ಮೋದಿ ಜನ್ಮದಿನಕ್ಕೆ ಉಚಿತ ಚಹಾ ವಿತರಣೆ

KannadaprabhaNewsNetwork | Published : Sep 19, 2024 1:49 AM
ವಿಜೆಪಿ೧೮ವಿಜಯಪುರ ಪಟ್ಟಣದ ಶಿವಗಣೇಶ ಸರ್ಕಲ್ ನಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಜನ್ಮದಿನದ ಅಂಗವಾಗಿ ಬಿಜೆಪಿ ಓಬಿಸಿ ಜಿಲ್ಲಾ ಘಟಕದ ಅಧ್ಯಕ್ಷ ಕನಕರಾಜು, ಟೌನ್ ಅಧ್ಯಕ್ಷ ಆರ್.ಸಿ.ಮಂಜುನಾಥ್, ಟೌನ್ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮುನೀಂದ್ರ,ಮುಖಂಡ ವಿನಯ್ ಬಿಜೆಪಿ ಮುಖಂಡರು ಚಹಾ ತಯಾರಿಸಿ ಉಚಿತವಾಗಿ ವಿತರಣೆ ಮಾಡಿದರು. | Kannada Prabha

ವಿಜಯಪುರ: ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಮತ್ತು ಟೌನ್ ಬಿಜೆಪಿ ಘಟಕದ ವತಿಯಿಂದ ಪ್ರಧಾನಿ ನರೇಂದ್ರಮೋದಿ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಶಿವಗಣೇಶ ಸರ್ಕಲ್‌ನಲ್ಲಿ ಚಹಾ ತಯಾರಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು, ಸಾರ್ವಜನಿಕರಿಗೆ ಉಚಿತವಾಗಿ ಹಂಚಿ ಮೋದಿಗೆ ಶುಭ ಹಾರೈಸಿದರು.

ವಿಜಯಪುರ: ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಮತ್ತು ಟೌನ್ ಬಿಜೆಪಿ ಘಟಕದ ವತಿಯಿಂದ ಪ್ರಧಾನಿ ನರೇಂದ್ರಮೋದಿ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಶಿವಗಣೇಶ ಸರ್ಕಲ್‌ನಲ್ಲಿ ಚಹಾ ತಯಾರಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು, ಸಾರ್ವಜನಿಕರಿಗೆ ಉಚಿತವಾಗಿ ಹಂಚಿ ಮೋದಿಗೆ ಶುಭ ಹಾರೈಸಿದರು.

ಬಿಜೆಪಿ ಓಬಿಸಿ ಜಿಲ್ಲಾ ಘಟಕದ ಅಧ್ಯಕ್ಷ ಕನಕರಾಜು ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರು, ರೈಲು ನಿಲ್ದಾಣಗಳಲ್ಲಿ ಚಹಾ ಮಾರುತ್ತಿದ್ದ ನೆನಪಿನಲ್ಲಿ ಅವರ ಹುಟ್ಟು ಹಬ್ಬದಂದು ಚಹಾ ತಯಾರಿಸಿ ಹಂಚುತ್ತಿದ್ದೇವೆ. ದೇಶದಲ್ಲಿ ಜನಸಾಮಾನ್ಯ ವ್ಯಕ್ತಿಯೂ ಪ್ರಧಾನಿಯಾಗಬಹುದು ಎಂಬುದನ್ನು ಬಿಜೆಪಿ ಪಕ್ಷದಲ್ಲಿ ಕಾಣಬಹುದಾಗಿದೆ. ನರೇಂದ್ರಮೋದಿ ದೇಶದ ಪ್ರಧಾನಿಯಾದ ನಂತರ ಇಡೀ ವಿಶ್ವ ಭಾರತದ ಕಡೆಗೆ ನೋಡುವಂತಹ ಮಹೋನ್ನತ ಮಟ್ಟಕ್ಕೆ ತಂದಿದ್ದಾರೆ ಎಂದರು.

ಟೌನ್ ಅಧ್ಯಕ್ಷ ಆರ್.ಸಿ.ಮಂಜುನಾಥ್ ಮಾತನಾಡಿ, ಪ್ರಧಾನಿ ಮೋದಿಯವರಿಗೆ ದೇಶದ ಬಗ್ಗೆ ಉತ್ತಮ ಕನಸುಗಳಿವೆ. ಅವು ಯುವಜನರ ಮೂಲಕ ನೆರವೇರಿಸಬೇಕೆಂಬುದು ಅವರ ಮನದ ತುಡಿತ. ಸಾಮಾನ್ಯರಲ್ಲಿ, ಸಾಮಾನ್ಯನಾಗಿ ದೇಶದ ಸೇವಕನಾಗಿ ಕೆಲಸ ಮಾಡುತ್ತಿದ್ದಾರೆ. ೧೦ ವರ್ಷಗಳಲ್ಲಿ ಅವರು ಜಾರಿಗೊಳಿಸಿರುವ ಯೋಜನೆಗಳು ಇಂದು ಭಾರತವನ್ನು ಸಶಕ್ತಗೊಳಿಸಿವೆ. ಎಲ್ಲಾ ವರ್ಗದ ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರು.

ಮುಖಂಡ ವಿನಯ್ ಮಾತನಾಡಿ, ಇಡೀ ಪ್ರಪಂಚವೇ ದೇಶದತ್ತ ನೋಡುವಂತೆ ಮಾಡಿದಂತಹ ಹೆಮ್ಮೆಯ ಪ್ರಧಾನಿ ಮೋದಿ ಅವರು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಇನ್ನೂ ನೂರಾರು ವರ್ಷ ದೇಶ ಮುನ್ನಡೆಸುವ ಶಕ್ತಿಯನ್ನು ದೇವರು ಅವರಿಗೆ ದಯಪಾಲಿಸಲಿ ಎಂದರು.

ಜಿಲ್ಲಾ ಉಪಾಧ್ಯಕ್ಷ ಸುರೇಶ್, ಬಿಜೆಪಿ ಟೌನ್ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮುನೀಂದ್ರ, ತಾಲೂಕು ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ, ಪುರಸಭೆ ಸದಸ್ಯೆ ಶಿಲ್ಪ ಅಜಿತ್, ಮುಖಂಡರಾದ ಸಿ.ಮುನಿಕೃಷ್ಣಪ್ಪ, ಜಿ.ಎಂ.ಚಂದ್ರು, ಸುಬ್ಬಣ್ಣ, ವಿಜಯಕುಮಾರ್, ಸುರೇಶ್, , ವಿನಯ್, ಶಾಮಣ್ಣ, ರಜಿನಿ ಕನಕರಾಜ್, ವೀಣಾಶ್ರೀನಿವಾಸ್, ಪ್ರೇಮಾ ಕಾರ್ಯಕರ್ತರು ಹಾಜರಿದ್ದರು.

ವಿಜೆಪಿ೧೮

ವಿಜಯಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿ ಓಬಿಸಿ ಜಿಲ್ಲಾ ಘಟಕದ ಪದಾಧಿಕಾರಿಗಳು ಚಹಾ ತಯಾರಿಸಿ ಉಚಿತವಾಗಿ ವಿತರಣೆ ಮಾಡಿದರು.