ದೊಡ್ಡಬಳ್ಳಾಪುರ: ಹಿಪ್ಪುನೇರಳೆಯಲ್ಲಿ ಪರಿಸರ ಸ್ನೇಹಿ ಕ್ರಮಗಳ ಮೂಲಕ ಕೀಟ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ ಗಂಗಸಂದ್ರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಹಾಯಕ ಮುಖ್ಯ ತಾಂತ್ರಿಕ ಅಧಿಕಾರಿ ಎನ್.ಜಗದೀಶ್ ಮಾತನಾಡಿ, ಸಾಲಿನಿಂದ ಸಾಲಿಗೆ 8 ಅಡಿ ಮತ್ತು ಗಿಡದಿಂದ ಗಿಡಕ್ಕೆ 2 ಅಡಿ ಜೋಡಿ ಸಾಲು ಪದ್ಧತಿಯಲ್ಲಿ ನಾಟಿ ಮಾಡಿರುವುದರಿಂದ ಗುಣಮಟ್ಟದ ಸೊಪ್ಪನ್ನು ಉತ್ಪಾದಿಸುವುದರ ಜೊತೆಗೆ ಗುಣ ಮಟ್ಟದ ರೇಷ್ಮೆ ಗೂಡಿನ ಇಳುವರಿಯನ್ನು ಪಡೆಯಲಾಗಿದೆಯೆಂದು ತಿಳಿಸಿದರು.
ರೇಷ್ಮೆ ಸಹಾಯಕ ನಿರ್ದೇಶಕ ಕೆ.ಟಿ.ಪ್ರಭಾಕರ್ ಮಾತನಾಡಿ, ಪ್ರಸ್ತುತ ಕೃಷಿ ಉತ್ಪನ್ನಗಳ ಮಾರಾಟದ ಬೆಲೆಗೆ ಹೋಲಿಸಿದರೆ ರೇಷ್ಮೆಗೆ ಹೆಚ್ಚು ಬೇಡಿಕೆ ಇರುವುದರಿಂದ ಹೆಚ್ಚಿನ ರೈತರು ಹಿಪ್ಪುನೇರಳೆ ಬೆಳೆಯಲು ಆಸಕ್ತಿಹೊಂದಿದ್ದಾರೆ ಎಂದು ತಿಳಿಸಿದರು.ಕೇಂದ್ರದ ಕೃಷಿ ವಿಸ್ತರಣಾ ವಿಜ್ಞಾನಿ ವೈ.ಎಂ.ಗೋಪಾಲ್ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ
ರೈತರಾದ ನಟರಾಜು, ರಾಧಾಕೃಷ್ಣ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆಯಂತೆ ಹಿಪ್ಪುನೇರಳೆಯಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಂಡಿರುವುದರಿಂದ ಥ್ರಿಪ್ಸ್ ಮತ್ತು ನುಸಿ ಕೀಟಗಳ ಬಾಧೆಯು ಹತೋಟಿಗೆ ಬಂದಿದ್ದು, ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪಿನ ಇಳುವರಿ ಪಡೆದಿದ್ದು ಗುಣಮಟ್ಟದ ರೇಷ್ಮೆ ಗೂಡಿನ ಇಳುವರಿ ಪಡೆಯಲು ಅನುಕೂಲವಾಯಿತು ಎಂದು ತಿಳಿಸಿದರು.
9ಕೆಡಿಬಿಪಿ2-