ಕನ್ನಡಪ್ರಭ ವಾರ್ತೆ ರೋಣ
ಶುಕ್ರವಾರ ಪಟ್ಟಣದ ಹಿರೇಮಠದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಗುರುಕುಲ ಪ್ರಾರಂಭೋತ್ಸವ ಹಾಗೂ ಲಿಂ.ಶ್ರೀ ವಿರೂಪಾಕ್ಷಯ್ಯ ಅಜ್ಜನವರ 20ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮಾಸಭೆ, ಜಂಗಮ ವಟುಗಳಿಗ ಉಚಿತ ಅಯ್ಯಾಚಾರ, ಭಕ್ತ ಜನತೆಗ ದೀಕ್ಷಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೀರಶೈವ ಧರ್ಮದ ಶ್ರೇಷ್ಠ ಗುರು ಪರಂಪರೆ ಆಯಾ ಕಾಲ ಘಟ್ಟಗಳಲ್ಲಿ ಬೆಳೆದುಕೊಂಡು ಬಂದಿವೆ. ಇಂದು ಪ್ರಾರಂಭಗೊಂಡ ಶ್ರೀ ಜಗದ್ಗುರು ಪಂಚಾಚಾರ್ಯ ಗುರುಕುಲ ಜ್ಞಾನ ಮತ್ತು ಸಂಸ್ಕಾರ ಕೊಡುವ ಕೇಂದ್ರವಾಗಿ ಬೆಳೆಯಲಿ. ಗುರು ಎಂದರೆ ಕೇವಲ ಅಕ್ಷರ ಬೋಧಿಸುವವನು ಅಲ್ಲ. ಜ್ಞಾನ, ಸಂಸ್ಕಾರ, ಸೇವೆ, ಸತ್ಯ ನಿಷ್ಠೆಯ ಮೂಲಕ ಸಮಾಜಕ್ಕೆ ದಾರಿ ತೋರಿಸುವ ದೀಪ. ಈ ಗುರುಕುಲ ವೀರಶೈವ ಧರ್ಮದ ಭವಿಷ್ಯಕ್ಕೆ ಭದ್ರವಾದ ಅಡಿಪಾಯ ಹಾಕಲಿ. ವಿದ್ಯೆಯೊಂದಿಗೆ ವಿನಯ, ವಚನದೊಂದಿಗೆ ಆಚರಣೆ, ಜ್ಞಾನದೊಂದಿಗೆ ಸೇವೆ, ಧರ್ಮದೊಂದಿಗೆ ಮಾನವೀಯತೆ ಬೆಳೆದು ಸಮಾಜಕ್ಕೆ ಬೆಳಕು ತೋರಲಿ. ಧರ್ಮ ನಿಷ್ಠೆಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಶಾಸ್ತç ಜ್ಞಾನವನ್ನು ಜೀವನ ಮೌಲ್ಯಗಳನ್ನು ಸಮನ್ವಯಗೊಳಿಸುವ ಕಾರ್ಯವನ್ನು ಗುರುಕುಲ ಮಾಡುವ ಸಂಕಲ್ಪ ಕೈಗೊಳ್ಳಲಿ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ತತ್ವ ಸಿದ್ಧಾಂತಗಳನ್ನು ಸಾಧಕರಿಗೆ ಬೋಧಿಸಿ ಜ್ಞಾನವಂತರನ್ನಾಗಿ ಮಾಡುವ ಸಂಕಲ್ಪ ಕೈಕೊಂಡು ಕಾರ್ಯ ಮಾಡಲಿ. ಈ ದಿಸೆಯಲ್ಲಿ ಹಿರೇಮಠದ ಜಗದೀಶ್ವರಸ್ವಾಮಿ ಅವರ ಕಾರ್ಯ ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.ಧರ್ಮಸಭೆ ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ಪ್ರಾಚೀನ ಗುರು ಪರಂಪರೆಯ ಮೌಲ್ಯಗಳನ್ನು ಆಧುನಿಕ ಕಾಲದ ಅಗತ್ಯಗಳೊಂದಿಗೆ ಸಮನ್ವಯಗೊಳಿಸುವ ಕಾರ್ಯವನ್ನು ಈ ಗುರುಕುಲ ಮಾಡಲಿ. ಇಲ್ಲಿಂದ ಹೊರಹೊಮ್ಮುವ ವಟುಗಳು ಸಮಾಜಕ್ಕೆ ಜ್ಞಾನದ ಬೆಳಕು ತೋರಲಿ. ಧರ್ಮಜ್ಯೋತಿ ನಿರಂತರವಾಗಿ ಬೆಳೆಯಲೆಂದು ಆಶಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಹಿರೇಮಠದ ಜಗದೀಶ್ವರಸ್ವಾಮಿ ಮಾತನಾಡಿದರು.
ಮಲಕಸಮುದ್ರಮಠದ ಶೇಖರಯ್ಯ ಶಾಸ್ತ್ರೀಗಳು ಪ್ರಾಸ್ತಾವಿಕ ಮಾತಮಾಡಿದರು.