ದಸರಾ ನಂತರ ಹು-ಧಾ ಪಾಲಿಕೆ ಕಚೇರಿ ಮುಂದೆ ಧರಣಿ: ಸೊಬರದಮಠ

KannadaprabhaNewsNetwork |  
Published : Oct 04, 2026, 02:15 AM IST
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಮಲಪ್ರಭಾ ಜಲಾಶಯದ ನೀರನ್ನು ಕೃಷಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಆದರೆ ಹುಬ್ಬಳ್ಳಿ-ಧಾರವಾಡದ ಪಾಲಿಕೆಯವರು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ನರಗುಂದ

ಮಲಪ್ರಭಾ ಜಲಾಶಯದ ನೀರನ್ನು ಕೃಷಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಆದರೆ ಹುಬ್ಬಳ್ಳಿ-ಧಾರವಾಡದ ಪಾಲಿಕೆಯವರು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ದಸರಾ ನಂತರ ಪಾಲಿಕೆ ಮುಂದೆ ಧರಣಿ ಪ್ರಾರಂಭ ಮಾಡಲಾಗುವುದು ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಹೇಳಿದರು.

ಶನಿವಾರ ಪಟ್ಟಣದ ಮಹದಾಯಿ ಹೋರಾಟ ವೇದಿಕೆಯಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ತಹಸೀಲ್ದಾರಗೆ ಮನವಿ ಸಲ್ಲಿಸಿ ನಂತರ ಮಾತನಾಡಿದರು.

ಮಲಪ್ರಭಾ ಜಲಾಶಯ ನೀರನ್ನು ಅಚ್ಚುಕಟ್ಟು ಪ್ರದೇಶದ 2 ಲಕ್ಷದ 25 ಸಾವಿರ ಹೆಕ್ಟೇರ್‌ ಪ್ರದೇಶದ ನೀರಾವರಿ ಜಮೀನನುಗಳಿಗೆ ಮಾತ್ರ ಉಪಯೋಗ ಮಾಡಬೇಕೆಂಬ ನಿಯಮವಿದೆ. ಆದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯವರು ಯಾವುದೇ ಪರವಾನಗಿ ಪಡೆಯದೆ ಕಳೆದ ಹಲವು ವರ್ಷಗಳಿಂದ ಕುಡಿಯಲು ಬಳಕೆ ಮಾಡುತ್ತಿರುವುದರಿಂದ ರೈತರ ಕೃಷಿಗೆ ತೊಂದರೆಯಾಗಿದೆ. ಮೇಲಾಗಿ ಈಗಾಗಲೇ 2 ಟಿಎಂಸಿ ನೀರನ್ನು ಕಳಸಾ ಬಂಡೂರಿ ನಾಲಾ ಹಳ್ಳಗಳಿಂದ ಪಡೆದುಕೊಳ್ಳಬೇಕೆಂದು ನ್ಯಾಯಾಲಯ ಅವರಿಗೆ ಹೇಳಿದರೂ ಕೂಡ ಪಾಲಿಕೆಯವರು ಹಳ್ಳದ ನೀರು ಪಡೆಯದೆ ಜಲಾಶಯದಲ್ಲಿ ಸಂಗ್ರಹವಿರುವ ನೀರನ್ನು ಬಳಕೆ ಮಾಡುಕೊಳ್ಳುತ್ತಿದ್ದಾರೆ. ಈಗಾಗಲೇ ನಾವು ಪಾಲಿಕೆಯ ಆಯುಕ್ತರಗೆ ಮತ್ತು ಸರ್ವ ಸದಸ್ಯರನ್ನು ಭೇಟಿ ಮಾಡಿ ನೀವು ಹಳ್ಳದ ನೀರನ್ನು ಬಳಕೆ ಮಾಡಿಕೊಳ್ಳಬೇಕು. ಇಲ್ಲಿಯವರೆಗೆ ಹುಬ್ಬಳ್ಳಿ-ಧಾರವಾಡಕ್ಕೆ ಎಷ್ಟು ನೀರು ಪೂರೈಕೆಯಾಗಿದೆ ಎಂದು ಲೆಕ್ಕ ಕೊಡಿ, ಅದೇ ಹಣವನ್ನು ಸದ್ಯ ಬರಗಾಲದಿಂದ ತತ್ತರಿಸಿದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಪರಿಹಾರವಾಗಿ ನೀಡಬೇಕು ಎಂದು ತಿಳಿಸಿದರು.

ನಮಗೆ ಆಯುಕ್ತರು ಮತ್ತು ಸದಸ್ಯರು ಯಾವುದೇ ಉತ್ತರ ನೀಡಿಲ್ಲ. ಆದ್ದರಿಂದ ನಾವು ದಸರಾ ಹಬ್ಬದ ನಂತರ ಪಾಲಿಕೆ ಮುಂದೆ ಧರಣಿ ಪ್ರಾರಂಭ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.

ಸರ್ಕಾರ ವಿಳಂಬ ಮಾಡದೆ ಬರಗಾಲದಿಂದ ತೊಂದರೆಗೆ ಸಿಲುಕಎ್ದೆ ರೈತರಿಗೆ ಪ್ರತಿ 1ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಶಿವಪ್ಪ ಹೊರಕೇರಿ, ಗುರು ರಾಯನಗೌಡ್ರ, ಮಲ್ಲಣ್ಣ ಓಲೇಕಾರ, ವೀರಭಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ, ರಾಘವೇಂದ್ರ ಗುಜಮಾಗಡಿ, ಪಾರವ್ವ ಘಾಳಿ, ಸುಭಾಸ ಗಿರಿಯಣ್ಣವರ, ಬಾಬು ಹಿರೇಹೊಳಿ, ಶಂಕರಗೌಡ ಶಿರಿಯಪ್ಪಗೌಡ್ರ, ಯಲ್ಲಪ್ಪ ಚಲವಣ್ಣವರ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಇರಲಿ: ಡಿಸಿ ಶ್ರೀಧರ್
ಪಂಚಪೀಠಗಳು ಜ್ಞಾನ, ಸಂಸ್ಕಾರ ನೀಡುವ ಕೇಂದ್ರ; ರಂಭಾಪುರಿ ಶ್ರೀ