ಕನ್ನಡಪ್ರಭ ವಾರ್ತೆ ಯಲಹಂಕ
ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವ ಸಂಕಲ್ಪ ನಮ್ಮದಾಗಬೇಕು ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.''''ವಿಶ್ವವಾಣಿ ಫೌಂಡೇಷನ್'''' ವತಿಯಿಂದ ಯಲಹಂಕ ಕ್ಷೇತ್ರದ ಮೈಲಪ್ಪನಹಳ್ಳಿ ಸಮೀಪದ ಕೇಸರಿವನದ ಸಭಾಂಗಣದಲ್ಲಿ ಸೋಮವಾರ 540 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತಕ್ಕಾಗಿ ದೇಶದ ವಿಪಕ್ಷಗಳ ಓಲೈಕೆ ರಾಜಕಾರಣ, ದೇಶದ ಪ್ರಸಕ್ತ ಪರಿಸ್ಥಿತಿ ಗಮನಿಸಿದರೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗ ಬೇಕಿರುವುದು ಅನಿವಾರ್ಯ ಎಂಬುದನ್ನು ನಾವು ಅವಲೋಕಿಸಬೇಕಿದೆ. ದೇಶದಲ್ಲಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ರಾಮಮಂದಿರ ನಿರ್ಮಾಣದ ಮೂಲಕ ದೇಶದ ಅಸಂಖ್ಯಾತ ಹಿಂದೂಗಳ ಹಿತ ಕಾಪಾಡಿರುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಏರಿಸಿರುವ ಖ್ಯಾತಿ, ದೇಶದ ಸರ್ವ ಜನರನ್ನು ನನ್ನ ಪರಿವಾರ ಎನ್ನುವ ಅವರ ಉದಾತ್ತ ಗುಣ ಮುಂತಾದ ಹಲವು ಜನಸ್ನೇಹಿ ನಿರ್ಧಾರಗಳು ಮೋದಿ ಅವರ ಕಾರ್ಯವೈಖರಿಗೆ ಹಿಡಿದಿರುವ ಕೈಗನ್ನಡಿಯಾಗಿದೆ ಎಂದರು.
ಮಾರ್ಚ್ 15ರಂದು ನರೇಂದ್ರ ಮೋದಿಯವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದೇವನಹಳ್ಳಿಯಿಂದ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಲಿದ್ದು, ಈ ಮಹತ್ವದ ಕಾರ್ಯಕ್ರಮ ದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಯಶಸ್ವಿ ಗೊಳಿಸಬೇಕು ಎಂದರು.ವಿಶ್ವವಾಣಿ ಫೌಂಡೇಷನ್ ಅಧ್ಯಕ್ಷೆ ಡಾ। ವಾಣಿಶ್ರೀ ವಿಶ್ವನಾಥ್, ನಿರ್ದೇಶಕ ಅಲೋಕ್ ವಿಶ್ವನಾಥ್, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಎಚ್.ಬಿ.ಹನುಮಯ್ಯ, ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಬಿಜೆಪಿ ಮುಖಂಡ ಪಿ.ಕೆ.ರಾಜಣ್ಣ, ಹುರುಳಿಚಿಕ್ಕನಹಳ್ಳಿ ಗ್ರಾಪಂ ಅಧ್ಯಕ್ಷೆ ಲಲಿತಾ ರಾಮಚಂದ್ರ, ಆಲೂರು ಗ್ರಾಪಂ ಅಧ್ಯಕ್ಷೆ ಪುಷ್ಪ ಮಂಜುನಾಥ್, ಸೊಂಡೆಕೊಪ್ಪ ಗ್ರಾಪಂ ಅಧ್ಯಕ್ಷೆ ಕುಸುಮಾ, ಗ್ರಾಪಂ ಸದಸ್ಯರಾದ ಅನ್ನಪೂರ್ಣ, ಲಕ್ಷ್ಮಿ, ಮಂಜುನಾಥ್ ಇದ್ದರು.