ಗದಗ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರಸಭೆಯ ಶೇ. 18, ಎಸ್‌ಎಫ್‌ಸಿ ಶೇ. 15 ಹಾಗೂ ನಗರಸಭೆಯ ಅನುದಾನದಡಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಿದರು.
ಗದಗ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ 13 ಫಲಾನುಭವಿ ಆಧರಿತ ಯೋಜನೆಗಳನ್ನು 2025- 26ನೇ ಸಾಲಿನಲ್ಲಿ ಸುವಿಧಾ ಯೋಜನೆ ಇವರಿಂದ ಡಿಬಿಟಿ(ನೇರ ನಗದು ವರ್ಗಾವಣೆ) ಆನ್‌ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗುತ್ತಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ಅ. 31ರ ವರೆಗೆ ದಿನಾಂಕವನ್ನು ಮುಂದುವರಿಸಲಾಗಿದೆ.ಸೇವಾಸಿಂಧು https://sevasindhu.karnataka.gov.in/Sevasindhu/Kannada ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲೆಯ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಆರ್‌ಡಬ್ಲ್ಯುಗಳಾದ ಖಾಜಾಹುಸೇನ ಕಾತರಕಿ, ಗದಗ ಮೊ. 8867556465, ಬಸವರಾಜ ಓಲಿ, ರೋಣ ಮೊ. 9741615926, ಶಶಿಕಲಾ ವಡ್ಡಟ್ಟಿ, ಮುಂಡರಗಿ ಮೊ. 9611922445, ಭಾರತಿ ಮುರಶಿಳ್ಳಿ ಶಿರಹಟ್ಟಿ ಮೊ. 8951128679, ಶಿವಾನಂದ ಹಾದಿಮನಿ ನರಗುಂದ ಮೊ. 9591679022 ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗದಗ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ: 029ರ ದೂ. 08372-220419 ಮೂಲಕ ಸಂಪರ್ಕಿಸಬಹುದು.