ಕಲ್ಯಾಣನಗರ ಮಾದರಿ ಬಡಾವಣೆಯಾಗಿಸುವ ಸಂಕಲ್ಪಕ್ಕೆ ಪೂರ್ಣ ಸಹಕಾರ : ಎಚ್.ಡಿ. ತಮ್ಮಯ್ಯ

KannadaprabhaNewsNetwork | Published : Jan 1, 2025 12:00 AM

ಸಾರಾಂಶ

ಚಿಕ್ಕಮಗಳೂರುನಗರದ ಬೈಪಾಸ್‌ ರಸ್ತೆಯಲ್ಲಿರುವ ಕಲ್ಯಾಣ ನಗರವನ್ನು ಒಂದು ಮಾದರಿ ಬಡಾವಣೆಯನ್ನಾಗಿ ಮಾಡುವ ಸಂಕಲ್ಪದೊಂದಿಗೆ ಅಸ್ಥಿತ್ವಕ್ಕೆ ಬಂದಿರುವ ಕಲ್ಯಾಣನಗರ ವೆಲ್‌ಫೇರ್ ಟ್ರಸ್ಟ್‌ನ ಎಲ್ಲಾ ರೀತಿಯ ಸೇವಾ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.

ಚಿಕ್ಕಮಗಳೂರಿನ ಕಲ್ಯಾಣ ನಗರ ವೆಲ್‌ಫೇರ್ ಸೊಸೈಟಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರದ ಬೈಪಾಸ್‌ ರಸ್ತೆಯಲ್ಲಿರುವ ಕಲ್ಯಾಣ ನಗರವನ್ನು ಒಂದು ಮಾದರಿ ಬಡಾವಣೆಯನ್ನಾಗಿ ಮಾಡುವ ಸಂಕಲ್ಪದೊಂದಿಗೆ ಅಸ್ಥಿತ್ವಕ್ಕೆ ಬಂದಿರುವ ಕಲ್ಯಾಣನಗರ ವೆಲ್‌ಫೇರ್ ಟ್ರಸ್ಟ್‌ನ ಎಲ್ಲಾ ರೀತಿಯ ಸೇವಾ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.

ಕಲ್ಯಾಣ ನಗರ ಬಡಾವಣೆಯಲ್ಲಿ ಕಲ್ಯಾಣ ನಗರ ವೆಲ್‌ಫೇರ್ ಸೊಸೈಟಿಯನ್ನು ಶ್ರೀ ವಿನಾಯಕ ದೇವಾಲಯದ ಮುಂಭಾಗ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನಾನು ಕೂಡ ಈ ಬಡಾವಣೆ ನಿವಾಸಿಯಾಗಿದ್ದು, ಬಡಾವಣೆ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ನೀಡುವ ಮೂಲಕ ಕಲ್ಯಾಣನಗರದ ಪರಿಪೂರ್ಣ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು. ಕಲ್ಯಾಣನಗರ ವೆಲ್‌ಫೇರ್ ಸೊಸೈಟಿ ಗೌರವ ಅಧ್ಯಕ್ಷರಾದ ಲೈಫ್‌ಲೈನ್ ಫೀಡ್ಸ್ ಸಂಸ್ಥೆ ಮಾಲೀಕ ಕಿಶೋರ್‌ಕುಮಾರ್ ಹೆಗ್ಡೆ ಮತ್ತು ಕಲ್ಯಾಣ ನಗರ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ಬಿ.ಎಸ್. ಹರೀಶ್ ಮತ್ತು ಅವರ ತಂಡದ ಹೆಗಲಿಗೆ ನೀಡುವುದಾಗಿ ಹೇಳಿದರು.ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಆಶಯಗಳೊಂದಿಗೆ ಬಡಾವಣೆ ಸರ್ವಾಂಗೀಯ ಅಭಿವೃದ್ಧಿಗೆ ಪಣ ತೊಟ್ಟಿರುವ ಕಲ್ಯಾಣನಗರ ವೆಲ್‌ಫೇರ್ ಸೊಸೈಟಿ ಮೂಲಕ ಬಡಾವಣೆ ಸಂಪೂರ್ಣ ಅಭಿವೃದ್ಧಿಗೆ ನಿವಾಸಿಗಳ ಸಹಭಾಗಿತ್ವ ಅಗತ್ಯ ಎಂದರು.ಕಲ್ಯಾಣನಗರ ವೆಲ್‌ಫೇರ್ ಸೊಸೈಟಿ ಗೌರವಾಧ್ಯಕ್ಷ ಕಿಶೋಕ್‌ ಕುಮಾರ್ ಹೆಗ್ಡೆ ಮಾತನಾಡಿ, ಕಲ್ಯಾಣನಗರ ಬಡಾವಣೆ ಅಭಿವೃದ್ಧಿ ದೃಷ್ಟಿಯಿಂದ ಅಸ್ಥಿತ್ವಕ್ಕೆ ಬಂದಿರುವ ಈ ಟ್ರಸ್ಟ್ ಮುಂದಿನ 3 ವರ್ಷಗಳಲ್ಲಿ ಚಿಕ್ಕಮಗಳೂರು ನಗರದಲ್ಲೇ ಒಂದು ಸುಂದರ ಬಡಾವಣೆಯನ್ನಾಗಿಸುವ ಉದ್ದೇಶ ತಮ್ಮದಾಗಿದೆ. ಈ ಕಾರ್ಯ ಯಶಸ್ವಿಯಾಗಲು ಸ್ಥಳೀಯ ನಿವಾಸಿಗಳ ಸಹಕಾರ ಬಹಳ ಮುಖ್ಯ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಬಿ.ಎಸ್. ಹರೀಶ್ ಮಾತನಾಡಿ, ಕೇವಲ ಮಾತು ಕೆಲಸವಾಗಬಾರದು. ಕೆಲಸ ಮಾತಾಗ ಬೇಕು ಎಂಬಂತೆ ಕಲ್ಯಾಣ ನಗರ ಬಡಾವಣೆ ಪರಿಪೂರ್ಣ ಅಭಿವೃದ್ಧಿ ದೃಷ್ಟಿಯನ್ನಿಟ್ಟುಕೊಂಡು ಇಂದು ಆರಂಭವಾಗಿರುವ ಕಲ್ಯಾಣ ನಗರ ವೆಲ್‌ ಫೇರ್ ಸೊಸೈಟಿಯಲ್ಲಿ ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡದೇ ಪಾರದರ್ಶಕ ಕಾರ್ಯನಿರ್ವಹಣೆಗೆ ಟ್ರಸ್ಟ್ ಬದ್ಧವಾಗಿದೆ. ಈ ವಿಚಾರದಲ್ಲಿ ಯಾವುದೇ ಸಂಶಯ ಬೇಡ ಎಂದರು.ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್, ಸಿಡಿಎ ಆಯುಕ್ತರಾದ ನಾಗರತ್ನ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಸ್ಥಳೀಯ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ನಗರಸಭೆ ಸದಸ್ಯರಾದ ಅರುಣ್‌ಕುಮಾರ್, ಇಂದಿರಾ, ಟ್ರಸ್ಟ್‌ನ ಉಪಾಧ್ಯಕ್ಷೆ ಉಮಾ ನಾಗೇಶ್, ಕಾರ್ಯದರ್ಶಿ ವೇಣುಗೋಪಾಲ್, ಶ್ರೀ ವಿನಾಯಕ ಕಲ್ಯಾಣನಗರ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಎಸ್.ಎನ್. ಪ್ರಸನ್ನಕುಮಾರ್, ಟ್ರಸ್ಟ್‌ನ ನಿರ್ದೇಶಕ ಷಡಕ್ಷರಿ, ಸುಧೀರ್‌ಕುಮಾರ್, ಖಜಾಂಚಿ ಲಿಂಗರಾಜು ಉಪಸ್ಥಿತರಿದ್ದರು 31 ಕೆಸಿಕೆಎಂ 1ಚಿಕ್ಕಮಗಳೂರಿನ ಕಲ್ಯಾಣ ನಗರ ಬಡಾವಣೆಯಲ್ಲಿ ಕಲ್ಯಾಣ ನಗರ ವೆಲ್‌ಫೇರ್ ಸೊಸೈಟಿಯನ್ನು ಶ್ರೀ ವಿನಾಯಕ ದೇವಾಲಯದ ಮುಂಭಾಗ ಶಾಸಕ ಎಚ್‌.ಡಿ. ತಮ್ಮಯ್ಯ ಗಿಡನೆಟ್ಟು ಉದ್ಘಾಟಿಸಿದರು. ಕಿಶೋರ್‌ಕುಮಾರ್‌ ಹೆಗ್ಡೆ, ಬಿ.ಎಚ್‌. ಹರೀಶ್‌, ಬಿ.ಸಿ. ಬಸವರಾಜ್‌, ನಾಗರತ್ನ, ದೀಪಕ್‌ ದೊಡ್ಡಯ್ಯ ಇದ್ದರು.

Share this article