ಕನ್ನಡಪ್ರಭ ವಾರ್ತೆ, ಬೀದರ್
100 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು. ಉಚಿತ ಸ್ಥಾನಗಳಲ್ಲಿ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಓದಿದ, ತಂದೆಯನ್ನು ಕಳೆದುಕೊಂಡ ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಆದ್ಯತೆ ಕೊಡಲಾಗುವುದು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಉಚಿತ ಶಿಕ್ಷಣ ಯೋಜನೆಯ ಉದ್ದೇಶವಾಗಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಎರಡು ವರ್ಷದ ಬೋಧನಾ ಶುಲ್ಕದ ಸಂಪೂರ್ಣ ರಿಯಾಯಿತಿ ಇರಲಿದೆ. ಅರ್ಹ ವಿದ್ಯಾರ್ಥಿಗಳು ಸಮೂಹದ ಪದವಿ ಪೂರ್ವ ಕಾಲೇಜುಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.ಎಐಸಿಯುಗೆ ಶೇ.100 ಫಲಿತಾಂಶ:
ವಿಶೇಷ ನಿಗಾ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಮುಖ್ಯವಾಹಿನಿಗೆ ತರುವ ಹಾಗೂ ಅವರ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಶಾಹೀನ್ ಶೈಕ್ಷಣಿಕ ತುರ್ತು ನಿಗಾ ಘಟಕದ ಮಾದರಿಯನ್ನು ಪ್ರಶಂಸಿಸಿರುವ ಜಾಗತಿಕ ಮಟ್ಟದ ನಿಯತಕಾಲಿಕೆಯ ಭಾರತೀಯ ಆವೃತ್ತಿಯಾದ ಫೋರ್ಬ್ಸ್ ಇಂಡಿಯಾ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್ ಅವರನ್ನು ''''''''‘ಲೀಡರ್ ಆಫ್ ಟುಮಾರೋ’ ಎಂದು ಗುರುತಿಸಿದೆ.
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣ, ಅನುತ್ತೀರ್ಣರಾದವರಿಗೆ ವಿಷಯಗಳ ಮೇಲೆ ಹಿಡಿತವಿಲ್ಲದ, ವಿಷಯಗಳನ್ನು ಅರಿತುಕೊಳ್ಳಲಾಗದ ವಿದ್ಯಾರ್ಥಿಗಳ ನೀಟ್ / ಜೆಇಇ ಕನಸು ಸಾಕಾರಗೊಳಿಸಲು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಮೂರು ವರ್ಷದ ಪ್ರಿ ಪ್ಲಸ್ ಟು ಫೌಂಡೇಷನ್ ಕೋರ್ಸ್ ಸಹ ಆರಂಭಿಸಿದೆ ಎಂದು ಅಬ್ದುಲ್ ಖದೀರ್ ತಿಳಿಸಿದ್ದಾರೆ.