ಧಾರವಾಡ:
ಕರ್ನಾಟಕ ವಿಶ್ವವಿದ್ಯಾಲಯದ ಪಾವಟೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್ ವಿವಿಧ ವಿಭಾಗಗಳ ಜತೆಗೂಡಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರೊ. ಎಚ್.ಬಿ. ವಾಲಿಕಾರ ಅವರ 75ನೇ ಜನ್ಮದಿನೋತ್ಸವದಲ್ಲಿ ''''''''ಗಣಿತ ಶಾಸ್ತ್ರೀಯ ವಿಜ್ಞಾನಗಳು ಮತ್ತು ಅದರ ಅನ್ವಯಿಕೆಗಳು'''''''' ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಗಣಿತಶಾಸ್ತ್ರದಲ್ಲಿ ಅನೇಕ ಹೊಸ ರೀತಿಯ ಬೆಳವಣಿಗೆಯಾಗಿವೆ ಎಂದರು.
ಕವಿವಿ ವಿಶ್ರಾಂತ ಕುಲಪತಿ ಪ್ರೊ. ಎಚ್.ಬಿ. ವಾಲಿಕಾರ ಮಾತನಾಡಿ, ಗಣಿತ ಒಂದು ಸರಳ ವಿಷಯ. ನನ್ನ ಉಸಿರು ಇರುವ ವರಗೆ ಗಣಿತ ಕಲಿಯುತ್ತೇನೆ ಮತ್ತು ಕಲಿಸುತ್ತೇನೆ ಹಾಗೂ ಗಣಿತ ಸಂಬಂಧಿಸಿದ ವಿಷಯಗಳ ಬೆಳವಣಿಗೆ ಶ್ರಮಿಸುತ್ತನೆ ಎಂದು ಹೇಳಿದರು.ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ಪ್ರೊ. ವಾಲಿಕಾರ ಅವರೊಬ್ಬ ಶ್ರೇಷ್ಠ ಗಣಿತ ತಜ್ಞರು. ಅನೇಕ ಆಡಳಿತಾತ್ಮಕ ಸುಧಾರಣೆಗಳ ಮೂಲಕ ಕವಿವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. ಇದೇ ವೇಳೆ ಸಂಶೋಧನಾ ಲೇಖನಗಳ ಸಂಗ್ರಹದ ಸಂಶೋಧನಾ ನಿಯತಕಾಲಿಕೆ ಬಿಡುಗಡೆ ಮಾಡಲಾಯಿತು. 60 ತಾಂತ್ರಿಕ ಗೋಷ್ಠಿಗಳು ಜರುಗಿದವು. 200ಕ್ಕಿಂತ ಹೆಚ್ಚು ಸಂಶೋಧಕರು ಪ್ರಬಂಧ ಮಂಡಿಸಿದರು.