)
-ಪೇಂಟಿಂಗ್ ಕೆಲಸ ಮಾಡ್ತಿದ್ದವನ ಜತೆ ರಿಯಲ್ ಎಸ್ಟೇಟ್ ವ್ಯವಹಾರ । ಭೂ ವ್ಯವಹಾರದಲ್ಲಿ ಇಬ್ಬರ ಮಧ್ಯೆ ಮನಸ್ತಾಪ-ಆರ್ಥಿಕ ನಷ್ಟದಿಂದ ಉದ್ಯಮಿ ಹತ್ಯೆಗೆ ಸಂಚು । ಕೊಲೆ ಮಾಡಲು 15 ಲಕ್ಷ ರು. ಸುಪಾರಿ । ಬಳಿಕ ಹತ್ಯೆ ನಡೆಸಿ ಪರಾರಿ
ರಿಯಲ್ ಎಸ್ಟೇಟ್ ಉದ್ಯಮಿ ಚರಣ್ಗೌಡ ಕೊಲೆ ಪ್ರಕರಣ ಸಂಬಂಧ ಮೃತನ ವ್ಯವಹಾರಿಕ ಪಾಲುದಾರ ಸೇರಿ ಐವರನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಲಹಂಕ ಹತ್ತಿರದ ವೆಂಕಟಾಲದ ಕಿರಣ್ ಗೌಡ, ಆತನ ತಂದೆ ಲೋಕೇಶ್, ಸಹಚರ ಆಕಾಶ್, ರಾಜಾನುಕುಂಟೆಯ ರುದ್ರೇಶ್ ಹಾಗೂ ಕೊತ್ತನೂರಿನ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ಕುಮಾರ್ ಬಂಧಿತರು.
ಕಳೆದ ಶುಕ್ರವಾರ ಯಲಹಂಕ ಉಪನಗರದ 1ನೇ ಹಂತದ ವಿಶ್ವೇಶ್ವರಯ್ಯ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ಗೌಡ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆತನ ಪತ್ನಿ ಎದುರಿನಲ್ಲಿ ಕಿಡಿಗೇಡಿಗಳು ಹತ್ಯೆಗೈದಿದ್ದರು. ಈ ಕೃತ್ಯದ ತನಿಖೆಗೆ ಈಶಾನ್ಯ ವಿಭಾಗದ ಡಿಸಿಪಿ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ಯಲಹಂಕ ಉಪ ವಿಭಾಗದ ಎಸಿಪಿ ವಿಜಯ್ ಹಡಗಲಿ ನೇತೃತ್ವದ ತಂಡ ತನಿಖೆಗಿಳಿಯಿತು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ತನಿಖಾ ತಂಡ ಸೆರೆ ಹಿಡಿದಿದೆ.ವ್ಯವಹಾರಿಕ ವೈಷಮ್ಯಕ್ಕೆ ಬಲಿ:
ಈ ಸ್ನೇಹದಲ್ಲಿ ಆತನಿಗೆ ಪೇಂಟಿಂಗ್ ಕೆಲಸ ಕೊಡುತ್ತಿದ್ದ ಚರಣ್, ತರುವಾಯ ಗೆಳೆಯನ ಜತೆ ಪಾಲುದಾರಿಕೆಯಲ್ಲಿ ರಿಯಲ್ ಎಸ್ಟೇಟ್ ಆರಂಭಿಸಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿ ನೂರಾರು ಎಕರೆ ಜಮೀನು ಖರೀದಿಸಿ ಅವರು ಬಡಾವಣೆ ಅಭಿವೃದ್ಧಿಪಡಿಸಿದ್ದರು. ಕಾಲ ಕಳೆದಂತೆ ಭೂ ವ್ಯವಹಾರದಲ್ಲಿ ಇಬ್ಬರ ಮಧ್ಯೆ ಮನಸ್ತಾಪ ಮೂಡಿತ್ತು. ಈ ಭಿನ್ನಾಭಿಪ್ರಾಯದ ಬಳಿಕ ಇಬ್ಬರು ಪ್ರತ್ಯೇಕವಾದರು. ಅಲ್ಲಿಂದ ಹಗೆತನವು ಹುಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಧನಿ ಪ್ರಾಪರ್ಟಿಸ್’ ಹೆಸರಿನಲ್ಲಿ ಚರಣ್ ಹಾಗೂ ‘ಭಾರತವಾಸಿ ಪ್ರಾಪರ್ಟಿಸ್ ’ ಹೆಸರಿನ ರಿಯಲ್ ಎಸ್ಟೇಟ್ ಕಂಪನಿಯನ್ನು ಅಲಗಾನಿ ಕಿರಣ್ ಕುಮಾರ್ ಸ್ಥಾಪಿಸಿದ್ದರು. ಗೌರಿಬಿದನೂರು ತಾಲೂಕಿನಲ್ಲಿ ಈ ಗೆಳೆಯರು ಪೈಪೋಟಿಗೆ ಬಿದ್ದವರಂತೆ ಭೂಮಿ ಖರೀದಿಸಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದರು. ಈ ಸಮರವು ಆರೋಗ್ಯವಾಗಿರದಂತೆ ದ್ವೇಷ ಜ್ವಾಲೆ ಹುಟ್ಟಿಸಿತು.
1 ವರ್ಷದಿಂದ ಕೊಲೆಗೆ ತಾಲೀಮು:
ಮಗನಿಗೆ ಸುಪಾರಿ ಕೊಟ್ಟ ತಂದೆ:
ಚರಣ್ ಸಾವನ್ನು ಪೊಲೀಸರಿಂದಲೇ ಖಚಿತಪಡಿಸಿಕೊಂಡತನ್ನ ಮೇಲೆ ಅನುಮಾನಬಾರದಂತೆ ಮುನ್ನಚ್ಚರಿಕೆ ವಹಿಸಿದ್ದ ಅಲಗಾನಿ ಕಿರಣ್ ಕುಮಾರ್, ಕೃತ್ಯ ನಡೆದ ದಿನ ನಗರದಲ್ಲೇ ಉಳಿದಿದ್ದ. ತನ್ನ ಭೂ ವ್ಯವಹಾರ ಸಂಬಂಧಿಸಿದ ವ್ಯಾಜ್ಯಗಳ ಬಗ್ಗೆ ನ್ಯಾಯಾಲಯಕ್ಕೆ ಆತ ತೆರಳಿದ್ದ. ಅದೇ ದಿನ ಮಧ್ಯಾಹ್ನ ಪರಿಚಿತ ಯಲಹಂಕ ಉಪನಗರ ಠಾಣೆ ಪೊಲೀಸರಿಗೆ ಕರೆ ಮಾಡಿ ‘ಏನೋ ಯಲಹಂಕದಲ್ಲಿ ಚರಣ್ ಹತ್ಯೆಯಾಗಿದೆ ಎಂದು ಸುದ್ದಿ ನೋಡಿದೆ ಸರ್.ಚರಣ್ ಸತ್ತಿದ್ದನಾ’ ಎಂದು ಕಿರಣ್ ವಿಚಾರಿಸಿದ್ದ. ಆಗ ಚರಣ್ ಮೃತಪಟ್ಟಿದ್ದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಆಗಲೇ ಆತನ ಮೇಲೆ ಅನುಮಾನಕ್ಕೂ ಕಾರಣವಾಗಿದೆ. 10 ವರ್ಷಗಳಿಂದ ಮಾತನಾಡದ ಚರಣ್ ಬಗ್ಗೆ ಕಿರಣ್ ವಿಚಾರಿಸಿದ್ದು ಪೊಲೀಸರಿಗೆ ಗುಮಾನಿ ತರಿಸಿತು. ಈ ಬಗ್ಗೆ ಕೆದಕಿದಾಗ ಕೊಲೆ ರಹಸ್ಯವೇ ಬಯಲಾಗಿದೆ.
ಗೌರಿಬಿದನೂರಿನ ಕೈಗಾರಿಕಾ ಪ್ರದೇಶದ ಗೌಡಸಂದ್ರ ಹಾಗೂ ಯರ್ರಹಳ್ಳಿ ಸುತ್ತಮುತ್ತ ಲೇಔಟ್ಗಳ ಅಭಿವೃದ್ಧಿಪಡಿಸಿ ಸಂಪಾದಿಸಿದ ಹಣದಲ್ಲಿ ಗ್ರೇಟ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಸ್ಫರ್ಧಿಸಲು ಕಿರಣ್ ತಯಾರಿ ನಡೆಸಿದ್ದ. ಅಲ್ಲದೆ ಬಲಪಂಥೀಯ ಸಂಘಟನೆಗಳ ಜತೆ ಗುರುತಿಸಿಕೊಂಡು ಆತ ಸಕ್ರಿಯವಾಗಿದ್ದ. ಅಲ್ಲದೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಸೇರಿದಂತೆ ಜಾಲತಾಣಗಳಲ್ಲಿ ಆ ಸಂಘಟನೆಗಳ ಪರವಾಗಿ ವಿಡಿಯೋಗಳನ್ನು ಕಿರಣ್ ಹಂಚಿಕೊಂಡಿದ್ದ ಎಂದು ತಿಳಿದು ಬಂದಿದೆ.
ಸುಳಿವು ನೀಡಿದ ಸಿಸಿಟಿವಿಹತ್ಯೆ ತನಿಖೆಗಿಳಿದ ಪೊಲೀಸರು, ಘಟನಾ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದರು. ಆಗ ಕಿರಣ್ ಗೌಡನ ಮುಖಚಹರೆಯನ್ನು ಸ್ಥಳೀಯರು ಗುರುತಿಸಿದ್ದಾರೆ. ಕೂಡಲೇ ಚುರುಕಾದ ಪೊಲೀಸರು, ಆತನ ಮನೆಗೆ ತೆರಳಿದ್ದಾರೆ. ಆದರೆ ಮನೆಗೆ ಬೀಗ ಹಾಕಿ ಆತನ ತಾಯಿ ಕ್ಯಾಬ್ನಲ್ಲಿ ತೆರಳಿದ್ದು ಪೊಲೀಸರಿಗೆ ನೆರೆಹೊರೆಯವರು ತಿಳಿಸಿದ್ದಾರೆ. ಆ ಕ್ಯಾಬ್ ಚಾಲಕನ ಪತ್ತೆ ಹಚ್ಚಿದಾಗ ಕಿರಣ್ ಸುಳಿವು ಸಿಕ್ಕಿತು. ಬಳಿಕ ಕಿರಣ್ ಹಾಗೂ ಆಕಾಶ್ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಹೊರ ಹಾಕಿದರು. ಈ ಇಬ್ಬರ ಹೇಳಿಕೆ ಆಧರಿಸಿ ಇನ್ನುಳಿದವರು ಸೆರೆಯಾದರು.
ಧರ್ಮಸ್ಥಳಕ್ಕೆ ತೆರಳಿದ್ದ ಸುಪಾರಿ ಹಂತಕರುಈ ಹತ್ಯೆ ಬಳಿಕ ಧರ್ಮಸ್ಥಳಕ್ಕೆ ತೆರಳಿ ಮನ್ನಿಸುವಂತೆ ದೇವರಿಗೆ ಹರಕೆ ಸುಪಾರಿ ಹಂತಕರು ಸಲ್ಲಿಸಿದ್ದರು. ಅಲ್ಲಿಂದ ಮಲೆ ಮಹದೇಶ್ವರ ದೇವಾಲಯ ಹೋಗಲು ತಯಾರಿಸಿ ನಡೆಸಿದ್ದರು. ಅಷ್ಟರಲ್ಲಿ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಯಿತು. ಇನ್ನು ಯಲಹಂಕದಿಂದ ಹೊಸಕೋಟೆವರೆಗೆ ಭಯದಿಂದ ಕಿರಣ್ ತಂದೆ ಲೋಕೇಶ್ ನಡೆದುಕೊಂಡೇ ಸುತ್ತಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.