ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾರ್ಥಿಗಳಿಗೆ ಉಚಿತ ತರಬೇತಿ

KannadaprabhaNewsNetwork | Published : Mar 26, 2025 1:31 AM

ಸಾರಾಂಶ

ಉಚಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ತರಬೇತಿ ಹಮ್ಮಿಕೊಳ್ಳುವುದು ನನ್ನ ಕನಸಾಗಿದೆ. ವಿದ್ಯೆ ಅದು ನಮ್ಮ ಹಕ್ಕು, ಕನಸುಗಾರರಾಗಿದ್ದರೇ ನನಸು ನಿಜವಾಗಲೂ ಕೂಡ ಆಗುತ್ತದೆ. ನನ್ನ ಸಂಪೂರ್ಣ ವಿದ್ಯಾಭ್ಯಾಸ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಆಗಿದೆ. ನನಗೆ ಸಂಸ್ಕಾರ ಬಂದಿರುವುದೇ ಈ ಶಾಲಾ ಕಾಲೇಜುಗಳಲ್ಲಿ ಕಲಿತಿದ್ದರಿಂದ. ಗ್ರಾಮೀಣ ಮಕ್ಕಳ ವಿಕಸನಕ್ಕೆ ಈ ಕಾರ್ಯಾಗಾರ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಶಾಸಕ ಮಂಜು ಹೇಳಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ರಾಜ್ಯಮಟ್ಟದ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ತರಬೇತಿ ವಾರ ಕಾಲ ನಡೆಯಲಿದ್ದು, ಇಲ್ಲಿ ಭಾಗವಹಿಸಿರುವ ಎಲ್ಲಾ ನಿರುದ್ಯೋಗಿ ಯುವಕ, ಯುವತಿಯರು ಬಳಕೆ ಮಾಡಿಕೊಂಡು ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಬೇಕೆಂದು ಶಾಸಕ ಎ.ಮಂಜು ತಿಳಿಸಿದರು.

ಸೋಮವಾರ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಉಚಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ತರಬೇತಿ ಹಮ್ಮಿಕೊಳ್ಳುವುದು ನನ್ನ ಕನಸಾಗಿದೆ. ವಿದ್ಯೆ ಅದು ನಮ್ಮ ಹಕ್ಕು, ಕನಸುಗಾರರಾಗಿದ್ದರೇ ನನಸು ನಿಜವಾಗಲೂ ಕೂಡ ಆಗುತ್ತದೆ. ನನ್ನ ಸಂಪೂರ್ಣ ವಿದ್ಯಾಭ್ಯಾಸ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಆಗಿದೆ. ನನಗೆ ಸಂಸ್ಕಾರ ಬಂದಿರುವುದೇ ಈ ಶಾಲಾ ಕಾಲೇಜುಗಳಲ್ಲಿ ಕಲಿತಿದ್ದರಿಂದ. ಗ್ರಾಮೀಣ ಮಕ್ಕಳ ವಿಕಸನಕ್ಕೆ ಈ ಕಾರ್ಯಾಗಾರ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ಈ ಹಿಂದೆ ಕೊಣನೂರು ಕಾಲೇಜಿನಲ್ಲಿ ಈ ರೀತಿಯ ಉಚಿತ ತರಬೇತಿಯನ್ನು ಆರಂಭಿಸಿದ ಫಲವಾಗಿ ಇಂದು 29 ಮಂದಿ ವಿವಿಧ ಸರ್ಕಾರಿ ನೌಕರಿ ಪಡೆದುಕೊಳ್ಳಲು ನೆರವಾಗಿದೆ. ಅಂದು ಕೂಡ ಅಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿದ್ದವರು ಇದೇ ಕಾಲೇಜಿನ ಪ್ರಾಂಶುಪಾಲರಾಗಿರುವ ಮಹೇಶ್ ಅವರು, ಇವರ ಸೇವೆ ಸದಾ ಹೀಗೆಯೇ ಮುಂದುವರಿಯಲಿ. ಇವರೊಂದಿಗೆ ಇಡೀ ಕಾಲೇಜಿನ ಸಹ ಪ್ರಾಧ್ಯಾಪಕರು, ಸಿಬ್ಬಂದಿ, ಕಾಲೇಜು ಅಭಿವೃದ್ಧಿ ಸಮಿತಿಯವರು ಸಹಕಾರ ನೀಡಿ ಯಶಸ್ವಿಗೊಳಿಸಬೇಕೆಂದು ಅವರು ಸಲಹೆ ಮಾಡಿದರು.

ಇಂದಿನ ತರಬೇತಿ ಕಾರ್ಯಾಗಾರಕ್ಕೆ ಇಡೀ ರಾಜ್ಯದಿಂದಲೇ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡು ಭಾಗವಹಿಸಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಮಂದಿ ಭಾಗವಹಿಸಿರುವುದು ಸಂತಸ ತಂದಿದೆ. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಂದುಕೊಂಡ ಹುದ್ದೆಯನ್ನು ಪಡೆದು ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಆಶಯ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲ ಮಹೇಶ್ ಮಾತನಾಡಿ, ರಾಜ್ಯದ 19 ಜಿಲ್ಲೆಗಳಿಂದಲೂ ಕೂಡ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡು ಇಲ್ಲಿ ನಡೆಯುತ್ತಿರುವ ಉಚಿತ ತರಬೇತಿ ಕಾರ್ಯಾಗಾರಕ್ಕೆ ಬಂದಿದ್ದಾರೆ. ಹಾಸನ ಜಿಲ್ಲೆಯಿಂದ 244 ಮಂದಿ ಹಾಗೂ ಇತರೆ ಜಿಲ್ಲೆಗಳಿಂದ 166 ಮಂದಿಗೂ ಅಧಿಕ ಸಂಖ್ಯೆಯಲ್ಲಿ ಬಂದಿದ್ದಾರೆ. ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಆರು ದಿನಗಳ ಕಾಲ ಉಚಿತ ತರಬೇತಿ ದೊರೆಯಲಿದೆ. ನಮ್ಮ ಕಾಲೇಜಿನ ಕೆಲ ಉಪನ್ಯಾಸಕರು,ರೋಟರಿ ವತಿಯಿಂದ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳೀಗೆ ಮಧ್ಯಾಹ್ನದ ಉಪಾರ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಹೇಳಿದರು.ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ಶಿವಮೊಗ್ಗ ಸ್ಪರ್ಧಾ ಅಕಾಡೆಮಿಯ ಮಂಜನಾಥ ಡಿ ಅವರು ತರಬೇತಿ ನಡೆಸಿಕೊಟ್ಟರು. ಕಾಲೇಜು ಉಪನ್ಯಾಸಕರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Share this article