ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಗೆ 15ನೇ ಬಾರಿಗೆ ಶೇ.100 ರಷ್ಟು ಫಲಿತಾಂಶ

KannadaprabhaNewsNetwork |  
Published : Apr 26, 2026, 03:00 AM IST
ತರೀಕೆರೆ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಗೆ 15ನೇ ಬಾರಿಗೆ ಶೇ.100 ರಷ್ಟು ಫಲಿತಾಂಶ | Kannada Prabha

ಸಾರಾಂಶ

ತರೀಕೆರೆ 2025 - 26 ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗೆ ಹಾಜರಾದ 58 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸತತ 15 ನೇ ಬಾರಿಗೆ ಶೇ. 100 ಫಲಿತಾಂಶ ಪಡೆದಿದೆ. ಅತ್ಯುನ್ನತ ಶ್ರೇಣಿಯಲ್ಲಿ 27, ಪ್ರಥಮ ಶ್ರೇಣಿಯಲ್ಲಿ 24, ದ್ವಿತೀಯ ಶ್ರೇಣಿಯಲ್ಲಿ 5, ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ ಎಂದು ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆ ಪ್ರಾಂಶುಪಾಲ ಡಾ.ಕಾರ್ತಿಕೇಯನ್ ತಿಳಿಸಿದ್ದಾರೆ.

ಪ್ರತೀಕ್ಷ ಎನ್ ಎನ್ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿಗೆ ಟಾಪರ್

ಕನ್ನಡಪ್ರಭ ವಾರ್ತೆ, ತರೀಕೆರೆ

2025 - 26 ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗೆ ಹಾಜರಾದ 58 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸತತ 15 ನೇ ಬಾರಿಗೆ ಶೇ. 100 ಫಲಿತಾಂಶ ಪಡೆದಿದೆ. ಅತ್ಯುನ್ನತ ಶ್ರೇಣಿಯಲ್ಲಿ 27, ಪ್ರಥಮ ಶ್ರೇಣಿಯಲ್ಲಿ 24, ದ್ವಿತೀಯ ಶ್ರೇಣಿಯಲ್ಲಿ 5, ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ ಎಂದು ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆ ಪ್ರಾಂಶುಪಾಲ ಡಾ.ಕಾರ್ತಿಕೇಯನ್ ತಿಳಿಸಿದ್ದಾರೆ.ಪ್ರತೀಕ್ಷ ಎನ್,ಎನ್ ವಿದ್ಯಾರ್ಥಿನಿ 621 ಅಂಕಗಳಿಸಿ ಕನ್ನಡ 125, ಇಂಗ್ಲೀಷ್ 100, ಹಿಂದಿ 100, ಗಣಿತ 100, ವಿಜ್ಞಾನ 96, ಸಮಾಜ ವಿಜ್ಞಾನ 100 ಅಂಕ ಪಡೆದು ತರೀಕೆರೆ - ಅಜ್ಜಂಪುರ ತಾಲೂಕಿಗೆ ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.ಚೈತನ್ಯ. ಡಿ ಇವರು 625 ಅಂಕಗಳಿಗೆ 619 ಅಂಕ ಪಡೆದು ಕನ್ನಡ 125, ಇಂಗ್ಲೀಷ್ 99, ಹಿಂದಿ 99, ಗಣಿತ 98, ವಿಜ್ಞಾನ 98, ಸಮಾಜ ವಿಜ್ಞಾನ 100 ಅಂಕ ಪಡೆದು ತರೀಕೆರೆ - ಅಜ್ಜಂಪುರ ತಾಲೂಕಿಗೆ ಮತ್ತು ಶಾಲೆಗೆ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ನಯನಾ ಟಿ. ಸಿ.625 ಅಂಕಗಳಿಗೆ 616 ಅಂಕ ಪಡೆದು ಕನ್ನಡ 125, ಇಂಗ್ಲೀಷ್ 99, ಹಿಂದಿ 100, ಗಣಿತ 95, ವಿಜ್ಞಾನ 97, ಸಮಾಜ ವಿಜ್ಞಾನ 100 ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ, ಒಟ್ಟಾರೆಯಾಗಿ ಈ ಬಾರಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಕನ್ನಡ ಭಾಷಾ ವಿಷಯದಲ್ಲಿ 6 ವಿದ್ಯಾರ್ಥಿಗಳು 125 ಅಂಕಗಳಿಗೆ 125 ಅಂಕ ಪಡೆದರೆ, ಇಂಗ್ಲಿಷ್ ಭಾಷಾ ವಿಷಯದಲ್ಲಿ 2 ವಿದ್ಯಾರ್ಥಿಗಳು, ಹಿಂದಿ ಭಾಷಾ ವಿಷಯದಲ್ಲಿ 8 ವಿದ್ಯಾರ್ಥಿಗಳು, ಸಮಾಜ ವಿಜ್ಞಾನ ವಿಷಯದಲ್ಲಿ 6 ವಿದ್ಯಾರ್ಥಿಗಳು, ಗಣಿತ ವಿಷಯದಲ್ಲಿ ಒಬ್ಬ ವಿದ್ಯಾರ್ಥಿ 100 ಅಂಕಗಳಿಗೆ 100 ಅಂಕ ಪಡೆದು ಶಾಲೆಯ ಕೀರ್ತಿ ಇಮ್ಮಡಿಗೊಳಿಸಿರುತ್ತಾರೆ.

ಈ ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳು ಹಾಗೂ ತರಬೇತಿ ನೀಡಿದ ಶಾಲೆ ಎಲ್ಲಾ ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಟಿ. ಜಿ. ಶಶಾಂಕ್ ಮತ್ತು ಪ್ರಾಂಶುಪಾಲ ಡಾ. ಕಾರ್ತಿಕೇಯನ್ ಅಭಿನಂದಿಸಿದ್ದಾರೆ.-

23ಕೆಟಿಆರ್.ಕೆ.4 ಃ ಪ್ರತೀಕ್ಷ ಎನ್,ಎನ್23ಕೆಟಿಆರ್.ಕೆ.5ಃ ಚೈತನ್ಯ ಡಿ23ಕೆಟಿಆರ್.ಕೆ.6ಃ ನಯನ ಟಿ ಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾತಿ ಮಸೂದೆ ತಡೆದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪ್ರತಿಭಟನೆ
ಒಳ ಮೀಸಲಾತಿ ಹಂಚಿಕೆ ಅವೈಜ್ಞಾನಿಕ-ಮಾಜಿ ಸಚಿವ ಬಿ.ಸಿ. ಪಾಟೀಲ್ ಆರೋಪ