ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬಸರಾಳು ಹೋಗಳಿ ಶಿವಪುರ, ಗಣಿಗ, ಮಾಚಗೌಡನಹಳ್ಳಿ, ಮೊಳೆಕೊಪ್ಪಲು, ವಡ್ಡರಕೊಪ್ಪಲು, ಕಂಬದಹಳ್ಳಿ, ಮಾಯಣ್ಣಕೊಪ್ಪಲು, ತಾವರೆಕೆರೆ, ಮುತ್ತೆಗೆರೆ, ಆರ್ಗ್ಹಳ್ಳಿ, ನಂಜೇಗೌಡನ ಕೊಪ್ಪಲು, ಹುನುಗನಹಳ್ಳಿ, ಸಿದ್ದೇಗೌಡನಕೊಪ್ಪಲು, ಗುಂಡರೆ ಕೊಪ್ಪಲು ಮುಂತಾದ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಹಿರಿಯ ಪ್ರಾಥಮಿಕ ಪ್ರೌಢಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಮಾತನಾಡಿ, ಎಂಎಂ ಫೌಂಡೇಶನ್ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟರ ಸೇವೆ ಶ್ಲಾಘನೀಯ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ತಮ್ಮ ಫೌಂಡೇಶನ್ ಮೂಲಕ ಮಾಡುತ್ತಿರುವ ಸೇವಾ ಕಾರ್ಯಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.ಎಂ ಎಂ ಫೌಂಡೇಶನ್ ಉಪಾಧ್ಯಕ್ಷ ರವಿಗೌಡ ಮಾತನಾಡಿ, ಫೌಂಡೇಶನ್ ಲಕ್ಷಾಂತರ ನೋಟ್ ಬುಕ್ ಗಳನ್ನು ಬಡ ಮಕ್ಕಳಿಗೆ ವಿತರಿಸಲಾಗುತ್ತಿದೆ. ಈ ಸೇವಾ ಕಾರ್ಯವು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಕ್ಷೇತ್ರಗಳಲ್ಲಿ ನಿರಂತರವಾಗಿದೆ. ಆಸಕ್ತ ಸಾರ್ವಜನಿಕ ಬಂಧುಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಫೌಂಡೇಶನ್ ಖಜಾಂಚಿ ಶಶಿಕುಮಾರ್, ಬೇಬಿ ಗ್ರಾಮಸ್ಥರಾದ ಬೋರೇಗೌಡ, ಮಹೇಶ್, ಮುಖ್ಯ ಶಿಕ್ಷಕರಾದ ಡಿ. ಆರ್. ಈಶ್ವರಪ್ಪ, ಶಿಕ್ಷಕರಾದ ಮಾದೇವಪ್ಪ ಮುಂತಾದವರು ಇದ್ದರು.