ಕನ್ನಡಪ್ರಭ ವಾರ್ತೆ ಶಿರಸಿ
ನಗರದ ಯೋಗ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿದರು. ಬೆಳಗ್ಗೆ 6.30ರಿಂದ ರಾತ್ರಿ 9ರವರೆಗೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ವೈದಿಕರು ಹಾಗೂ ಶಿಕ್ಷಕರಿಂದ ಗಾಯತ್ರಿ ಅನುಷ್ಠಾನ, ಹವನ ನಡೆಯಲಿದೆ. ಶಿಕ್ಷಕಿಯರಿಂದ ಕುಂಕುಮಾರ್ಚನೆ ನಡೆಯಲಿದೆ. ಬೆಳಗ್ಗೆ 10 ಕ್ಕೆ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸುವರು. ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಮಹಾಸಭಾ ಉಪಾಧ್ಯಕ್ಷ ಶ್ರೀಧರ ಭಟ್ಟ ಭಾಗವಹಿಸುವರು. 10.45ಕ್ಕೆ ಸುಧಾ ಶರ್ಮಾ ಸಂಸ್ಕಾರಗಳ ಪ್ರಸ್ತುತತೆ, ಸಂಧ್ಯಾವಂದನೆ ಕುರಿತು ಡಾ. ರಾಮಕೃಷ್ಣ ಭಟ್ಟ ಕೆ. ಮಾತನಾಡುವರು. 12.15ಕ್ಕೆ ತುಳಸಿ ಹೆಗಡೆ ಅವಳಿಂದ ಯಕ್ಷ ರೂಪಕ ಪ್ರಸ್ತುತವಾಗಲಿದೆ. ಬಳಿಕ ಮಾತಿನ ಮಂಟಪ ನಡೆಯಲಿದ್ದು ಆಧುನಿಕ ಬದುಕಿಗೆ ಸಂಸ್ಕಾರದ ತಳಹದಿ ಕುರಿತು ವಿ.ಉಮಾಕಾಂತ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಕಿಯರಿಂದ ಜಾನಪದ ನರ್ತನ ನಡೆಯಲಿದೆ ಎಂದರು.
ಮಧ್ಯಾಹ್ನ 2.30ಕ್ಕೆ ಹವ್ಯಕ ಆಚಾರ ವಿಚಾರ ಕುರಿತು ನೀರ್ಗಾನು ವಿಶ್ವನಾಥ ಭಟ್ಟ ಅಧ್ಯಕ್ಷತೆಯಲ್ಲಿ ಗೋಷ್ಟಿ ನಡೆಯಲಿದೆ. 3.30ರಿಂದ ಸನಾತನ ಸಂಸ್ಕಾರ ಕುರಿತು ವಾಗ್ಮಿ ಡಾ. ಆರತಿ ಬಿ.ವಿ. ಮಾತನಾಡಲಿದ್ದಾರೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ, ಶ್ರೀಮನ್ನೆಲೆಮಾವು ಮಠದ ಶ್ರೀಮಾಧವಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ನೀಡುವರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಪ್ರಭದ ಸಂಪಾದಕ ರವಿ ಹೆಗಡೆ, ಮಹಾಸಭೆ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಭಾಗವಹಿಸುವರು. ಬಳಿಕ ಬಡಗುತಿಟ್ಟಿನ ಕಲಾವಿದರಿಂದ ಯಕ್ಷಗಾನ ನಡೆಯಲಿದೆ ಎಂದರು.ವೇದಮೂರ್ತಿಗಳಾದ ಕಿಬ್ಬಳ್ಳಿ ಗಣಪತಿ ಭಟ್ಟ, ಸೂರ್ಯನಾರಾಯಣ ಭಟ್ಟ ನೆಲೆಮಾವು, ನಾರಾಯಣ ಭಟ್ಟ ಮೊಟ್ಟೆಗದ್ದೆ, ಮಂಜುನಾಥ ಭಟ್ಟ ಕಲ್ಲಾಳ, ರಾಮಕೃಷ್ಣ ಭಟ್ಟ ಕೆಳಗಿನಪಾಲು, ತಿಮ್ಮಪ್ಪ ಭಟ್ಟ ಸಾರಂಗ, ಶಿಕ್ಷಕರಾದ ಕೆ.ವಿ.ಭಟ್ಟ, ಗೌರಿ ಹೆಗಡೆ ಹುತಗಾರ, ಸೀತಾ ಭಟ್ಟ, ನಾರಾಯಣ ಭಟ್ಟ ಯಲ್ಲಾಪುರ, ಮಹಾಲಕ್ಷ್ಮಿ ಹೆಗಡೆ ಉಮ್ಮಚಗಿ, ಜನಾರ್ಧನ ಹೆಗಡೆ ಜೋಯಿಡಾ, ಮಂಜುನಾಥ ಯಾಜಿ, ಮಾಯಾ ಭಟ್ಟ ಸಿದ್ದಾಪುರ, ಜಿ.ಆರ್.ಭಾಗವತ್ ತ್ಯಾರಗಲ್ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಈ ವೇಳೆ ಮಹಾಸಭಾ ನಿರ್ದೇಶಕರಾದ ಪ್ರಶಾಂತ ಹೆಗಡೆ ಯಲ್ಲಾಪುರ, ಜಿ.ಎಂ. ಭಟ್ಟ ಕಾಜಿನಮನೆ, ಪ್ರಮುಖರಾದ ವಿ.ಎಂ. ಹೆಗಡೆ, ಡಿ.ಪಿ. ಹೆಗಡೆ, ರಾಮಚಂದ್ರ ಭಟ್ಟ ಶಿರಳಗಿ ಮತ್ತಿತರರು ಇದ್ದರು.