- ಚನ್ನಗಿರಿ ತಾಲೂಕು ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಮಠಾಧೀಶರ ತೀರ್ಮಾನ
ಕನ್ನಡಪ್ರಭ ವಾರ್ತೆ ದಾವಣಗೆರೆ ಮೇ 1 ರಿಂದ 16 ರವರೆಗೆ ನಮ್ಮ ನಡೆ ಸರ್ವೋದಯದೆಡೆಗೆ ಜನಜಾಗೃತಿ ಆಂದೋಲನ ನಡೆಯಲಿದೆ. ಚನ್ನಗಿರಿ ತಾಲೂಕು ಪಾಂಡೋಮಟ್ಟಿಯ ವಿರಕ್ತ ಮಠದಲ್ಲಿ ಮಂಗಳವಾರ ನಡೆದ ಜನಜಾಗೃತಿ ಆಂದೋಲನದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.
ಈ ಆಂದೋಲನವು ಮೇ 1ರಂದು ಬೆಳಗಾವಿಯಿಂದ ಪ್ರಾರಂಭವಾಗಿ 16ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಮುಕ್ತಾಯಗೊಳ್ಳುವುದು. ಆದ್ದರಿಂದ ಕರ್ನಾಟಕದ 31 ಜಿಲ್ಲೆಗಳ ಜನರಲ್ಲಿ “ಅರಿವು ಆಧಾರಿತ ಸಾಮೂಹಿಕ ಚಿಂತನೆ ಮತ್ತು ಕಾರ್ಯಾಚರಣೆ” ಮೂಲಕ ಸಮಾಜದ ಪರಿವರ್ತನೆ ಮಾಡಲು ಮುಂದಾಗಬೇಕಾಗಿದೆ.ಆಂದೋಲನದಲ್ಲಿ ‘ಸರ್ವೋದಯ ಸಮುದಾಯ ಕರ್ನಾಟಕ’ ಸಂಸ್ಥೆ ಪದಾಧಿಕಾರಿಗಳು, ಚಿಂತಕರು, ಪ್ರಗತಿಪರ ಕೃಷಿಕರು, ವೈದ್ಯರು, ಶಿಕ್ಷಣ ಪ್ರೇಮಿಗಳು, ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವವರು, ಯುವಜನತೆ ಮತ್ತು ಸ್ವಾಮಿಗಳು ಭಾಗವಹಿಸಲಿದ್ದಾರೆ. ಪ್ರತಿದಿನ 2 ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಸರ್ವೋದಯದ ಈ ಐದು ಕ್ಷೇತ್ರಗಳ ಪರಿವರ್ತನೆ ನೈತಿಕತೆಯಿಂದ ಆಗಬೇಕೆಂದು ಒಕ್ಕೊರಲಿನ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಮಹಿಮಾ ಜೆ. ಪಟೇಲ್, ಶಿವನಕೆರೆ ಬಸವಲಿಂಗಪ್ಪ, ಎಸ್.ಎಲ್.ಪಾಟೀಲ್, ರವಿಕೃಷ್ಣ ರೆಡ್ಡಿ ಬೆಂಗಳೂರು, ಜಗದೀಶ್ ವಡ್ನಾಳ್, ಚನ್ನಗಿರಿ, ಕೆ.ಎಸ್.ಈಶ್ವರಪ್ಪ, ಜಗನ್ನಾಥ್ ಇತರರ ಒಕ್ಕೊರಲಿನಿಂದ ಸರ್ವೋದಯದ ಐದು ಕ್ಷೇತ್ರಗಳ ಪರಿವರ್ತನೆಗೆ ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
- - -
ಚನ್ನಗಿರಿ ತಾಲೂಕು ಪಾಂಡೋಮಟ್ಟಿಯಲ್ಲಿ ವಿವಿಧ ಮಠಾಧೀಶರ ಸಮ್ಮುಖ ಜನಜಾಗೃತಿ ಆಂದೋಲನ ಪೂರ್ವಭಾವಿ ಸಭೆ ನಡೆಯಿತು.