ಚಾಮರಾಜನಗರದ ಭ್ರಮರಾಂಭ ಬಡಾವಣೆಯಲ್ಲಿರುವ ಶ್ರೀಅಕ್ಷಯ ಶ್ರೀ ಸೌಹಾರ್ದ ಸಹಕಾರಿ ಸಂಘದ ೯ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಸಂಘ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶ್ರಮಿಕ ವರ್ಗದವರು, ರೈತರು, ವ್ಯಾಪಾರಸ್ಥರು, ಕೃಷಿ ಕಾರ್ಮಿಕರು, ಮಧ್ಯಮ ವರ್ಗದವರ ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸೌಹಾರ್ದ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಶ್ರೀ ಅಕ್ಷಯಶ್ರೀ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ತಿಳಿಸಿದರು. ನಗರದ ಭ್ರಮರಾಂಭ ಬಡಾವಣೆಯಲ್ಲಿರುವ ಶ್ರೀಅಕ್ಷಯ ಶ್ರೀ ಸೌಹಾರ್ದ ಸಹಕಾರಿ ಸಂಘದ ೯ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೌಹಾರ್ದ ಸಹಕಾರ ಸಂಘಗಳ ಬೆಳವಣಿಗೆಯಿಂದ ಲೇವಾದೇವಿದಾರರು, ಮೀಟರ್ ಬಡ್ಡಿ ದಂಧೆ ಸೇರಿದಂತೆ ಅನೇಕ ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಿದಂತೆ ಆಗುತ್ತದೆ. ಸೌಹಾರ್ದ ಸಹಕಾರ ಸಂಘಗಳು ಸದಸ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ವ್ಯವಹಾರ ನಡೆಸುತ್ತದೆ. ಪ್ರತಿ ವರ್ಷದ ಲಾಭಂಶವು ಷೇರುದಾರರಿಗೆ ಹಂಚಿಕೆಯಾಗುತ್ತದೆ. ಇಂಥ ಸೌಹಾರ್ದ ಸಂಘಗಳು ಬಡವರು, ಶ್ರಮಿಕವರ್ಗಗಳು ಹಾಗೂ ಸಣ್ಣ ಪುಟ್ಟ ವ್ಯಾಪಾರ ಮಾಡುವಂತಹವರಿಗೆ ಉತ್ತಮವಾಗಿದೆ ಎಂದರು. ಸೌಹಾರ್ದ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಲರಾಮ್ ಮಾತನಾಡಿ, ಸೌಹಾರ್ದ ಸಹಕಾರ ಸಂಘಗಳು ಷೇರುದಾರ ಹಿತರಕ್ಷಣೆಗೆ ಹಾಗೂ ಸಂಘದ ಬಲವರ್ಧನೆಗೆ ಹೆಚ್ಚಿನ ಅವಕಾಶವಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಬಹಳ ಬಲಿಷ್ಠವಾಗಿದ್ದು, ಆ ವರ್ಗಗಳ ಜನರು ತಮ್ಮದೇ ಸೌಹಾರ್ದ ಸಹಕಾರ ಸಂಘಗಳನ್ನು ಸ್ಥಾಪನೆ ಮಾಡಿಕೊಂಡು ವ್ಯವಹಾರ ಮಾಡುವ ಜೊತೆಗೆ ವ್ಯಾಪಾರ ವೃದ್ಧಿ ಮತ್ತು ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತದೆ ಎಂದರು. ಮುಖಂಡರಾದ ರೈತ ಸಂಘದ ಬಸವಣ್ಣ, ಕರಿನಂಜನಪುರ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಡಿ. ಮಹೇಶ್, ಶುಭೋದಯಸಿದ್ದರಾಜು, ದಲಿತ ಸಂಘಟನೆಗಳ ಒಕ್ಕೂಟದ ಸಿ.ಎಂ. ಕೃಷ್ಣಮೂರ್ತಿ, ಮಾದಾಪುರ ರವಿಕುಮಾರ್ ಸಂಘದ ನಿರ್ದೇಶಕ ಆರ್.ಎಸ್. ಮಹದೇವಪ್ಪ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ಲಿಂಗಪ್ಪ, ನಿರ್ದೇಶಕರಾದ ಬಿ. ಗುರುಸ್ವಾಮಿ, ದೇವರಾಜು, ನಾಗಶೆಟ್ಟಿ ಶ್ರೀನಿವಾಸ್, ಮಾನಸ, ಮಧು ನಾಗಮಲ್ಲಪ್ಪ, ಮುಖಂಡರಾದ ಆರ್. ಪುಟ್ಟಮಲ್ಲಪ್ಪ. ಲಿಂಗರಾಜು, ಪುಟ್ಟಸ್ವಾಮಿ ಮರಿಯಾಲ, ಮುಕ್ಕಹಳ್ಳಿ ಗಂಗಾಧರ್, ಕಲ್ಪುರ ಮಹೇಶ್, ಕರಿನಂಜನಪುರ ಪುಟ್ಟಸ್ವಾಮಿ, ಅಸ್ಲಂ ಪಾಷಾ, ಕಲೀಂವುಲ್ಲಾ, ಸಿಇಒ ಗೀತಾ, ಸಹಾಯಕ ಬಸವರಾಜು, ಹಾಗೂ ಸದಸ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.