ಸೂಫಿ ಸಂತರಾದ ಹಜ್ರತ್ ಖ್ವಾಜಾ ಗರೀಬ್ ನವಾಜ್ ರವರ ಉರುಸ್ ಸ್ಮರಣೆ
ಚಿಕಿತ್ಸೆಗಳು ದುಬಾರಿಯಾಗಿರುವ ಈ ದಿನಗಳಲ್ಲಿ ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ಸಹಕಾರಿಯಾಗಿವೆ ಎಂದು ಪುರಸಭೆ ಉಪಾಧ್ಯಕ್ಷೆ ಗೀತಾ ಗಿರಿರಾಜು ಹೇಳಿದರು.
ಪಟ್ಟಣದ ವಾರ್ಡ್ ಸಂಖ್ಯೆ 17ರಲ್ಲಿನ ಖಾಜಿ ಬೀದಿಯ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಸೂಫಿ ಸಂತರಾದ ಹಜ್ರತ್ ಖ್ವಾಜಾ ಗರೀಬ್ ನವಾಜ್ ರವರ ಉರುಸ್ ಸ್ಮರಣೆ ಅಂಗವಾಗಿ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಹಕಾರದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ , ಶಸ್ತ್ರಚಿಕಿತ್ಸೆ ಹಾಗೂ ಚರ್ಮರೋಗ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು .ಸೂಫಿ ಸಂತ ಖ್ವಾಜಾ ಗರೀಬ್ ನವಾಜ್ ರವರು ಮನುಕುಲದ ಒಳಿತಿಗೆ ಶ್ರಮಿಸಿದರು. ಅವರ ಸ್ಮರಣಾರ್ಥ ಆರೋಗ್ಯ ಶಿಬಿರ ಸಾರ್ಥಕ ಕಾರ್ಯಕ್ರಮವಾಗಿದೆ. ದೇಶದಲ್ಲಿ ಭಾವೈಕ್ಯತೆ ಸಂಕೇತವಾಗಿ ಅನ್ಯ ಧರ್ಮಗಳ ಮುಖಂಡರು ಎಲ್ಲ ಧರ್ಮಗಳ ಗೌರವಿಸುವ ಕೆಲಸ ಶ್ಲಾಘನೀಯ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ, ಆರೋಗ್ಯ ಇಲಾಖೆಯು ನಾಗರೀಕರ ಹಿತ ದೃಷ್ಟಿಯಿಂದ ಅನೇಕ ಆರೋಗ್ಯ ಸವಲತ್ತುಗಳನ್ನು ಹಮ್ಮಿಕೊಂಡಿದೆ. ಶಿಬಿರಗಳ ಮೂಲಕ ಆರೋಗ್ಯ ಇಲಾಖೆ ಜನರ ಬಳಿ ಬಂದು ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು. ಶಿಬಿರದ ಆಯೋಜಕ ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ, ಈಗಾಗಲೇ 16 ಆರೋಗ್ಯ ಹಾಗೂ ರಕ್ತ ದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಬಡವರು ಹೆಚ್ಚಿರುವ ಹಾಗೂ ಕೊಳಚೆ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು. ಶಿಬಿರದಲ್ಲಿ ಡಾ. ಕೆ.ಆರ್. ಪ್ರಸನ್ನಸಣ್ಣಕ್ಕಿ, ಪುರಸಭೆ ಮಾಜಿ ಉಪಾಧ್ಯಕ್ಷೆ ರಿಹಾನ ಪರ್ವಿನ್, ಪಾರ್ವತಮ್ಮ, ಸದಸ್ಯರಾದ ಶಮೀಮ್ ಭಾನು, ಟಿ.ಜಿ.ಮಂಜುನಾಥ್, ಮುಖಂಡರಾದ ಸಮೀವುಲ್ಲಾ ಶರೀಫ್, ಅಮೀರ್ ಜಾನ್ ಮಾತನಾಡಿದರು. ಮೊಹಮ್ಮದ್ ಫಾರೂಕ್, ಕಮರ್ ಪಾಷಾ, ಶಬ್ಬೀರ್ ಅಹ್ಮದ್ ಹಾಗೂ ಇತರರು ಇದ್ದರು.
27ತರೀಕೆರೆ 2.ತರೀಕೆರೆಯಲ್ಲಿ ಸೂಫಿ ಸಂತ ಹಜ್ರತ್ ಖ್ವಾಜಾ ಗರೀಬ್ ನವಾಜ್ ರವರ ಉರುಸ್ ಸ್ಮರಣೆ ಅಂಗವಾಗಿ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಹಕಾರದಲ್ಲಿ ಉಚಿತ ಕಣ್ಣಿನ ತಪಾಸಣೆ , ಶಸ್ತ್ರಚಿಕಿತ್ಸೆ ಹಾಗೂ ಚರ್ಮರೋಗ ತಪಾಸಣೆ ಶಿಬಿರ ನಡೆಯಿತು.