ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭಗೀರಥ ಪ್ರೀಮಿಯರ್ ಲೀಗ್ - ಸೀಸನ್ ೨ ಪಂದ್ಯಾವಳಿ
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಗೀರಥ ಪ್ರೀಮಿಯರ್ ಲೀಗ್ ಸೀಸನ್ ೨ ವತಿಯಿಂದ ಆಯೋಜಿಸಲಾಗಿದ್ದ ೩ ದಿನಗಳ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮವನ್ನು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ, ನಂತರ ಶ್ರೀ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಇಂದಿನ ಯುವ ಜನತೆಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವಕರ ಪ್ರತಿಭೆಯನ್ನು ಹೊರತರಲು ವೇದಿಕೆಗಳು ಸೃಷ್ಟಿಯಾಗಬೇಕು. ಕ್ರೀಡೆಗಳಿಂದ ಎಲ್ಲರ ಮನಸ್ಸು ಒಂದಾಗಬೇಕು ಎಂದರು.ನನ್ನ ತಂದೆ ದಿ.ಆರ್.ಧ್ರುವನಾರಾಯಣ ಅವರು ಲೋಕಸಭಾ ಸದಸ್ಯರಾಗಿದ್ದಾಗ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಂತೆಯೇ ನಾನು ಅವರ ಹಾದಿಯಲ್ಲಿ ನಡೆಯುವ ಮೂಲಕ ನನ್ನ ಸಹಕಾರವನ್ನು ನೀಡುತ್ತೇನೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಇಷ್ಟು ಸಮೃದ್ಧಿ ಕಾಣಲು ಲೋಕಸಭಾ ಸದಸ್ಯರಾಗಿದ್ದ ದಿ.ಧ್ರುವನಾರಾಯಣ ಅವರೇ ಕಾರಣ. ಅವರ ಅಂದಿನ ಕ್ರೀಡಾ ಆಸಕ್ತಿಯೇ ಇಷ್ಟು ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ. ನಮ್ಮ ಕಾರ್ಯಕ್ರಮಕ್ಕೆ ಶಾಸಕರಾಗಿ ಆಗಮಿಸಿರುವ ದರ್ಶನ್ ಧ್ರುವನಾರಾಯಣ ಅವರು ಮುಂದಿನ ದಿನಗಳಲ್ಲಿ ತಂದೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಲೋಕಸಭಾ ಸದಸ್ಯರಾಗಲಿ ಎಂಬುದು ನಮ್ಮ ಬಯಕೆ ಎಂದರು.
ಪರಿಸರ ಪ್ರೇಮಿ ವೆಂಕಟೇಶ್ ಮಾತನಾಡಿ, ಮೊದಲಿನಿಂದಲೂ ನಾನು ಪರಿಸರ ಪ್ರೇಮಿ ಅಲ್ಲಲ್ಲಿ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೆ. ಲೋಕಸಭಾ ಸದಸ್ಯರಾಗಿದ್ದ ದಿ.ಆರ್.ಧ್ರುವನಾರಾಯಣ ಅವರು ಈ ಕ್ರೀಡಾಂಗಣದ ಸುತ್ತ ನೆಟ್ಟಿರುವ ಗಿಡಗಳನ್ನು ನೋಡಿ, ನನ್ನನ್ನು ಗುರುತಿಸಿ ಸಾಕಷ್ಟು ಸನ್ಮಾನ ಮಾಡಿದ್ದಾರೆ. ಜೊತೆಗೆ ಕೇಂದ್ರದ ಮಂತ್ರಿಗಳಿಂದಲೂ ಕೂಡಾ ಸನ್ಮಾನ ಮಾಡಿಸಿದ್ದಾರೆ. ನನಗೆ ಸಿಕ್ಕಂತಹ ಪ್ರೋತ್ಸಾಹದಿಂದ ಇದುವರೆಗೂ ಸುಮಾರು ೧೨ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿ ಬೆಳೆಸಿದ್ದೇನೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ತಾ.ಪಂ. ಮಾಜಿ ಅಧ್ಯಕ್ಷ ಚಿಕ್ಕಮಹದೇವು, ಎಪಿಎಂಸಿ ಮಾಜಿ ಅಧ್ಯಕ್ಷ ಮುದ್ದು ಮಾದಶೆಟ್ಟಿ, ರಾಶಿ ಸ್ಟುಡಿಯೋ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣ, ಬಿಜೆಪಿ ನಗರ ಮಂಡಲ ಯುವಮೋರ್ಚಾ ಅಧ್ಯಕ್ಷ ಆನಂದ್ ಭಗೀರಥ್, ಭಗೀರಥ ಪ್ರೀಮಿಯರ್ ಲೀಗ್ - ಸೀಸನ್ ೨ ಅಧ್ಯಕ್ಷ ರಾಜೇಂದ್ರ, ಕಾಂಗ್ರೆಸ್ ಮುಖಂಡ ದ್ವಾರಕೀಶ್ ಉಪ್ಪಾರ್, ೭ ಸ್ಟಾರ್ ಬೀಡಿ ಮಾಲೀಕ ಭರತ್‌ಕುಮಾರ್, ಜಗ್ಗಣ್ಣ, ಅಜಯ್, ಮೋಹನ್, ರಾಜು, ಶ್ರೀನಿವಾಸ, ಚಂದನ್,