ಅಧಿಕಾರ ಅಂತಃಕರಣದಿಂದ ಕೂಡಿರಬೇಕು

KannadaprabhaNewsNetwork |  
Published : Dec 02, 2025, 01:08 AM IST
10 | Kannada Prabha

ಸಾರಾಂಶ

ಸಮಾಜ ಮತ್ತು ಸರ್ಕಾರಿ ವ್ಯವಸ್ಥೆ ಕೆಟ್ಟು ಹೋಗಿದೆ ಎಂದು ಕೊರಗುವ ಬದಲು ಕ್ಲಾರೀಟಿ ಇಟ್ಟುಕೊಂಡು ನಾಗರೀಕ ಸೇವಾ ಪರೀಕ್ಷೆ ತೆಗೆದುಕೊಂಡು, ಅಧಿಕಾರಿಯಾಗಿ ಸರ್ಕಾರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಕನಸು ಕಂಡು ನನಸಾಗಿಸಿಕೊಳ್ಳಿ

ಕನ್ನಡಪ್ರಭ ವಾರ್ತೆ ಮೈಸೂರುಅಧಿಕಾರ ಎಂದರೆ ಅದು ಅಂತಃಕರಣದಿಂದ ಕೂಡಿರಬೇಕು. ಸರ್ಕಾರಿ ಅಧಿಕಾರಿಯಾಗಿ ಸಾರ್ವಜನಿಕ ಸೇವೆ ಸಲ್ಲಿಸ ಬಯಸುವವರಿಗೆ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿ ಹೊರುವ ಮನಸ್ಸಿರಬೇಕು ಎಂದು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ (ಕೆಪಿಎ) ನಿರ್ದೇಶಕ ಎಸ್.ಎಲ್. ಚನ್ನಬಸವಣ್ಣ ತಿಳಿಸಿದರು.ನಗರದ ಲಕ್ಷ್ಮೀಪುರಂ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಜ್ಞಾನಬುತ್ತಿ ಸಂಸ್ಥೆಯು ಕಳೆದ 150 ದಿನಗಳಿಂದ ನಡೆಸುತ್ತಿದ್ದ 2025- 26ನೇ ಸಾಲಿನ ಐಎಎಸ್/ ಕೆಎಎಸ್ ಮತ್ತು ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಅಧ್ಯಯನ ಪುಸ್ತಕ ಬಿಡುಗಡೆಗೊಳಿ ಮಾತನಾಡಿದರು.ನನ್ನ ಸಮಾಜ, ನನ್ನ ರಾಜ್ಯ ಮತ್ತು ನನ್ನ ದೇಶ ಎಂಬ ಉತ್ಕಟ ಅಭಿಮಾನದ ಜೊತೆಗೆ ಕಾಳಜಿ ಮತ್ತು ಕನಸು ಇರಬೇಕು. ಅದನ್ನು ಬಿಟ್ಟು ಸಿನೆಮಾಗಳಲ್ಲಿ ತೋರಿಸುವ ಸೆಲೆಬ್ರೇಟಿ ಪೊಲೀಸ್ ಹೀರೋ ತರಹದ ಮನಸ್ಥಿತಿಯಿಂದ ದಯಮಾಡಿ ಸರ್ಕಾರಿ ಅಧಿಕಾರಿಯಾಗಿ ಸೇವೆಗೆ ಬರಬೇಡಿ ಎಂದರು.ಸಮಾಜ ಮತ್ತು ಸರ್ಕಾರಿ ವ್ಯವಸ್ಥೆ ಕೆಟ್ಟು ಹೋಗಿದೆ ಎಂದು ಕೊರಗುವ ಬದಲು ಕ್ಲಾರೀಟಿ ಇಟ್ಟುಕೊಂಡು ನಾಗರೀಕ ಸೇವಾ ಪರೀಕ್ಷೆ ತೆಗೆದುಕೊಂಡು, ಅಧಿಕಾರಿಯಾಗಿ ಸರ್ಕಾರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಕನಸು ಕಂಡು ನನಸಾಗಿಸಿಕೊಳ್ಳಿ ಎಂದರು.ನಾಗರಿಕ ಸೇವೆ ಸರ್ಕಾರದ ನೀತಿ, ಕಾರ್ಯಕ್ರಮ ರೂಪಿಸುವ, ಅನುಷ್ಠಾನಗೊಳಿಸುವ ಆಡಳಿತಾತ್ಮಕ ವಿಭಾಗವಾಗಿದೆ. ಹಾಗಾಗಿ ಸೇವೆಯನ್ನು ರಾಜಕೀಯವಾಗಿ ತಟಸ್ಥರಾಗಿ, ನಿಷ್ಪಕ್ಷಪಾತವಾಗಿ ಮಾಡಬೇಕು. ಇಲ್ಲಿ ಸೇವೆ ಮಾಡುವ ಮನೋಭಾವ ಮುಖ್ಯ ಎಂದು ಅವರು ಹೇಳಿದರು.ಪರೀಕ್ಷಾ ತರಬೇತಿ ಯಾವುದೇ ತರಹದ ಶೈಕ್ಷಣಿಕ ಕೋರ್ಸ್‌ ಗಳಲ್ಲ. ಇಲ್ಲಿ ಪಾಂಡಿತ್ಯ ಪಡೆಯುವ ಉದ್ದೇಶವಿಲ್ಲ. ಒಂದು ವಿಷಯವನ್ನು ಅರ್ಥೈಸಿಕೊಳ್ಳುವ ದೃಷ್ಟಿಕೋನ ಮುಖ್ಯ. ವಿಷಯವನ್ನು ವಿವಿಧ ಮಜಲುಗಳಾಗಿ ವಿಶ್ಲೇಷಣೆ ಮಾಡುವ ಕೌಶಲ ಬೆಳೆಸಿಕೊಳ್ಳಬೇಕು ಎಂದರು.ಮೈಸೂರಿನ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಕವಿತಾ ರಾಜಾರಾಂ ಮಾತನಾಡಿ, ಪ್ರಯತ್ನವಿಲ್ಲದೆ ಹಣೆಬರಹ ಬರೆಯಲು ಸಾಧ್ಯವಿಲ್ಲ. ನಾನು ಅದಾಗಬೇಕಿತ್ತು, ಇದಾಗಬೇಕಿತ್ತು ಎಂದು ಕೊರಗದಿರಿ ಜೊತೆಗೆ ಸೋಲುಗಳಿಗೆ ಅಂಜದಿರಿ ಬದಲಾಗಿ ನಮಗೆ ಸಿಕ್ಕಿರುವ ಹುದ್ದೆ ಮತ್ತು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಸ್. ಪಶುಪತಿ, ಜೈನಹಳ್ಳಿ ಸತ್ಯನಾರಾಯಣಗೌಡ, ಡಾ.ಕೃ.ಪ. ಗಣೇಶ, ಜಯಪ್ರಕಾಶ್, ಡಾ. ಹೊನ್ನಯ್ಯ, ಕೆ.ವೈ. ನಾಗೇಂದ್ರ, ಕಿರಣ್ ಕೌಶಿಕ್, ಕಾರ್ಯದರ್ಶಿ ಎಚ್. ಬಾಲಕೃಷ್ಣ ಮೊದಲಾದವರು ಇದ್ದರು.----ಕೋಟ್...ಹಣ ಮಾಡಬೇಕೆಂದರೆ ವ್ಯಾಪಾರ ಮತ್ತು ಉದ್ದಿಮೆಯನ್ನು ಕಟ್ಟಿ ಬೆಳೆಸಿ ಮತ್ತು ಬೆಳೆಯಿರಿ. ಸೆಲೆಬ್ರೆಟಿಯಾಗಬೇಕಾದರೆ ನಾಟಕ, ಟಿವಿ ಮತ್ತು ಸಿನಿಮಾರಂಗಕ್ಕೆ ಹೋಗಿ. ಸರ್ಕಾರಿ ಸೇವೆಗೆ ಬರಬೇಕಾದರೆ ವೃತ್ತಿ ಬದ್ಧತೆಯಿರಬೇಕು. ಸಾಮಾಜಿಕ ಕಾಳಜಿ ಮತ್ತು ಕಳಕಳಿ ಮತ್ತು ಹೆಚ್ಚೆಚ್ಚು ಜವಾಬ್ದಾರಿ ಹೊರಲು ಸಿದ್ಧರಾಗಿ ಬನ್ನಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಗಾಗಿ ಆಗ್ರಹಿಸಿ ಗೋಕಾಕ ಬಂದ್‌ ಇಂದು
ಒಂದೇ ಸಂಸ್ಥೆಯಿಂದ 50 ಜನ ಅಗ್ನಿವೀರರಾಗಿ ಆಯ್ಕೆ