಸಂಪೂರ್ಣವಾಗಿ ಚೇತರಿಸಿಕೊಳ್ಳುವತನಕ ಅವರಿಗೆ ಎಲ್ಲ ಸೌಲಭ್ಯಗಳನ್ನು ಮತ್ತು ಆಹಾರರವನ್ನು ಉಚಿತವಾಗಿ ಪೂರೈಸಲಾಗುವುದು ಎಂದು ಮೆಡಿಕಲ್ ಸುಪೀಯಿಟೆನಡೆಂಟ್ ಡಾ. ಸಿದ್ದಲಿಂಗ್ ಚೆಂಗ್ಟಿ ಮಾಹಿತಿ ನೀಡಿದರು.

ಪ್ರಸ್ತುತ ಸಮಯದಲ್ಲಿ ಕೆಬಿಎನ್ ಆಸ್ಪತ್ರೆಯಲ್ಲಿ 13 ವಿಭಾಗಗಳಿದ್ದು 250 ವೈದ್ಯರು ಕಾರ್ಯನಿರತರಾಗಿದ್ದಾರೆ. ಅಲ್ಲದೇ 6 ಸೂಪರ್ ಸ್ಪೆಷಲ್ ವಿಭಾಗಗಳಿವೆ. 700 ಹಾಸಿಗೆಗಳು, 100 ಎಮರ್ಜೆನ್ಸಿ ಬೇಡ್ಸ್ ಇವೆ. ಉತ್ತರ ಕರ್ನಾಟಕದ ಮೊದಲ ನೋನ ಇನ್ವೆಸೀವ ಕಾರೋನರಿ ಸಿಟಿ ಹೊಂದಿದ ಹಿರಿಮೆ ಕೆಬಿಎನಗೆ ಇದೆ. ಕಡಿಮೆ ಫೀಸ್ ನೊಂದಿಗೆ ಹೈಟೆಕ ಐ ಸಿ ಸಿ ಯು ಸೌಲಭ್ಯಇದೆ. ಮುಂಬರುವ ದಿನಗಳಲ್ಲಿ ಹೊಸ ಕಟ್ಟಡ, 11 ಮೋಡ್ಯೂಲರ ಆಪರೇಷನ್ ಥೀಯೇಟರ, ಹೊಸ ಓ ಪಿಡಿ, ಹೊಸ ವರ್ಡ್ಸ್, ಸೂಪರ್ ಸ್ಪೆಷಲಿಟಿ ವಿಂಗ್ಸ್, ಕಾರ್ಯಜಾರಿಗೆಯಲ್ಲಿದ್ದು ಅತಿ ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ ಎಂದು ಆಸ್ಪತ್ರೆಯ ಆಡಳಿತಧಿಕಾರಿ ಮತ್ತು ಸಹಾಯಕ ರಿಜಿಸ್ಟ್ರಾರ್ ಡಾ. ರಾಧಿಕಾ ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರಿಗೆ ಕಪಾಳಮೋಕ್ಷ: 27 ಜನರ ವಿರುದ್ಧ ಕೇಸ್‌
ಮಹಾಲಿಂಗಪುರದಲ್ಲಿ ಇಂದು ಜನುಮದ ಜೋಡಿ ಕಾರ್ಯಕ್ರಮ