ಗುಡ್ಡ ಕುಸಿತದಲ್ಲಿ ಸಾವಿಗೀಡಾದ ಅಜ್ಜಿ, ಮೊಮ್ಮಕ್ಕಳ ಅಂತ್ಯಕ್ರಿಯೆ

KannadaprabhaNewsNetwork |  
Published : Jun 01, 2025, 03:44 AM IST
ಗುಡ್ಡ ಕುಸಿತದಲ್ಲಿ ಸಾವಿಗೀಡಾದ ಅಜ್ಜಿ, ಮೊಮ್ಮಕ್ಕಳ ಅಂತ್ಯಕ್ರಿಯೆಯಲ್ಲಿ ರವಿಕುಮಾರ್‌ ಭಾಗವಹಿಸಿದ್ದರು. | Kannada Prabha

ಸಾರಾಂಶ

ಮೃತದೇಹವನ್ನು ಬೆಳಗ್ಗೆ 10.00 ಗಂಟೆಗೆ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಿಂದ ಸಾವಿಗೀಡಾದ ಪ್ರೇಮಾ ಕಾಂತಪ್ಪ ಪೂಜಾರಿ ಅವರ ಮನೆಯ ಸಮೀಪದ ಸಂಬಂಧಿಕರ ಮನೆಗೆ ತಂದು ಸಾರ್ವಜನಿಕ ಸಮ್ಮುಖದಲ್ಲಿ ಅಂತಿಮ ವಿಧಿ ಪೂರೈಸಲಾಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಮಂಜನಾಡಿ ಪಂಬದಹಿತ್ತಿಲು ಕೊಪ್ಪಲದ ತೋಟದ ಮನೆಯಲ್ಲಿ ಎತ್ತರದ ಗುಡ್ಡ, ಬೃಹತ್ ಮಾವಿನ ಮರದ ಜೊತೆಗೆ ಕುಸಿದು ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳ ಅಂತ್ಯ ಸಂಸ್ಕಾರ ಶನಿವಾರ ನಡೆಯಿತು.

ಮೃತದೇಹವನ್ನು ಬೆಳಗ್ಗೆ 10.00 ಗಂಟೆಗೆ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಿಂದ ಸಾವಿಗೀಡಾದ ಪ್ರೇಮಾ ಕಾಂತಪ್ಪ ಪೂಜಾರಿ ಅವರ ಮನೆಯ ಸಮೀಪದ ಸಂಬಂಧಿಕರ ಮನೆಗೆ ತಂದು ಸಾರ್ವಜನಿಕ ಸಮ್ಮುಖದಲ್ಲಿ ಅಂತಿಮ ವಿಧಿ ಪೂರೈಸಲಾಯಿತು.

ಗಣ್ಯರು, ಸಂಬಂಧಿಕರು ಸೇರಿದಂತೆ ಸರ್ವ ಧರ್ಮೀಯರು ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಪಕ್ಕದ ಗುಡ್ಡದಲ್ಲಿ ಅಜ್ಜಿಯ ದಹನ ಹಾಗೂ ಆರ್ಯನ್, ಆರುಷ್ ದಫನ ಮಾಡಲಾಯಿತು.ಸಚಿವ ದಿನೇಶ್ ಗುಂಡೂರಾವ್, ಈ ಕುಟುಂಬದ ಸಾವನ್ನಪ್ಪಿದವರಿಗೆ ತಲಾ ಐದು ಲಕ್ಷ ರು. ಚೆಕ್ ವಿತರಿಸಿದ್ದು, ಅದಾಗಲೇ 7.5 ಲಕ್ಷ ರು. ಕಾಂತಪ್ಪ ಪೂಜಾರಿ ಅವರ ಖಾತೆಗೆ ಜಮಾ ಆಗಿದೆ.ಕಾಲು ಕಳೆದುಕೊಂಡ ಅಶ್ವಿನಿಗೆ ಸರ್ಕಾರಿ ಉದ್ಯೋಗ ನೀಡಬೇಕು: ಎನ್.ರವಿ ಕುಮಾರ್ಮಳೆ ದುರಂತದಿಂದ ಎರಡೂ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಅವರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ಜಿಲ್ಲೆಯ ಗುಡ್ಡವಾರು ಪ್ರದೇಶಗಳಲ್ಲಿ ಅಪಾಯವನ್ನು ಸೂಚಿಸುವ ಮನೆಗಳನ್ನು ತಕ್ಷಣಕ್ಕೆ ಸ್ಥಳಾಂತರಗೊಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ, ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿ ಕುಮಾರ್ ಹೇಳಿದರು.ಮೊಂಟೆಪದವು ಪಂಬದಹಿತ್ತಿಲು ಕೋಡಿ ಕೊಪ್ಪಲದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಾವನ್ನಪ್ಪಿದ ಅಜ್ಜಿ ಹಾಗೂ ಮೊಮ್ಮಕ್ಕಳಿಬ್ಬರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿ, ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ವಿನಿ, ಮಾವ ಕಾಂತಪ್ಪ ಪೂಜಾರಿ ಅವರ ಆರೋಗ್ಯ ವಿಚಾರಣೆ ನಡೆಸಿ ಬಳಿಕ ಮಾತನಾಡಿದರು.ತಹಸೀಲ್ದಾರ್ ಪುಟ್ಟರಾಜು, ಸರ್ಕಾರಿ ಅಧಿಕಾರಿಗಳು, ಬಿಜೆಪಿ ಹಿರಿಯ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೈತ್ತಬೈಲ್,ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಉಪಾಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಸುಮನಾ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ತೊಕ್ಕೊಟ್ಟು, ಕಾರ್ಯದರ್ಶಿ ರಮೇಶ್ ಬೆದ್ರೋಳಿಕೆ, ಸುಮಲತಾ ಕೊಣಾಜೆ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಮುರಳೀಧರ ಕೊಣಾಜೆ, ಮಂಡಲ ರೈತ ಮೋರ್ಚಾ ಅಧ್ಯಕ್ಷ ಪದ್ಮನಾಭ ಗಟ್ಟಿ, ಮುನ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಪೂಜಾರಿ, ಜೀವನ್ ಕುಮಾರ್ ತೊಕ್ಕೊಟ್ಟು, ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಂಚಾಲಕ ಪ್ರಹ್ಲಾದ್ ಕುಮಾರ್ ಇಂದಾಜೆ ಜೊತೆಗಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ