ಕನ್ಯಾಡಿಯ ಸೇವಾಭಾರತಿ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಅರಸಿನಮಕ್ಕಿಯ ಶಿವಾನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ 32ನೇ ವರ್ಷದ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ ಭಾನುವಾರ ನೇಲ್ಯಡ್ಕದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕನ್ಯಾಡಿಯ ಸೇವಾಭಾರತಿ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಅರಸಿನಮಕ್ಕಿಯ ಶಿವಾನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ 32ನೇ ವರ್ಷದ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ ಭಾನುವಾರ ನೇಲ್ಯಡ್ಕದಲ್ಲಿ ನಡೆಯಿತು.ಉದ್ಘಾಟಿಸಿದ ಬೆಳ್ತಂಗಡಿ ಕೌಶಲ್ಯ ಎನ್ ಅರ ಎಲ್ ಎಂ ಮೇಲ್ವಿಚಾರಕಿ ವೀಣಾಶ್ರೀ ಕೆ ಕೆ ದೀಪ ಪ್ರಜ್ವಲಿಸಿ ತರಬೇತಿ ಶಿಬಿರವು ಮಹಿಳೆಯರಿಗೆ ಸ್ವ-ಉದ್ಯೋಗದ ಕಡೆಗೆ ಮಹತ್ವದ ಹೆಜ್ಜೆಯಾಗಿದೆ ಎಂದರು.ಸೇವಾಭಾರತಿ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ಸಿಇಒ ಸ್ವರ್ಣಗೌರಿ ಮಾತನಾಡಿ, ಟೈಲರಿಂಗ್ ಕಲಿಕೆ ಮಹಿಳೆಯರಿಗೆ ಅನೇಕ ಉದ್ಯೋಗದ ಅವಕಾಶಗಳನ್ನು ಒದಗಿಸಬಲ್ಲದು. ದೀಪ ಜ್ಯೋತಿ ಬೆಳಗಿದಂತೆ ತರಬೇತಿ ವಿದ್ಯೆ ಸಮಾಜದಲ್ಲಿ ಬೆಳಗಬೇಕು ಎಂದರು.ಅರಸಿನಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ, ಅರಸಿನಮಕ್ಕಿ ಶಿವಾನಿ ಸಂಜೀವಿನಿ ಮಹಿಳಾ ಒಕ್ಕೂಟ ಅಧ್ಯ ಕ್ಷೆ ಪ್ರತಿಮಾ, ನೇಲ್ಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ವಸಂತಿ ಕೆ, ಕನ್ಯಾಡಿ ಶ್ರೀ ದುರ್ಗಾ ಮಾತೃ ಮಂಡಳಿ ಖಜಾಂಚಿ ಬಬಿತಾ, ಟೈಲರಿಂಗ್ ತರಬೇತುದಾರೆ ಹರಿಣಾಕ್ಷಿ ಬಿ.ಪಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇಲ್ಯಡ್ಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಭವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 27 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದು, ಮಹಿಳಾ ಸಬಲಿಕರಣದತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಕೃಷಿ ಉದ್ಯೋಗ ಸಖಿ ಗೀತಾ, ಪಶು ಸಖಿ ವೇದಾವತಿ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ಅಮಿತ ಪ್ರಾರ್ಥಿಸಿ, ಕಾರ್ಯಕ್ರಮದಲ್ಲಿ ಮುಖ್ಯ ಪುಸ್ತಕ ಬರಹಗಾರ್ತಿ ನೀತಾ ಸ್ವಾಗತಿಸಿ, ಸೇವಾಭಾರತಿಯ ಡಾಕ್ಯುಮೆಂಟೇಶನ್, ಮೋನಿಟರಿಂಗ್ ಮತ್ತು ಕೋ - ಆರ್ಡಿನೇಟರ್ ಸುಮ ನಿರೂಪಿಸಿ. ಸ್ಥಳೀಯ ಸಂಪನ್ಮೂಲ ವ್ಯಕ್ತಿ ಹೇಮಲತಾ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.