ಮುಂಜಾನೆ ಗೆಳೆಯರಿಂದ ಸಾಧಕರ ಸನ್ಮಾನ

KannadaprabhaNewsNetwork |  
Published : Jun 19, 2026, 01:30 AM IST
0000000000000000 | Kannada Prabha

ಸಾರಾಂಶ

ತುಮಕೂರು: ವಿಶ್ವವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್ ಪಡೆದ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಹಾಗೂ ಅಥ್ಲೆಟಿಕ್ಸ್‌ ಸಬ್‌ ಜ್ಯೂನಿಯರ್ಸ್ ವಿಭಾಗದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ನಗರದ ಪರೀಕ್ಷಾ ಹಾಗೂ ಸುದೀತಿ ಅವರನ್ನು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮುಂಜಾನೆ ಗೆಳೆಯರ ಬಳಗದಿಂದ ಗುರುವಾರ ಸನ್ಮಾನಿಸಲಾಯಿತು.

ತುಮಕೂರು: ವಿಶ್ವವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್ ಪಡೆದ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಹಾಗೂ ಅಥ್ಲೆಟಿಕ್ಸ್‌ ಸಬ್‌ ಜ್ಯೂನಿಯರ್ಸ್ ವಿಭಾಗದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ನಗರದ ಪರೀಕ್ಷಾ ಹಾಗೂ ಸುದೀತಿ ಅವರನ್ನು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮುಂಜಾನೆ ಗೆಳೆಯರ ಬಳಗದಿಂದ ಗುರುವಾರ ಸನ್ಮಾನಿಸಲಾಯಿತು.

ಉದ್ಯಮಿ ಮಧುಗೋಲ್ಡ್ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಸಾಧಕರನ್ನು ಸನ್ಮಾನಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರಟಿ.ಆರ್. ರೇವಣ್ಣ ಅವರು, ಶಾಲಾ ದಿನಗಳಲ್ಲಿ ತಾವು ಫುಟ್ ಬಾಲ್‌ ಆಟಗಾರರಾಗಿದ್ದು, ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದೆ. ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧಿಯವರು ತುಮಕೂರಿಗೆ ಆಗಮಿಸಿದ್ದ ವೇಳೆ ಅವರನ್ನು ಭೇಟಿ ಮಾಡಿ, ಅವರಿಂದ ಪ್ರೇರಣೆಯಾಗಿ ತಾವೂ ಸ್ವಾತಂತ್ರ್ಯ ಚಳವಳಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡೆ ಎಂದು ನೆನಪು ಮಾಡಿಕೊಂಡರು. ಕ್ವಿಟ್‌ ಇಂಡಿಯಾ ಚಳವಳಿ ತೀವ್ರವಾಗಿದ್ದಾಗ ತುಮಕೂರಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಪ್ರಖರವಾಗಿತ್ತು. ಅನೇಕ ಹೋರಾಟಗಾರರೊಂದಿಗೆ ವಿವಿಧ ರೂಪದ ಪ್ರತಿಭಟನೆ ಮಾಡಿ ಹೋರಾಟದಲ್ಲಿ ಸಕ್ರಿಯವಾಗಿದ್ದೆ ಎಂದು ರೇವಣ್ಣ ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದ ಹಿರಿಯ ಕ್ರೀಡಾಪಟು ಟಿ.ಕೆ. ಆನಂದ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ. ಧನಿಯಾಕುಮಾರ್, ವೀರಶೈವ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷ ಹೆಬ್ಬಾಕ ಮಲ್ಲಿಕಾರ್ಜುನಯ್ಯ, ವಿವೇಕಾನಂದ ಪತ್ರಿನ ಸಹಕಾರ ಸಂಘದ ಅಧ್ಯಕ್ಷ ಪಿ. ಮೂರ್ತಿ, ರಾಜ್ಯಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್. ಮಧುಕರ್, ಪತ್ರಕರ್ತ ಕುಚ್ಚಂಗಿ ಪ್ರಸನ್ನ, ಮುಖಂಡರಾದ ವಾಲೆ ಚಂದ್ರಯ್ಯ, ಎಂ.ಕೆ. ವೆಂಕಟಸ್ವಾಮಿ, ಗೂಳೂರು ಶ್ರೀನಿವಾಸ್, ಮಹೇಶ್, ಪೆಟ್ಟಿರಾಜು, ಸಿಂಧೂರು ಶ್ರೀನಿವಾಸ್, ನಟರಾಜಶೆಟ್ಟಿ, ಜಗಜ್ಯೋತಿ ಸಿದ್ಧರಾಮಯ್ಯ, ದಿನೇಶ್, ಸುರೇಶ್, ತಿಮ್ಮಾರೆಡ್ಡಿ ಮತ್ತಿತರರು ಹಾಜರಿದ್ದು ಮಧುಗೋಲ್ಡ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಯ್ಸಳರ ಪರಂಪರೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ ಲತಾಕುಮಾರಿ
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿರ್ಲಕ್ಷ್ಯ ಬೇಡ: ಜಿಲ್ಲಾಧಿಕಾರಿ ಲತಾಕುಮಾರಿ