ಕೊಲ್ಹಾಪುರ ಕಣೇರಿಯ ಸಿದ್ಧಗಿರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ

KannadaprabhaNewsNetwork | Published : Jun 4, 2024 12:32 AM

ಸಾರಾಂಶ

ಬಡವರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಕೊಲ್ಲಾಪುರ ಕನೇರಿ ಸಿದ್ಧಗಿರಿ ಆಸ್ಪತ್ರೆಯಲ್ಲಿ ಮೇ.16 ರಿಂದ ಜೂ.30 ರವರೆಗೆ ಉಚಿತವಾಗಿ ಅಂಜಿಯೋಗ್ರಾಫಿ, ಆಂಜಿಯೋಪ್ಲ್ಯಾಸ್ಟಿ, ಬೈಪಾಸ್‌ ಸರ್ಜರಿ ಮಾಡಿ ಕೊಡಲಾಗುವುದು ಎಂದು ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಬಡವರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಕೊಲ್ಲಾಪುರ ಕನೇರಿ ಸಿದ್ಧಗಿರಿ ಆಸ್ಪತ್ರೆಯಲ್ಲಿ ಮೇ.16 ರಿಂದ ಜೂ.30 ರವರೆಗೆ ಉಚಿತವಾಗಿ ಅಂಜಿಯೋಗ್ರಾಫಿ, ಆಂಜಿಯೋಪ್ಲ್ಯಾಸ್ಟಿ, ಬೈಪಾಸ್‌ ಸರ್ಜರಿ ಮಾಡಿ ಕೊಡಲಾಗುವುದು ಎಂದು ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ನುಡಿದರು.

ಕೊಲ್ಹಾಪೂರ ಕನೇರಿ ಮಠದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಸಾಕಷ್ಟು ಜನರು ಹೃದಯ ರೋಗದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಸಿದ್ಧಗಿರಿ ಆಸ್ಪತ್ರೆಯಲ್ಲಿ ಹೃದ್ರೋಗ ರೋಗಿಗಳಿಗೆ ಇನ್ನೂ ಮುಂದೆ ಅಂಜಿಯೋಗ್ರಫಿ ಜೊತೆಗೆ ಅತ್ಯಾಧುನಿಕ ಹೃದಯ ಚಿಕಿತ್ಸೆಯೂ ಉಚಿತವಾಗಿ ನಡೆಯಲಿದೆ. ಪ್ರತಿ ವರ್ಷದಲ್ಲಿ ಸಾಕಷ್ಟು ರೋಗಿಗಳಿಗೆ ಇದು ಅನುಕೂಲವಾಗಿದೆ ಎಂದರು.ಖ್ಯಾತ ಹೃದಯ ರೋಹ ತಜ್ಞ ಡಾ.ಗಣೇಶ ಇಂಗಳೆ ಮಾತನಾಡಿ, ಕರ್ನಾಟಕ ಹಾಗೂ ಗಡಿಭಾಗದ ಮಹರಾಷ್ಟ್ರದಲ್ಲಿನ ಪ್ರದೇಶದಲ್ಲಿ ಅತ್ಯಾಧುನಿಕ ತಂತಜ್ಞಾನ ಮತ್ತು ಹೃದ್ರೋಗಿಗಳಿಗೆ ಒಂದೇ ಸೂರಿನಡಿ ಸೇವೆಗಳನ್ನು ಒದಗಿಸಲು ಕನೇರಿಮಠವು ನೋಪ್ರಾಪಿಟ್, ನೋಲಾಸ್ ತತ್ವದಡಿ ಅತೀ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲು ಉದ್ದೇಶಿಸಿದೆ. ಬದಲಾಗುತ್ತಿರುವ ಜೀವನಕ್ಕೆ ಹೃದ್ರೋಗಿ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯುವಕರು ಕೂಡ ಹೃದ್ರೋಗ ಎದುರಿಸುತ್ತಿದ್ದಾರೆ. ಇಂದು ಹೃದಯರೋಗಿಗಳಿಗೆ ಸುಧಾರಿತ ಚಿಕಿತ್ಸೆ ನೀಡುವುದು ಒಂದು ಸಂಕೀರ್ಣ ವಿಷಯವಾಗಿದೆ. ಇಂದು ಸಿದ್ಧಗಿರಿ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಕರೋನರಿ ಚಂದಯೋಗ್ರತಿ ಕರೋನರಿ ಜಿಂಜಿಯೋಪ್ಲಾಸ್ತ್ರಿ, ಪೆರಿಫೆರಲ್ ಇಂಟರ್ವೆನ್ಸನ್ ರೀನಲ್ ಅಂಜಿಯೋಗ್ರಫಿ, ಅಂಜಿಯೋಪ್ಲಾಸ್ತ್ರಿ, ವರ್ಮನೆಂಟ್ ಪೇಸ್ ಮೇಕರ್ ಆಳವಡಿಸಿ ಚಿಕಿತ್ಸೆ ನೀಡಲಾಗುತ್ತದೆ. ರಚನಾತ್ಮಕ ಹೃದಯದ ಮಧ್ಯಸ್ತಿಕೆಗೆ ಅಗತ್ಯವಾದ ಚಿಕಿತ್ಸೆಯನ್ನು ಸಹ ಒದಗಿಸಲಾಗುತ್ತದೆ. ಇದಲ್ಲದೇ ಎಎಸ್‌ಡಿ, ಪಿಡಿಐ, ವಿಎಸ್‌ಡಿ, ಚಿಕಿತ್ಸೆ ಮತ್ತು ಹೃದಯ ಚಿಕಿತ್ಸೆಯನ್ನು ಸಹ ಮಾಡಲಾಗುತ್ತದೆ ಎಂದರು.ವೈದ್ಯಕೀಯ ಅಧೀಕ್ಷಕ ಡಾ.ಪ್ರಕಾಶ ಭರಮಗೌಡರ ಮಾತನಾಡಿ, ಕಾಡಸಿದ್ದೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಜೂ.30 ರವರೆಗೆ ಅಂಜಿಯೋಗ್ರಾಫಿ ಜೊತೆಗೆ ಎಲ್ಲ ರೀತಿಯ ಹೃದಯಕ್ಕೆ ಸಂಬಂಧಿಸಿದ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು ಎಂದರು.ರಾಜೇಂದ್ರ ಶಿಂಧೆ, ವಿವೇಕ ಸಿದ್ದ, ಕುಮಾರ ಚವ್ಹಾಣ, ಸತ್ಯಪ್ಪ ಬಾನೆ, ದಯಾನಂದ ಡೊಂಗರೆ, ಅಭೀಜಿ ಚೌಗಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article