ಆಯುರ್ವೇದ ಜೀವನಶೈಲಿ ಕಲಿಸುವ ಮೂಲ ಜ್ಞಾನ

KannadaprabhaNewsNetwork |  
Published : Sep 28, 2026, 02:45 AM IST
(ಫೋಟೊಬಿಕೆಟಿ2, ನಗರದ ಇಂಡಿಯನ್ ಓವರ್ಸೀಸ್ ಬ್ಯಾಂಕ್ನಲ್ಲಿ ಬ್ಯಾಂಕ್ ಹಾಗೂ ಬಿವಿವಿ ಸಂಘದ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ 11ನೇ ರಾಷ್ಟ್ರೀಯ ಆಯುರ್ವೇದದ ದಿನ ಆಚರಿಸಲಾಯಿತು.) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಆಯುರ್ವೇದ ಪ್ರಾಚೀನ ಕಾಲದ ಜ್ಞಾನವಾಗಿದ್ದರೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಆಯುರ್ವೇದ ಕೇವಲ ರೋಗಗಳಿಗೆ ಮದ್ದು ನೀಡುವುದಷ್ಟೇ ಅಲ್ಲ, ಮನುಷ್ಯನಿಗೆ ಪರಿಪೂರ್ಣ ಜೀವನಶೈಲಿ ಕಲಿಸುವ ಅಮೂಲ್ಯ ಜ್ಞಾನವಾಗಿದೆ ಎಂದು ಬಿವಿವಿ ಸಂಘದ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾಚಾರ್ಯ ಡಾ.ಎಂ.ಎಸ್.ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಯುರ್ವೇದ ಪ್ರಾಚೀನ ಕಾಲದ ಜ್ಞಾನವಾಗಿದ್ದರೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಆಯುರ್ವೇದ ಕೇವಲ ರೋಗಗಳಿಗೆ ಮದ್ದು ನೀಡುವುದಷ್ಟೇ ಅಲ್ಲ, ಮನುಷ್ಯನಿಗೆ ಪರಿಪೂರ್ಣ ಜೀವನಶೈಲಿ ಕಲಿಸುವ ಅಮೂಲ್ಯ ಜ್ಞಾನವಾಗಿದೆ ಎಂದು ಬಿವಿವಿ ಸಂಘದ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾಚಾರ್ಯ ಡಾ.ಎಂ.ಎಸ್.ಹಿರೇಮಠ ಹೇಳಿದರು.ನಗರದ ಇಂಡಿಯನ್ ಓವರ್ಸೀಸ್ ಬ್ಯಾಂಕಿನಲ್ಲಿ ಬ್ಯಾಂಕ್ ಹಾಗೂ ಬಿವಿವಿ ಸಂಘದ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಮಾತನಾಡಿದರು.

ಇಂಡಿಯನ್ ಓವರ್ಸೀಸ್ ಬ್ಯಾಂಕ್ ವ್ಯವಸ್ಥಾಪಕ ವಿನಾಯಕ ತೋಟಗೇರ ಮಾತನಾಡಿ, ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದಕ್ಕೆ ಈ ಆಯುರ್ವೇದ ತುಂಬ ಅವಶ್ಯವಾಗಿದೆ ಎಂದರು.

ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾಧ್ಯಾಪಕರಾದ ಡಾ.ವಿ.ಎಸ್.ಹಿರೇಮಠ, ಡಾ.ಆರ್.ಐ. ಜಂಬಗಿ, ಡಾ.ಶಿವಾನಂದ ಮಜ್ಜಗಿ, ಡಾ.ಭಾರತಿ ಬೀಳಗಿ, ಡಾ.ಸುಹಾಸ ಮತ್ತೂರ, ಸಂಗಮೇಶ ಇಜಾರದಾರ, ಬ್ಯಾಂಕಿನ ಸಿಬ್ಬಂದಿ ಸಹಾಯಕ ವ್ಯವಸ್ಥಾಪಕ ಜಶವಂತ ರಡ್ಡಿ, ಎಸ್ಎನ್ಎಂಸಿ ಶಾಖೆಯ ವ್ಯವಸ್ಥಾಪಕ ಅಜೀತ್ ಮಡ್ಡಿಮನಿ, ಗ್ರಾಹಕರ ಸೇವಾ ಸಹಾಯಕಿಯರಾದ ಶ್ವೇತಾ ಜಿನಗಾರ, ವೈಷ್ಣವಿ ಜೋಶಿ, ಗೋಪಾಲ ಚೌಡಕಿ ಹಾಗೂ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ವೀರೇಶ ಸೇರಿ ಇತರರಿದ್ದರು. ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪ್ರಯೋಗಗಳ ಮೂಲಕ ಆಯುರ್ವೇದ ಔಷಧಗಳ ಗುಣಮಟ್ಟ ಸಾಬೀತುಪಡಿಸಲಾಗುತ್ತಿದೆ. ಇಂದಿನ ಧಾವಂತದ ಬದುಕಿನಲ್ಲಿ ನಾವು ಎದುರಿಸುತ್ತಿರುವ ವಿವಿಧ ರೀತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸವಾಲುಗಳಿಗೆ ನೈಸರ್ಗಿಕ ಪರಿಹಾರ ಒದಗಿಸುವಲ್ಲಿ ಆಯುರ್ವೇದದ ಪಾತ್ರ ದುಡ್ಡದಾಗಿದ್ದರಿಂದಲೇ ಪ್ರತಿವರ್ಷ ಸೆ.23ರ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಆಚರಿಸಲಾಗುತ್ತಿದೆ.

- ಡಾ.ಎಂ.ಎಸ್.ಹಿರೇಮಠ, ಪ್ರಾಚಾರ್ಯ, ಬಿವಿವಿ ಸಂಘದ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು: ಡಾ. ವೈದ್ಯ
ಕೆಜಿಬಿವಿ ಶಾಲೆ ಶೈಕ್ಷಣಿಕ, ಸ್ವಚ್ಛತಾ ವ್ಯವಸ್ಥೆಗೆ ಅಧಿಕಾರಿಗಳ ಮೆಚ್ಚುಗೆ