ಕರ್ತವ್ಯದಲ್ಲಿ ನಿಷ್ಠೆ ಇದ್ದರೆ ಸ್ವಾತಂತ್ರ್ಯ ಸಿಕ್ಕಿದ್ದು ಸಾರ್ಥಕ: ಕೆ.ನಟರಾಜ್

KannadaprabhaNewsNetwork |  
Published : Aug 16, 2026, 03:00 AM IST
15ಕೆಎಂಎನ್ ಡಿ39 | Kannada Prabha

ಸಾರಾಂಶ

ನಮ್ಮ ಕಚೇರಿಗೆ ಬರುವ ಪ್ರತಿಯೊಬ್ಬ ನಾಗರೀಕರನ್ನು ಗೌರವದಿಂದ ಕಂಡು ಅವರ ಅಹವಾಲುಗಳನ್ನು ಕೇಳಿ ಅವರ ಕೆಲಸಗಳನ್ನು ಸುಸೂತ್ರವಾಗಿ ಮಾಡಿಕೊಟ್ಟಾಗ ಮಾತ್ರ ಹಲವು ಮಹನೀಯರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದ್ದು ಸಾರ್ಥಕವಾಗುತ್ತದೆ.

ಕನ್ನಡಪ್ರಭ ವಾರ್ತೆ ಹಲಗೂರು

ಸರ್ಕಾರಿ ಸೇವೆ ಮಾಡುವಾಗ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಇದ್ದರೆ ಮಾತ್ರ ನಮಗೆ ಸ್ವಾತಂತ್ರ್ಯ ತಂದು ಕೊಟ್ಟವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ನಾಡಕಚೇರಿ ಉಪತಹಸೀಲ್ದಾರ್ ಕೆ.ನಟರಾಜ್ ತಿಳಿಸಿದರು.

ದೇವೇಗೌಡ ವೃತ್ತದ ನಾಡಕಚೇರಿ ಆವರಣದಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧೀಜಿ ಮತ್ತು ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಮ್ಮ ಕಚೇರಿಗೆ ಬರುವ ಪ್ರತಿಯೊಬ್ಬ ನಾಗರೀಕರನ್ನು ಗೌರವದಿಂದ ಕಂಡು ಅವರ ಅಹವಾಲುಗಳನ್ನು ಕೇಳಿ ಅವರ ಕೆಲಸಗಳನ್ನು ಸುಸೂತ್ರವಾಗಿ ಮಾಡಿಕೊಟ್ಟಾಗ ಮಾತ್ರ ಹಲವು ಮಹನೀಯರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದ್ದು ಸಾರ್ಥಕವಾಗುತ್ತದೆ ಎಂದರು.

ಸ್ವಾತಂತ್ರ್ಯ ದಿನದ ಸವಿ ನೆನಪಿಗಾಗಿ ಗಿಡಗಳನ್ನು ನೆಟ್ಟು ಪರಿಸರ ಕಾಪಾಡಿಕೊಳ್ಳುವುದಲ್ಲದೇ ನಮ್ಮ ದೇಶ, ಭಾಷೆ, ನೆಲ, ಜಲವನ್ನು ಕಾಪಾಡಿಕೊಳ್ಳುವ ಹೊಣೆ ನಮ್ಮದಾಗಿದೆ ಎಂದರು.

ಈ ಸಂದರ್ಭದಲ್ಲಿ ಹಲಗೂರು ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳಿಗೆ ಮಹನೀಯರು ಬರದಿರುವ ಪುಸ್ತಕ ಮತ್ತು ಲೇಖನಿಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮಲೆಕ್ಕಿಗರಾದ ಸೋಮಣ್ಣ ಮತ್ತು ಲತಾ, ಸಿಬ್ಬಂದಿಗಳಾದ ನರಸಪ್ಪ ರಾತೋಡ್, ಸಿದ್ದರಾಮ ಮೌಳಿ, ಮಹದೇವಸ್ವಾಮಿ,ಪುಟ್ಟಸ್ವಾಮಿ, ಸಿದ್ದಮ್ಮ, ಶಿವಪ್ರಕಾಶ್,ಅನಿಲ್, ನಂದನ್, ಹಾಗೂ ಎನ್.ಕೆ. ಕುಮಾರ್ ಸೇರಿದಂತೆ ಇತರರು ಇದ್ದರು.

ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ದೇಶಭಕ್ತಿಯ ಕಳೆ!ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ಸಿದ್ದಯ್ಯಕೊಪ್ಪಲು ಗ್ರಾಮದ ಬಳಿಯಿರುವ ಮಂಡ್ಯ ಇಂಟರ್‌ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ಮಹನೀಯರ ವೇಷಭೂಷಣ ತೊಟ್ಟು ಮಕ್ಕಳು ದೇಶಭಕ್ತಿಯ ಸಂದೇಶ ಸಾರಿದರು. ಶಾಲೆಯ ಗೌರವಾಧ್ಯಕ್ಷರಾದ ಡಿ. ಶಿವಲಿಂಗೇಗೌಡರವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದ ಸುಂದರ ಕ್ಷಣ.ಇಂದು ಸಂಡೆ ಲೈಬ್ರರಿ ಆಯೋಜನೆ

ಮಂಡ್ಯ: ಪರಿಚಯ ಪ್ರಕಾಶನ ವತಿಯಿಂದ ಆ.16ರಂದು ನಗರದ ಶಿವನಂಜಪ್ಪ ಪಾರ್ಕ್ ನಲ್ಲಿ ಬೆಳಗ್ಗೆ 10.30ಗಂಟೆಗೆ ಸಂಡೇ ಲೈಬ್ರರಿಯನ್ನು ಆಯೋಜಿಸಲಾಗಿದೆ. ಮಕ್ಕಳ ಪುಸ್ತಕಗಳ ಮೇಲಿನ ಆಸಕ್ತಿ ಹೆಚ್ಚಿಸಲು ಪ್ರತಿ ತಿಂಗಳ ಮೂರನೇ ಭಾನುವಾರ ಸಂಡೇ ಲೈಬ್ರರಿ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಭಾನುವಾರದ ವಿಶೇಷದಲ್ಲಿ ನಿರ್ದೇಶಕ ಹಾಗೂ ರಂಗ ಶಿಕ್ಷಕ ತ್ಯಾಗರಾಜು ದೇವರಹಳ್ಳಿರವರು ಚಿಣ್ಣರಿಗೆ ರಂಗಭೂಮಿಯನ್ನು ಪರಿಚಯಿಸಲಿದ್ದಾರೆ. ಕಥೆ , ನಟನೆ, ರಂಗಗೀತೆಗಳನ್ನು ಹೇಳಿಕೊಡುತ್ತಿದ್ದಾರೆ ಎಂದು ಪರಿಚಯ ಪ್ರಕಾಶನದ ಸಂಸ್ಥಾಪಕ ಶಿವಕುಮಾರ್ ಆರಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಾಪರ್ಟಿ ಎಕ್ಸ್‌ಪೋಗೆ ಭರ್ಜರಿ ಜನ ಬೆಂಬಲ
ಡೆಂಘೀ ನಿಯಂತ್ರಣಕ್ಕೆ ಮುಂಜಾಗೃತ ಕ್ರಮ ಕೈಗೊಳ್ಳಿ: ಮದನಿ