)
ಬೆಂಗಳೂರು: ಎರಡು ದಿನಗಳ ಅವಧಿಯಲ್ಲಿ ಮತ್ತೆ ನಾಲ್ವರು ಬ್ಯಾಂಕಾಂಕ್ ಪ್ರವಾಸಿಗರನ್ನು ಬಂಧಿಸಿ ₹1.73 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅ.7 ಮತ್ತು 8 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ 1.73 ಕೋಟಿ ರು ಬೆಲೆಯ 4.862 ಕೇಜಿ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅ.7 ರಂದು ಕೆಐಎಗೆ ಬ್ಯಾಕಾಂಕ್‌ನಿಂದ ಬಂದಿಳಿದ ಪೆಡ್ಲರ್ ಬಳಿ ₹32.55 ಲಕ್ಷ ಮೌಲ್ಯದ 930 ಗ್ರಾಂ, ಅದೇ ದಿನ ಮತ್ತೊಬ್ಬನಿಂದ ₹32.97 ಲಕ್ಷ ಮೌಲ್ಯದ 942 ಗ್ರಾಂ, ಅ.8 ರಂದು ₹69.23 ಲಕ್ಷ ಬೆಲೆಯ 1.978 ಕೇಜಿ ಹಾಗೂ ಬೇರೊಬ್ಬ ಪ್ರವಾಸಿಗನಿಂದ ₹39.20 ಲಕ್ಷ ಬೆಲೆಯ 1.12 ಕೇಜಿ ಸೇರಿದಂತೆ ಒಟ್ಟು 4.862 ಕೇಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ ಎಂದು ಕಸ್ಟಮ್ಸ್ ಹೇಳಿದೆ.