ತ್ಯಾಗ ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ: ಮಹಾಂತೇಶ ಕವಟಗಿಮಠ

KannadaprabhaNewsNetwork |  
Published : Jan 28, 2025, 12:45 AM IST
ಚಿಕ್ಕೋಡಿ ಪಟ್ಟಣದ ಸಿಎಲ್‌ಇ ಅಂಗಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ 76ನೇ ಗಣರಾಜ್ಯೋತ್ಸವ ಹಿನ್ನಲೆ ದ್ವಜಾರೋಹಣ ನೇರವೆರಿಸಿ ಮಾತನಾಡಿದರು. ಎಸ್.ಎಸ್. ಚನ್ನವರ,ಎನ್.ಎಸ್.ವಂಟಮುತ್ತೆ.ಶಿವಾನಂದ ಚೊನ್ನದ,ಮಲ್ಲಿಕಾರ್ಜುನ ಕವಟಗಿಮಠ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಸ್ವತಂತ್ರ್ಯ ಪೂರ್ವದಲ್ಲಿ ರಾಜ-ಮಹಾರಾಜರಿಂದ ಆಳಲ್ಪಟ್ಟ ಭಾರತ ಸ್ವತಂತ್ರ್ಯಾ ನಂತರ ಸರ್ದಾರ್‌ ವಲ್ಲಭಬಾಯಿ ಪಟೇಲ್‌ರ ನೇತೃತ್ವದಲ್ಲಿ ಒಂದು ದೇಶವಾಗಿ ಹೊರಹೊಮ್ಮಿತು. ತದ ನಂತರ ಭಾರತಕ್ಕೆ ಸಂವಿಧಾನವನ್ನು ಕೊಟ್ಟವರು ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಸ್ವತಂತ್ರ್ಯ ಪೂರ್ವದಲ್ಲಿ ರಾಜ-ಮಹಾರಾಜರಿಂದ ಆಳಲ್ಪಟ್ಟ ಭಾರತ ಸ್ವತಂತ್ರ್ಯಾ ನಂತರ ಸರ್ದಾರ್‌ ವಲ್ಲಭಬಾಯಿ ಪಟೇಲ್‌ರ ನೇತೃತ್ವದಲ್ಲಿ ಒಂದು ದೇಶವಾಗಿ ಹೊರಹೊಮ್ಮಿತು. ತದ ನಂತರ ಭಾರತಕ್ಕೆ ಸಂವಿಧಾನವನ್ನು ಕೊಟ್ಟವರು ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಇಲ್ಲಿನ ಸಿ.ಎಲ್.ಇ. ಸಂಸ್ಥೆಯ ಸಿ. ಎಸ್. ಎಸ್. ಪ್ರೌಢ ಶಾಲೆ ಹಾಗೂ ಎಲ್ಲ ಅಂಗಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಹಾನಾಯಕರ ತ್ಯಾಗ ಬಲಿದಾನಗಳಿಂದ ಭಾರತ ಇಂದು ವಿಶ್ವದ ಅತಿ ದೊಡ್ಡ ಗಣತಂತ್ರ ರಾಷ್ಟ್ರವಾಗಿ ಹೊರಹೊದೆ ಎಂದರು.

ಭಾರತವು ಜಗತ್ತಿನಲ್ಲಿ ಮುಂದುವರೆದ ರಾಷ್ಟ್ರವಾಗಿ ಬೆಳೆಯಬೇಕಾದರೆ ಒಂದು ದೇಶ ಒಂದು ಚುನಾವಣೆ ಅವಶ್ಯಕವಾಗಿದೆ ಎಂದು ಹೇಳಿದ ಅವರು ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿರುವ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗೆ ಭಾಜನರಾದ ಸಾಧಕರನ್ನು ಸ್ಮರಿಸುತ್ತಾ, ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆ, ತಡೆಗಟ್ಟುವಿಕೆ ಮತ್ತು ನಿರ್ವಹಣೆಗೆ ವಿಶೇಷ ಗಮನ ಹರಿಸಿದ ಪದ್ಮಶ್ರೀ ಪುರಸೃತ ಸ್ತ್ರೀ ರೋಗ ತಜ್ಞೆ ಡಾ.ನೀರ್ಜಾ ಭಟ್ಲಾರನ್ನು ಕೂಡಾ ಅಭಿನಂದಿಸಿದ ಅವರು, ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟಲು ಮುಂದಿನ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಲಸಿಕೆ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರವು ಚಿಂತನೆಯನ್ನು ನಡೆಸಿದೆ ಎಂದು ತಿಳಿಸಿದರು.

ಸಿ. ಎಲ್. ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಎಸ್. ಎಸ್. ಚನ್ನವರ ಅಧ್ಯಕ್ಷತೆವಹಿಸಿದ್ದರು. ಸಿ.ಎಲ್.ಇ ಸಂಸ್ಥೆಯ ಜಂಟಿ ಕಾರ್ಯದರ್ಶಿ ಎನ್.ಎಸ್. ವಂಟಮುತ್ತೆ. ನಿರ್ದೇಶಕರಾದ ಶಿವಾನಂದ ಚೊನ್ನದ, ಮಲ್ಲಿಕಾರ್ಜುನ ಕವಟಗಿಮಠ, ಆಡಳಿತಾಧಿಕಾರಿ ಸಾಗರ ಬಿಸ್ಕೊಪ ಅಂಗಸಂಸ್ಥೆಗಳ ಎಲ್ಲ ಮುಖ್ಯಸ್ಥರು ಉಪಸ್ಥಿತರಿದ್ದರು. ಎಸ್.ಕೆ.ಕೊಟ್ರೆ ಸ್ವಾಗತಿಸಿದರು.ಕೆ.ಎಸ್.ಪೂಜಾರಿ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ