ಸಹಕಾರ ರತ್ನ’ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಅಭಿನಂದನೆ

KannadaprabhaNewsNetwork |  
Published : Dec 24, 2023, 01:45 AM IST
 ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ  ಎಂಸಿಸಿ ಬ್ಯಾಂಕ್ ಲಿ. ನ ಅಧ್ಯಕ್ಷ ಅನಿಲ್ ಲೋಬೋ ಅವರ ಅಭಿನಂದನಾ ಸಮಾರಂಭ | Kannada Prabha

ಸಾರಾಂಶ

ಬಿ.ಸಿ. ರೋಡ್‌ನ ಲಯನ್ಸ್‌ ಸೇವಾ ಮಂದಿರದಲ್ಲಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂಸಿಸಿ ಬ್ಯಾಂಕ್ ಲಿ.ನ ಅಧ್ಯಕ್ಷ ಅನಿಲ್ ಲೋಬೋ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂಸಿಸಿ ಬ್ಯಾಂಕ್ ಲಿ.ನ ಅಧ್ಯಕ್ಷ ಅನಿಲ್ ಲೋಬೋ ಅಭಿನಂದನಾ ಸಮಾರಂಭ ಎಂಸಿಸಿ ಬ್ಯಾಂಕ್ ಲಿ. ಅಭಿಮಾನಿ ಬಳಗದ ವತಿಯಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಅಭಿನಂದನಾ ಭಾಷಣ ಮಾಡಿ, ಸಮಾಜದ ಒಳಿತಿಗಾಗಿ ಅಗತ್ಯತೆ ಇರುವವರಿಗೆ ಆರ್ಥಿಕ ಸಹಕಾರ ನೀಡುವ ಉದ್ದೇಶದಿಂದ ಸಹಕಾರ ಕ್ಷೇತ್ರ ಹುಟ್ಟಿಕೊಂಡಿದೆ. ಇದೇ ರೀತಿ ಮಂಗಳೂರು ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಆರಂಭಗೊಂಡು ಸಮಾಜ ಹಾಗೂ ಸಮುದಾಯದ ಅಭಿವೃದ್ದಿಯ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

ಅನಿಲ್‌ ಲೋಬೋ ಅವರು ಎರಡನೇ ಬಾರಿಗೆ ಚುನಾವಣೆ ಇಲ್ಲದೆ ಅ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಎಂಸಿಸಿ ಬ್ಯಾಂಕಿನ ಇತಿಹಾಸದಲ್ಲಿ ಪ್ರಥಮ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿಲ್ ಲೋಬೊ, ಗ್ರಾಹಕರೇ ದೇವರು ಎಂದು ಭಾವಿಸಿದಾಗ ಬ್ಯಾಂಕ್ ಬೆಳೆಯುತ್ತದೆ. ಪ್ರೋತ್ಸಾಹ ಇದ್ದಾಗ ಮಾತ್ರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಬೆಳೆಯಲು ಸಾಧ್ಯವಿದೆ ಎಂದರು.ಫರ್ಲಾ ವೆಲಂಕಣಿ ಚರ್ಚ್ ಧರ್ಮಗುರುಗಳಾದ ವಂ.ಜೋನ್ ಪ್ರಕಾಶ್ ಪಿರೇರಾ ಅಧ್ಯಕ್ಷತೆ ವಹಿಸಿ, ಅನಿಲ್ ಲೋಬೋ ಅವರ ಜೀವನದಲ್ಲಿ ಅನೇಕ ಅಡಡತಡೆಗಳು ಬಂದರೂ ಅವುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ ಎಂದರು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಅಧೀಕ್ಷಕ ಪ್ರವೀಣ್ ಬಿ. ನಾಯಕ್, ಬಿ. ಮೂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಉಪನ್ಯಾಸ ಅಬ್ದುಲ್ ರಝಾಕ್, ಗೌರವ ಅತಿಥಿಯಾಗಿ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಷನ್ ಡಿಸೋಜಾ, ಎಂಸಿಸಿ ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಕೆಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿ ಅಧ್ಯಕ್ಷೆ ಪ್ಲೇವಿ ಡಿಸೋಜಾ, ಎಂಸಿಸಿ ಬ್ಯಾಂಕ್ ನಿರ್ದೇಶಕ ವಿನ್ಸೆಂಟ್ ಲಸ್ರಾದೋ ಇದ್ದರು.ಸಂದೀಪ್ ಮಿನೇಜಸ್ ಸ್ವಾಗತಿಸಿದರು. ವಾಲ್ಟರ್ ನೋರೋನ್ಹ ವಂದಿಸಿದರು. ಸುನೀಲ್ ವೇಗಸ್ನಿ ರೂಪಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ