ಸಂಸ್ಕಾರ ನೋಟ್ ಪುಸ್ತಕಗಳ ಉಚಿತ ವಿತರಣೆ

KannadaprabhaNewsNetwork |  
Published : Jun 16, 2026, 02:45 AM IST
15ನೋಟ್‌ಬುಕ್ | Kannada Prabha

ಸಾರಾಂಶ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಗರದ ಟಿ.ಎ. ಪೈ ಮಾಡರ್ನ್ ಹಿರಿಯ ಪ್ರಾಥಮಿಕ ಶಾಲೆಯ 74 ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಸ್ಕಾರ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಉಡುಪಿ: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಗರದ ಟಿ.ಎ. ಪೈ ಮಾಡರ್ನ್ ಹಿರಿಯ ಪ್ರಾಥಮಿಕ ಶಾಲೆಯ 74 ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಸ್ಕಾರ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂಸ್ಕಾರ ಪುಸ್ತಕಗಳ ಮುಖಪುಟ ಹಾಗೂ ಹಿಂಬದಿಯ ಪುಟಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರ ಪುರುಷರ ಹಾಗೂ ಉತ್ತಮ ರಾಜ್ಯಾಡಳಿತ ನಡೆಸಿ ಪ್ರಜೆಗಳ ಹಿತಕ್ಕಾಗಿ ಹೋರಾಡಿದ ರಾಜ ಮಹಾರಾಜರ ಆದರ್ಶಗಳು ನೀಡಲಾಗಿದೆ. ಒಳಗಿನ ಪುಟಗಳಲ್ಲಿ ಸುಸಂಸ್ಕಾರ ಮತ್ತು ನೈತಿಕತೆ ಕುರಿತು ವಿಷಯಗಳನ್ನೊಳಗೊಂಡಿದೆ. ಅದನ್ನು ಓದಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಮಕ್ಕಳು ‘ಆದರ್ಶ ವಿದ್ಯಾರ್ಥಿ’ಯಾಗಿ ರೂಪುಗೊಳ್ಳುವವರ ಎಂಬ ಉದ್ದೇಶದಿಂದ ಈ ಪುಸ್ತಕಗಳನ್ನು ವಿತರಿಸಲಾಯಿತು.

ಈ ಸಂದರ್ಭ ಸಂಸ್ಥೆಯ ಕಾರ್ಯಕರ್ತರಾದ ಪ್ರತಿಮಾ, ವನಮಾಲಾ, ಗೀತಾ ಆಚಾರ್ಯ, ದಿನೇಶ್ ಮತ್ತು ಬಾಲಕೃಷ್ಣ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಉತ್ತಮ ಸಹಕಾರ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಸಿಸಿ ಬ್ಯಾಂಕ್‌: ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ, ಪ್ರಶಸ್ತಿ ಪ್ರದಾನ
ನ್ಯಾಯದಾನಕ್ಕೆ ಮುಕ್ತ ವಾತಾವರಣ ಅಗತ್ಯ: ನ್ಯಾ. ನರೇಂದ್ರ ಪ್ರಸಾದ್