ಅಮಿಗಾ ಫೌಂಡೇಶನ್‌ನಿಂದ ಉಚಿತ ಮಾಂಟೆಸ್ಸರಿ ಶಿಕ್ಷಣ

KannadaprabhaNewsNetwork |  
Published : Jun 13, 2025, 05:03 AM IST
12ಸಿಎಚ್‌ಎನ್‌51ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಅಮಿಗಾ ಫೌಂಡೇಷನ್ ಟ್ರಸ್ಟ್ ಹಾಗೂ ವಾಲ್ವಾಯ್ಲ್ ಫ್ಲೂಯಿಡ್ ಪವರ್ ಇಂಡಿಯಾ ಪ್ರೈ. ಲಿಮಿಟೆಡ್ ಸಹಯೋಗದೊಂದಿಗೆ ನಿರ್ಮಿಸಲಾಗಿರುವ ನೂತನ ಅಂಗನವಾಡಿ ಕೇಂದ್ರದ ಕಟ್ಟಡದ ಕಟ್ಟಡವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಉದ್ಘಾಟನೆ ಮಾಡಿದರು. | Kannada Prabha

ಸಾರಾಂಶ

ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಅಮಿಗಾ ಫೌಂಡೇಷನ್ ಟ್ರಸ್ಟ್ ಹಾಗೂ ವಾಲ್ವಾಯ್ಲ್ ಫ್ಲೂಯಿಡ್ ಪವರ್ ಇಂಡಿಯಾ ಪ್ರೈ.ಲಿಮಿಟೆಡ್ ಸಹಯೋಗದೊಂದಿಗೆ ನಿರ್ಮಿಸಲಾಗಿರುವ ನೂತನ ಅಂಗನವಾಡಿ ಕೇಂದ್ರದ ಕಟ್ಟಡದ ಕಟ್ಟಡವನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಉದ್ಘಾಟನೆ ಮಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಅಮಿಗಾ ಫೌಂಡೇಷನ್ ಟ್ರಸ್ಟ್ ಹಾಗೂ ವಾಲ್ವಾಯ್ಲ್ ಫ್ಲೂಯಿಡ್ ಪವರ್ ಇಂಡಿಯಾ ಪ್ರೈ.ಲಿಮಿಟೆಡ್ ಸಹಯೋಗದೊಂದಿಗೆ ನಿರ್ಮಿಸಲಾಗಿರುವ ನೂತನ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ಅವರು ಉದ್ಘಾಟನೆ ಮಾಡಿದರು.

ದೊಡ್ಡಿಂದುವಾಡಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳ ಶೈಕ್ಷಣಿಕ ಹಾಗೂ ಸಮಗ್ರ ಬೆಳವಣಿಗೆಗೆ ಉತ್ತಮ ಸೌಕರ್ಯಗಳಿರುವ ಅಂಗನವಾಡಿ ಕೇಂದ್ರಗಳು ಬಹುಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಕೇಂದ್ರಗಳ ನಿರ್ಮಾಣದಲ್ಲಿ ಸಮಾಜದ ಸಹಕಾರ ಪ್ರಶಂಸನೀಯ. ಇದರ ಪ್ರಯೋಜನವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಲಿ ಎಂದರು.

ಈ ಅಂಗನವಾಡಿ ನಿರ್ಮಿಸಲು ಶ್ರಮಿಸಿದ್ದ ಅಮಿಗಾ ಫೌಂಡೇಷನ್ ಟ್ರಸ್ಟ್ ಅನ್ನು ಹಾಗೂ ವಾಲ್ವಾಯ್ಲ್ ಫ್ಲೂಯಿಡ್ ಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರನ್ನು ಅಭಿನಂದಿಸಿದರು.

ಅಮಿಗಾ ಫೌಂಡೇಷನ್ ಟ್ರಸ್ಟಿಗಳಾದ ಲಕ್ಷ್ಮೀ ರಾಮಮೂರ್ತಿ ಮಾತನಾಡಿ, 2019 ವರ್ಷದಿಂದ ಆರಂಭವಾದ ಅಮಿಗಾ ಫೌಂಡೇಶನ್ ತನ್ನ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಉಚಿತ ಮಾಂಟೆಸ್ಸರಿ ಆಧಾರಿತ ಇಂಗ್ಲಿಷ್ ಆಧಾರಿತ ಶಿಕ್ಷಣವನ್ನು ಒದಗಿಸುತ್ತಿದೆ, 600 ಮಕ್ಕಳು ಮತ್ತು 50 ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿಯನ್ನು ಒದಗಿಸುತ್ತಿದೆ ಎಂದರು.

ಅಮಿಗಾ ಫೌಂಡೇಷನ್ ವಾಲ್ವಾಯ್ಲ್ ಫ್ಲೂಯಿಡ್ ಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಹೊಸ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಮತ್ತು 17 ಹೆಚ್ಚುವರಿ ಅಂಗನವಾಡಿ ಕೇಂದ್ರಗಳನ್ನು ನವೀಕರಿಸಿದೆ. ಕಳೆದ 8 ತಿಂಗಳಿನಿಂದ, ದೊಡ್ಡಿಂದುವಾಡಿ ಗ್ರಾಮದಲ್ಲಿ ಅಂಗನವಾಡಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದಾಗಿ ಮಕ್ಕಳ ದಾಖಲಾತಿ ಹೆಚ್ಚಾಗಿದೆ, ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ದೊಡ್ಡಿಂದುವಾಡಿ ಗ್ರಾಮದಲ್ಲಿ 40ಕ್ಕೂ ಹೆಚ್ಚು ಮಕ್ಕಳಿಗೆ ಅನುಕೂಲವಾಗುವಂತೆ ಹೊಸ ಕಟ್ಟಡ ನಿರ್ಮಿಸಲಾಗಿದೆ ಎಂದರು.ಈ ಸಂಧರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪನಿರ್ದೇಶಕರಾದ ಬಿಂದ್ಯಾ, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಸಹಾಯಕ ನಿರ್ದೇಶಕ ಗೋಪಾಲಕೃಷ್ಣ, ಸಿಡಿಪಿಒ ಅಂಬಿಕಾ, ಪಿಡಿಒ ಮರಿಸ್ವಾಮಿ, ಸದಸ್ಯರು ಸುರೇಶ್, ರಾಜು, ಗುರುಸ್ವಾಮಿ, ರಾಚಪ್ಪಾಜಿ, ಸೋಮಣ್ಣ, ಅಮಿಗಾ ಫೌಂಡೇಷನ್ ಟ್ರಸ್ಟಿಗಳಾದ ಲಕ್ಷ್ಮೀ ರಾಮಮೂರ್ತಿ, ಮಂಚೇರಿ ಧರ್ಮರಾಜು, ಜನರಲ್ ಮ್ಯಾನೆಜರ್ ಕೊಮದಿ, ವಾಲ್ವಿಯಲ್ ಡೆಪ್ಯುಟಿ ಸಿಇಒ ಕೆ.ಟಿ ರಂಗನ್, ಜೆಎಂಜೆ ಬಿಲ್ಡರ್ಸ್ ರಿಚರ್ಡ್, ಹಾಗೂ ಟ್ರಸ್ಟ್ ನ ಶಿಕ್ಷಕರು, ಮಕ್ಕಳು, ಪೋಷಕರು ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!