ಭಾರತೀ ವಿದ್ಯಾಸಂಸ್ಥೆಯ ಸಿಇಒ ಆಶಯ್ ಜಿ.ಮಧು ಹುಟ್ಟುಹಬ್ಬ ಆಚರಣೆ

KannadaprabhaNewsNetwork |  
Published : Apr 26, 2026, 03:00 AM IST
23ಕೆಎಂಎನ್ ಡಿ16 | Kannada Prabha

ಸಾರಾಂಶ

ನನ್ನ ತಂದೆ ಚುನಾವಣೆಯಲ್ಲಿ ಸೋತ ವೇಳೆ ಕುಗ್ಗಲಿಲ್ಲ ಅವರ ಬೆನ್ನೆಲುಬಾಗಿ ಅಭಿಮಾನಿಗಳು ನಿಂತು ಧೈರ್ಯ ಹೇಳಿ ಅವರಿಗೆ ಆತ್ಮ ಸ್ಥೈರ್ಯ ತುಂಬಿದ್ದಾರೆ. ನಿಮ್ಮ ಋಣ ತೀರಿಸಲು ನಮ್ಮ ಕುಟುಂಬ ಸದಾ ಸಿದ್ಧವಿದೆ. ಅವರಿಗೆ ರಾಜಕೀಯವಾಗಿ ಮತ್ತಷ್ಟು ಶಕ್ತಿ ತುಂಬಲು ನಿಮ್ಮ ಸಹಕಾರ ಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಭಾರತೀ ವಿದ್ಯಾ ಸಂಸ್ಥೆಯಲ್ಲಿ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಶಯ್ ಜಿ.ಮಧು ಹುಟ್ಟುಹಬ್ಬವನ್ನು ಟ್ರಸ್ಟ್‌ ಅಂಗ ಸಂಸ್ಥೆಗಳ ಮುಖ್ಯಸ್ಥರು, ಮುಖಂಡರು, ಮಾಜಿ ಸಂಸದ ಜಿ.ಮಾದೇಗೌಡ, ಮಧು ಜಿ.ಮಾದೇಗೌಡ ಅಭಿಮಾನಿಗಳು ಆಚರಿಸಿದರು.

ಹುಟ್ಟುಹಬ್ಬವನ್ನು ಆಶಯ್ ಜಿ.ಮಧು ಅವರು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ಇದಕ್ಕೂ ಮೊದಲು ಮನೆ ದೇವರು ಕಾರ್ಕಹಳ್ಳಿ ಶ್ರೀಬಸವೇಶ್ವರಸ್ವಾಮಿ ಮತ್ತು ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಭಿಮಾನಿಗಳು, ಮುಖಂಡರು ಬೃಹತ್ ಹಾರ ಹಾಕಿ ಅಭಿನಂಧಿಸಿ ಜನ್ಮದಿನದ ಶುಭಕೋರಿದರು.

ಬಳಿಕ ಆಶಯ್ ಜಿ. ಮಧು ಮಾತನಾಡಿ, ನನ್ನ ತಾತ ದಿ.ಜಿ.ಮಾದೇಗೌಡರು, ತಂದೆ ಮಧು ಜಿ.ಮಾದೇಗೌಡರ ಅಭಿಮಾನಿಗಳು ನನ್ನ ಹುಟ್ಟು ಹಬ್ಬವನ್ನು ಆಚರಿಸಿದ್ದು, ಅಭಿಮಾನಿಗಳ ಪ್ರೀತಿಗೆ ಚಿರಋಣಿಯಾಗಿದ್ದೇನೆ. ನಿಮ್ಮಗಳ ಸೇವೆಗೆ ನಾನು ಸದಾ ಸಿದ್ದನಿದ್ದೇನೆ ಎಂದರು.

ನನ್ನ ತಂದೆ ಚುನಾವಣೆಯಲ್ಲಿ ಸೋತ ವೇಳೆ ಕುಗ್ಗಲಿಲ್ಲ ಅವರ ಬೆನ್ನೆಲುಬಾಗಿ ಅಭಿಮಾನಿಗಳು ನಿಂತು ಧೈರ್ಯ ಹೇಳಿ ಅವರಿಗೆ ಆತ್ಮ ಸ್ಥೈರ್ಯ ತುಂಬಿದ್ದಾರೆ. ನಿಮ್ಮ ಋಣ ತೀರಿಸಲು ನಮ್ಮ ಕುಟುಂಬ ಸದಾ ಸಿದ್ಧವಿದೆ. ಅವರಿಗೆ ರಾಜಕೀಯವಾಗಿ ಮತ್ತಷ್ಟು ಶಕ್ತಿ ತುಂಬಲು ನಿಮ್ಮ ಸಹಕಾರ ಬೇಕು ಎಂದರು.

ಈ ವೇಳೆ ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ, ಮನ್ಮುಲ್ ಮಾಜಿ ನಿರ್ದೇಶಕ ಎ.ಸಿ.ಸತೀಶ್, ತಾಪಂ ಮಾಜಿ ಸದಸ್ಯರಾದ ವೈ.ಎಂ.ಬೋರೇಗೌಡ, ಬಿ.ಗಿರೀಶ್, ಭರತೇಶ್, ಮುಖಂಡರಾದ ಆರ್.ಸಿದ್ದಪ್ಪ, ಮದ್ದೂರು ಅವಿನಾಶ್, ಕೆ.ವಿ.ಶ್ರೀನಿವಾಸ್, ಮೆಳ್ಳಹಳ್ಳಿ ವಿನಯ್ ಹೊನ್ನೇಗೌಡ, ಕಾರ್ಕಹಳ್ಳಿ ಸ್ವರೂಪ್, ಕೆ.ಟಿ.ಶ್ರೀನಿವಾಸ್, ಕೆ.ಕಬ್ಬಾಳಯ್ಯ, ಕಳ್ಳಿಮೆಳ್ಳೆದೊಡ್ಡಿ ಪ್ರಸನ್ನಕುಮಾರ್, ಮಿಥುನ್, ಪ್ರಮೋದ್, ನಿಖಿಲ್ ಸೇರಿದಂತೆ ಭಾರತೀ ವಿದ್ಯಾಸಂಸ್ಥೆ ಅಂಗ ಸಂಸ್ಥೆಗಳ ಪ್ರಾಂಶುಪಾಲರು, ಸಿಬ್ಬಂದಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾತಿ ಮಸೂದೆ ತಡೆದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪ್ರತಿಭಟನೆ
ಒಳ ಮೀಸಲಾತಿ ಹಂಚಿಕೆ ಅವೈಜ್ಞಾನಿಕ-ಮಾಜಿ ಸಚಿವ ಬಿ.ಸಿ. ಪಾಟೀಲ್ ಆರೋಪ