ಮಾವು, ಹಲಸು ಮಾತ್ರವಲ್ಲದೆ, ವಿವಿಧ ಬಗೆಯ ಹಣ್ಣುಗಳು, ಹಣ್ಣಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಹಣ್ಣಿನ ವೈವಿಧ್ಯಮಯ ಖಾದ್ಯಗಳು, ಇತರ ಖಾದ್ಯ ಮಳಿಗೆಗಳಿವೆ. ಮಾತ್ರವಲ್ಲದೆ ಬಟ್ಟೆಬರೆ, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಸಾಮಗ್ರಿಗಳು, ಉತ್ತರ ಕರ್ನಾಟಕದ ತಿನಿಸುಗಳೂ ಲಭ್ಯ.
ಕನ್ನಡಪ್ರಭ ವಾರ್ತೆ ಮಂಗಳೂರು
ಪಿಲಿಕುಳ ನಿಸರ್ಗಧಾಮ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ 2 ದಿನಗಳ ಹಣ್ಣುಗಳ ಮೇಳಕ್ಕೆ ಪಿಲಿಕುಳ ಅರ್ಬನ್ ಹಾತ್‌ನಲ್ಲಿ ಶನಿವಾರ ಚಾಲನೆ ನೀಡಲಾಗಿದೆ. ಮಾವು, ಹಲಸು ಮಾತ್ರವಲ್ಲದೆ, ವಿವಿಧ ಬಗೆಯ ಹಣ್ಣುಗಳು, ಹಣ್ಣಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಹಣ್ಣಿನ ವೈವಿಧ್ಯಮಯ ಖಾದ್ಯಗಳು, ಇತರ ಖಾದ್ಯ ಮಳಿಗೆಗಳಿವೆ. ಮಾತ್ರವಲ್ಲದೆ ಬಟ್ಟೆಬರೆ, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಸಾಮಗ್ರಿಗಳು, ಉತ್ತರ ಕರ್ನಾಟಕದ ತಿನಿಸುಗಳೂ ಲಭ್ಯ.ಉದ್ಯಮ ರೂಪದಲ್ಲಿ ಮನೆಯಲ್ಲೇ ಬೆಳೆಸಿದ ಅಣಬೆಗಳಿಂದ ವಿವಿಧ ರುಚಿಕರ ತಿಂಡಿ ಗ್ರಾಹಕರನ್ನು ಆಕರ್ಷಿಸಿತ್ತು. ಕಾರ್ಕಳದ ಕಲಾವತಿ ಅವರು ಈ ಮೇಳಕ್ಕೆಂದೇ ಉಪ್ಪಿನಕಾಯಿ ತಯಾರಿಸಿ ತಂದಿದ್ದು, ಅದರ ಜತೆ ಉಪ್ಪು ನೀರಲ್ಲಿ ಹಾಕಿದ ಹಲಸಿನ ತೊಳೆಯನ್ನೂ ಮಾರಾಟಕ್ಕೆ ತಂದಿದ್ದರು.ಶಾಸಕ ಉಮಾನಾಥ ಕೋಟ್ಯಾನ್ ಮೇಳವನ್ನು ಉದ್ಘಾಟಿಸಿದರು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಕುಮಾರ್ ಶೆಟ್ಟಿ, ಮೂಡುಶೆಡ್ಡೆ ಪಂಚಾಯ್ತಿ ಅಧ್ಯಕ್ಷ ಅನಿಲ್, ಜೈವಿಕ ಉದ್ಯಾನವನ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಪಿಲಿಕುಳ ಆಡಳಿತಾಧಿಕಾರಿ ಡಾ. ಅಶೋಕ್ ಕೆ.ಆರ್., ಜೈವಿಕ ಉದ್ಯಾನವನದ ಡಾ. ಅಶೋಕ್ ಕೆ.ಆರ್. ಮತ್ತಿತರರಿದ್ದರು.
----------ಇನ್ಮುಂದೆ ತಿಂಗಳಲ್ಲಿ 2 ದಿನ ಸಂತೆ
ಪಿಲಿಕುಳ ನಿಸರ್ಗಧಾಮದಲ್ಲಿರುವ ವಿವಿಧ ಮೂಲಸೌಕರ್ಯಗಳನ್ನು ಬಳಕೆ ಮಾಡಿಕೊಂಡು ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ತಿಂಗಳಲ್ಲಿ ಎರಡು ದಿನ ಸಂತೆ ಆಯೋಜಿಸುವ ಚಿಂತನೆ ಇದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ತಿಳಿಸಿದರು.
ಮಹಿಳಾ ಒಕ್ಕೂಟಗಳು, ಗೃಹೋದ್ಯಮಿಗಳ ಉತ್ಪನ್ನಗಳ ಮಾರಾಟ, ಸ್ಥಳೀಯವಾಗಿ ಬೆಳೆಯುವ ಹಣ್ಣು ತರಕಾರಿಗಳ ಮಾರಾಟಕ್ಕೆ ಈ ಸಂತೆಯಲ್ಲಿ ಅವಕಾಶ ಕಲ್ಪಿಸುವ ಉದ್ದೇಶವಿದೆ. ಪಿಲಿಕುಳಕ್ಕೆ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಸ್‌ಗಳ ಸಂಚಾರಕ್ಕೂ ಅವಕಾಶ ಕಲ್ಪಿಸುವಂತೆ ಕೋರಲಾಗಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.