ಕನ್ನಡಪ್ರಭ ವಾರ್ತೆ ಗದಗ
ಸ್ಥಳೀಯ ಎಂ.ಜಿ.ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಮೂತ್ರಶಾಸ್ತ್ರ ಸಂಘ ಹಾಗೂ ಗದಗ ಕಸಿ ಮತ್ತು ಮೂತ್ರಜನಕಾಂಗ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕುವಾಕಾನ್-2026 ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕಳೆದ ಎರಡು ವರ್ಷಗಳಲ್ಲಿ ಗದಗದಲ್ಲಿ ಸಿ.ಜಿ.ಪಿ ಸಮ್ಮೇಳನ, ವೈದ್ಯ-ಕಾನೂನು ಸಮ್ಮೇಳನ, ಚರ್ಮರೋಗ ಸಮ್ಮೇಳನ, ಸ್ತ್ರೀರೋಗ ಸಮ್ಮೇಳನ ನಡೆದಿವೆ. ಈಗ ಮೂತ್ರಶಾಸ್ತ್ರ ಸಮ್ಮೇಳನ ನಡೆಯುತ್ತಿದೆ. ಗದಗ ಇಂದು ರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು ನಡೆಸುವಷ್ಟು ಬೆಳೆದಿದೆ. ಇದು ಗದಗದ ವೈದ್ಯ ಪರಂಪರೆ ಅಜ್ಜನ ಕಾಲದಿಂದಲೂ ಎಷ್ಟು ದೂರದೃಷ್ಟಿ ಮತ್ತು ನಾಯಕತ್ವ ಗುಣ ಹೊಂದಿತ್ತು ಎಂಬುದನ್ನು ತೋರಿಸುತ್ತದೆ ಎಂದರು.ಮೂತ್ರಪಿಂಡ ಕಸಿ ಎಂಬುದು 20 ವರ್ಷಗಳ ಹಿಂದೆ ಬಡವರಿಗೆ, ಗ್ರಾಮೀಣ ಜನರಿಗೆ ಕನಸು ಮಾತ್ರವಾಗಿತ್ತು. ಮೂತ್ರಪಿಂಡ ವಿಫಲವಾಯಿತು ಎಂದರೆ ಜೀವನ ಮುಗಿಯಿತು ಎಂದು ಲೆಕ್ಕಾಚಾರವಿತ್ತು. ಮೂತ್ರಪಿಂಡ ಕಸಿ ಇನ್ನು ಕನಸಲ್ಲ, ಗ್ರಾಮೀಣರಿಗೂ ವರವಾಗಿದೆ. ಡಯಾಲಿಸಿಸ್ ಯಂತ್ರ ತರುವುದಕ್ಕೇ ಒಂದು ಕಾಲದಲ್ಲಿ ದೊಡ್ಡ ಹೋರಾಟ, ರಾಜಕೀಯ ನಾಯಕರು, ಸರ್ಕಾರ, ವೈದ್ಯರು ಎಲ್ಲರೂ ಕೈಜೋಡಿಸಬೇಕಿತ್ತು. ಯಂತ್ರ ಸಿಕ್ಕರೂ ತಾಂತ್ರಿಕ ಜನರು, ಮಾನವ ಸಂಪನ್ಮೂಲ ಸಿಗುತ್ತಿರಲಿಲ್ಲ. ಆದರೆ ಇಂದು ಗದಗದಂತಹ ಗ್ರಾಮೀಣ ಪ್ರದೇಶದಲ್ಲೇ ಸುಮಾರು 30 ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂಬುದು ಹೆಮ್ಮೆಯ ಸಂಗತಿ ಎಂದರು.
ಕುಡಿಯುವ ಗುಣಮಟ್ಟದ ನೀರು ಹಳ್ಳಿಯ ಕೊನೆಯ ವ್ಯಕ್ತಿಗೂ ಸಿಗಬೇಕು ಎಂಬುದು ನಮ್ಮ ಗುರಿ, ಘೋಷಣೆ ಮತ್ತು ಕಾರ್ಯಯೋಜನೆಯಾಗಿತ್ತು. ಶುದ್ಧ ನೀರು ಮೂತ್ರಶಾಸ್ತ್ರ ಸಂಬಂಧಿ ರೋಗಗಳಿಗಷ್ಟೇ ಅಲ್ಲ, ಒಟ್ಟಾರೆ ಆರೋಗ್ಯ ಮತ್ತು ನೀರಿನಿಂದ ಹರಡುವ ರೋಗಗಳಿಗೆ ರಾಮಬಾಣ ಎಂದರು.
ಡಾ. ಶಾಂತನು ಭಟ್ಟಾಚಾರ್ಯ, ಡಾ. ಎಸ್.ಐ. ನೀಲಿ, ಡಾ. ಭರತ್ ಭೂಷಣ್, ಡಾ. ನಾಗನೂರ, ಡಾ. ಬಸವರಾಜ ಎಂ. ಆಲೂರ ಡಾ.ಭೂಸರಡ್ಡಿ, ಡಾ. ಪ್ರವೀಣ ಡಂಬಳ, ಡಾ. ಪವನಕುಮಾರ ಕೋಳಿವಾಡ ಸೇರಿದಂತೆ ವೈದ್ಯರು ಇದ್ದರು. ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಶರಣ್ ಆಲೂರ ಸ್ವಾಗತಿಸಿದರು. ಡಾ. ವೀನಿ ಚಾವ್ಲಾ ಹಾಗೂ ಡಾ. ಅರವಿಂದ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಅವಿನಾಶ ಓದುಗೌಡರ ವಂದಿಸಿದರು.