ಕನ್ನಡಪ್ರಭ ವಾರ್ತೆ ಜಮಖಂಡಿ
ಎಸಿ ಕಚೇರಿಯ 3 ಕಟ್ಟಿಗೆ ಬಾಕ್, 6 ಕುರ್ಚಿ, ಸಾರ್ವಜನಿಕರು ಕೂಡುವ ಕಬ್ಬಿಣದ 4 ಕುರ್ಚಿ, ಒಂದು ಜೆರಾಕ್ಸ್ ಮಷೀನ್, ಒಂದು ಪ್ರಿಂಟರ್ ವಿಥ್ ಜೆರಾಕ್ಸ್ ಮಷಿನ್, 2 ಸಿಪಿಯು, 3 ಮಾನಿಟರ್ ಮುಂತಾದ ವಸ್ತುಗಳನ್ನು ಜಪ್ತಿ ಮಾಡಿದರು.
ಈ ವೇಳೆ ರೈತ ಈರಣ್ಣ ಯಂಕಚ್ಚಿ ಅವರು ಮಾತನಾಡಿ, ಪರಿಹಾರದ ಹಣ ಸಾಕಾಗುವುದಿಲ್ಲ ಎಂದು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ನ್ಯಾಯಾಲಯ ಎಸಿ ಕಚೇರಿಯ ಪೀಠೋಪಕರಣ ಜಪ್ತಿಗೆ ಆದೇಶ ಮಾಡಿತ್ತು. ಆದರೆ ಉಪವಿಭಾಗಾಧಿಕರು ನ್ಯಾಯಾಲಯದ ಆದೇಶ ಲೆಕ್ಕಿಸದೆ ಕಚೇರಿಯ ಕಾರ್ಯಾಲಯಕ್ಕೆ ಬೀಗ ಜಡಿದು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.ನ್ಯಾಯಾಲಯದಿಂದ ಹೆಚ್ಚುವರಿ ಪರಿಹಾತ ನೀಡಲು ಆದೇಶವಾಗಿದೆ. ಹಿರಿಯ ಅಧಿಕಾರಿಗಳು ಹೈಕೋರ್ಟ್‌ನಲ್ಲಿ ಅಪೀಲು ಮಾಡಲು ಅವಕಾಶ ನೀಡಿದೆ. ಹೈಕೊರ್ಟಗೆ ಮೇಲ್ಮನವಿ ಸಲ್ಲಿಸಲಾಗಿದೆ. ಇನ್ನೂ ಪ್ರಕರಣ ಇತ್ಯರ್ಥವಾಗಿಲ್ಲ. ನಮ್ಮ ಇಲಾಖೆಯಿಂದ ರೈತರಿಗೆ ಅನುಕೂಲ ಆಗುವ ಕೆಲಸ ಮಾಡುತ್ತೇವೆ. ಕಚೇರಿಯ ಕಾರ್ಯಕ್ಕೆ ತೊಂದರೆ ಆಗದಂತೆ ಕ್ರಮ ಜರುಗಿಸಲು ಮನವಿ ಮಾಡಿದ್ದು, ಆ ಹಿನ್ನೆಲೆಯಲ್ಲಿ ಕೆಲ ಕೋಣೆಯ ಬಾಗಿಲುಗಳಿಗೆ ಬೀಗ ಹಾಕಲಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸ್ಪಷ್ಟೀಕರಣ ನೀಡಿದ್ದಾರೆ.