ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಸೌಲಭ್ಯಗಳು: ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್

KannadaprabhaNewsNetwork |  
Published : Jun 03, 2025, 12:33 AM IST
ನಗರದ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಮಾತನಾಡಿದರು | Kannada Prabha

ಸಾರಾಂಶ

ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿನಿಯರು, ಗುಣಮಟ್ಟದ ಶಿಕ್ಷಣ ಪಡೆಯಲು ಇಲ್ಲಿ ಸಾಧ್ಯವಾಗುತ್ತಿದೆ. ನುರಿತ ಉಪನ್ಯಾಸಕರಿದ್ದಾರೆ. ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟ ಸೇರಿದಂತೆ ಇತರೆ ಸೌಲಭ್ಯಗಳು ಇಲ್ಲಿ ಇವೆ.

ಅರಸೀಕೆರೆ: ಸರ್ಕಾರದ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಉಚಿತ ಸೌಲಭ್ಯಗಳನ್ನು ಪೋಷಕರು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ತಮ್ಮ ಮಕ್ಕಳಿಗೆ ದೊರಕಿಸಿಕೊಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಕರೆ ನೀಡಿದರು.

ಅವರು ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಿ ಮಾತನಾಡಿ, ನೂತನ ಶೈಕ್ಷಣಿಕ ವರ್ಷಕ್ಕೆ ಉಚಿತವಾಗಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ಶೇ. 85ರಷ್ಟು ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ, ಸಮವಸ್ತ್ರಗಳು ವಿತರಣೆಯಾಗುತ್ತಿವೆ ಎಂದರು.

ತಾಲೂಕಿನಲ್ಲಿ ಇರುವ ಏಕೈಕ ಬಾಲಕಿಯರ ಪ್ರೌಢಶಾಲೆ ನಗರದ ಸರ್ಕಾರಿ ಶಾಲೆಯಾಗಿದ್ದು, ಇಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಸ್ವಾವಲಂಭಿಗಳಾಗಲು ಪೂರಕವಾದ ಬ್ಯೂಟಿಷಿಯನ್ ತರಬೇತಿಯನ್ನು ನೀಡಿ ಪ್ರಮಾಣ ಪತ್ರ ನೀಡಲಾಗುತ್ತದೆ. ಇದನ್ನು ಕಲಿತ ವಿದ್ಯಾರ್ಥಿನಿಯರು ಬ್ಯೂಟಿ ಪಾರ್ಲರ್ ತೆರೆಯಬಹುದು, ಇಲ್ಲವೇ ಈ ಅರ್ಹತೆಯ ಮೇಲೆ ಬೇರೆ ಕೆಲಸಗಳನ್ನು ಮಾಡಬಹುದು ಎಂದರು.

9ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ಸಹ ಪ್ರಾರಂಭಗೊಂಡು ಇನ್ಫಾರ್ಮೇಷನ್ ಆ್ಯಂಡ್ ಟೆಲಿ ಕಮ್ಯುನಿಕೇಷನ್ ಕೋರ್ಸ್ ಸಹ ಶಿಕ್ಷಣದೊಂದಿಗೆ ಉಚಿತವಾಗಿ ಪಡೆಯಬಹುದಾಗಿದೆ. ಪಿಯುಸಿಯಲ್ಲಿ ಇದನ್ನು ಮುಂದುವರಿಸಬಹುದು, ಇದು ಉದ್ಯೋಗಕ್ಕೆ ಸಹಕಾರಿಯಾಗುತ್ತದೆ, ಈ ಎಲ್ಲಾ ಸೌಲಭ್ಯಗಳು ಇರುವ ಶಾಲೆಗೆ ದಾಖಲಿಸುವ ಮೂಲಕ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕಾರಣರಾಗಬೇಕೆಂದು ಪೋಷಕರಿಗೆ ಕರೆ ನೀಡಿದ ಅವರು, ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಲಾಗುತ್ತದೆ, ಇಲ್ಲಿ ವ್ಯಾಸಂಗ ಮಾಡಿರುವ ಅನೇಕ ವಿದ್ಯಾರ್ಥಿನಿಯರು ಶಿಕ್ಷಣದೊಂದಿಗೆ ಬ್ಯೂಟಿಷಿಯನ್ ಮತ್ತು ಕಂಪ್ಯೂಟರ್ ಶಿಕ್ಷಣ ಪಡೆದು ಸ್ವಾವಲಂಭಿಗಳಾಗಿ ಬದುಕು ಕಟ್ಟಿಕೊಂಡಿರುವ ಉದಾಹರಣೆಗಳು ಇವೆ ಎಂದರು.

ಶಾಲಾ ಉಪ ಪ್ರಾಂಶುಪಾಲ ಜಗದೀಶ್ ಹಿರೇಮಠ್ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿನಿಯರು, ಗುಣಮಟ್ಟದ ಶಿಕ್ಷಣ ಪಡೆಯಲು ಇಲ್ಲಿ ಸಾಧ್ಯವಾಗುತ್ತಿದೆ. ನುರಿತ ಉಪನ್ಯಾಸಕರಿದ್ದಾರೆ. ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟ ಸೇರಿದಂತೆ ಇತರೆ ಸೌಲಭ್ಯಗಳು ಇಲ್ಲಿ ಇವೆ ಎಂದರು.

ಶಿಕ್ಷಣ ಸಂಯೋಜಕರಾದ ಮಲ್ಲೇಶ್, ಸತೀಶ್ ಹಾಗೂ ಶಾಲಾ ಶಿಕ್ಷಕ ವರ್ಗ ಮತ್ತು ಪೋಷಕರು ಉಪಸ್ಥಿತರಿದ್ದರು.

PREV

Recommended Stories

ಕೊಡಗಿನಲ್ಲಿ ಮಳೆಯಬ್ಬರ: ಹಲವು ಕಡೆ ಮನೆಗಳಿಗೆ ಹಾನಿ
ಗ್ರಾಮ ಆಡಳಿತ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಸ್ಪಂದನೆ ಅವಶ್ಯ: ಕೃಷ್ಣ ಬೈರೇಗೌಡ