ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನಜರಬಾದಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪೀಪಲ್ಸ್ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಅಥವಾ ಕಾಲು ಕಳೆದುಕೊಂಡವರಿಗೆ ಕೃತಕ ಕಾಲುಗಳ ಮರು ಜೋಡಣೆ ಹೇಗೆ ಎಂಬ ಕುರಿತು ತರಬೇತಿ ನೀಡಿ, ಅಗತ್ಯ ಉಳ್ಳವರಿಗೆ ವಿತರಿಸಲಾಯಿತು.
ಹಲವು ಮಂದಿ ಅಗತ್ಯವುಳ್ಳವರು ಈ ಕಾರ್ಯಕ್ರಮದ ಲಾಭ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ವಿಕಲಚೇತನರ ಕಲ್ಯಾಣಾಧಿಕಾರಿ ಶಂಕರಗೌಡ ಪಾಟೀಲ, ಪ್ರೀಡಂ ಟ್ರಸ್ಟ್‌ನ ಸಂಸ್ಥಾಪಕ ಡಾ.ಎಸ್. ಸುಂದರ್, ಅಪೆಕ್ಸ್ ಸದಸ್ಯೆ ಉಷಾ ಭಾರಧ್ವಾಜ್, ಸರಗೂರು ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಮೂಳೆ ಮತ್ತು ಕೀಲುರೋಗ ತಜ್ಞ ಡಾ.ಎಂ.ಆರ್. ಸೀತಾರಾಮ್ ಮೊದಲಾದರು ಪಾಲ್ಗೊಂಡಿದ್ದರು.