ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿನ ಜಲಾಲಿಯ ಮಸೀದಿ ವತಿಯಿಂದ ಮಸೀದಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸೌಹಾರ್ದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಆರಾಧನಾಲಯಗಳು ಮನುಷ್ಯರ ನಡುವೆ ಉತ್ತಮ ಸಂಬಂಧ ಬೆಸೆಯುವ ಕೆಲಸ ಮಾಡಿದರೆ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ವಾತಾವರಣ ಇರುತ್ತದೆ ಎಂದರು.ಧರ್ಮಗುರು ಮೌಲಾನ ಅಬೂಬಕ್ಕರ್ ಸಿದ್ದಿಕ್ ಮೋಂಟುಗೋಳಿ ಮಾತನಾಡಿ, ಪ್ರವಾದಿ ಮಹಮ್ಮದ್ ಕಾಲದಲ್ಲಿಯೂ ಮಸೀದಿ ಜ್ಞಾನದ ಕೇಂದ್ರವಾಗಿತ್ತು. ಇಂದಿಗೂ ಅವರ ಸಂದೇಶಗಳು ಸಾರ್ವಕಾಲಿಕವಾದದು. ಮಕ್ಕಳಿಗೆ ಮಹಾನ್ ಸಂತರ ಸಂದೇಶಗಳನ್ನು ತಿಳಿಹೇಳುವ ಕೆಲಸ ಆಗಬೇಕಾಗಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಎಲ್ಲಾ ಹಬ್ಬದ ಆಚರಣೆಗಳು ಎಲ್ಲಾ ಧರ್ಮದವರನ್ನು ಸೇರಿಸಿ ಆಚರಿಸುತ್ತಾರೆ. ಜಿಲ್ಲೆಯ ಜನರ ನೈಜ ಭಾವನೆಗಳನ್ನು ಅರಿತುಕೊಂಡು ಪ್ರೀತಿ ವಿಶ್ವಾಸದಿಂದ ಬದುಕಲು ಇಂತಹ ಆಚರಣೆಗಳು ಅವಶ್ಯವಾಗಿದೆ ಎಂದು ಸೇಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ವಂ. ಗುರು ಪ್ರಾನ್ಸಿಸ್ ಚೆರಕ್ಕಲ್ ಹೇಳಿದರು.
ಜಲಾಲಿಯ ಮಸೀದಿ ಅಧ್ಯಕ್ಷ ಎಂ.ಬಿ.ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು.